ಭಾರತ ಟಿ-ಟ್ವೆಂಟಿ ತಂಡಕ್ಕೆ ರೋಹಿತ್ ಶರ್ಮಾ ನಾಯಕ ಆಗ್ಬೇಕು ಎಂದ ಇಂಗ್ಲೆಂಡ್ ಆಟಗಾರ
ಭಾರತ ಟೆಸ್ಟ್, ಟಿ-ಟ್ವೆಂಟಿ ಹಾಗೂ ಏಕದಿನ ತಂಡಗಳಿಗೆ ಬೇರೆ ಬೇರೆ ನಾಯಕರನ್ನು ಆಯ್ಕೆ ಮಾಡಬೇಕು ಎನ್ನುವುದು ಹಲವು ಸಮಯದಿಂದ ಚರ್ಚೆಯಾಗುತ್ತಿದೆ. ಟಿ-ಟ್ವೆಂಟಿ ಹಾಗೂ ಏಕದಿನ ತಂಡಗಳಿಗೆ ರೋಹಿತ್ ಶರ್ಮಾ ನಾಯಕರಾಗವುದು ಸೂಕ್ತ ಮತ್ತು ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕರಾಗಿ ಮುಂದುವರಿಯುವುದು ಸೂಕ್ತ ಎಂಬ ಅಭಿಪ್ರಾಯ ಬಲವಾಗಿತ್ತು.
ಇದೀಗ, ಭಾರತ ಟಿ-ಟ್ವೆಂಟಿ ತಂಡಕ್ಕೆ ರೋಹಿತ್ ಶರ್ಮಾ ನಾಯಕರಾಗಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಹಿಟ್‌ಮ್ಯಾನ್ ಟ್ವೆಂಟಿ ಟ್ವೆಂಟಿ ಪಂದ್ಯವನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ, ಪಂದ್ಯವನ್ನು ಹೇಗೆ ಗೆಲ್ಲಿಸಬೇಕು ಎಂದು ಅರಿತುಕೊಂಡಿದ್ದಾರೆ. ಕೊಹ್ಲಿ ಬದಲಿಗೆ ರೋಹಿತ್ ಭಾರತ ತಂಡ ಮುನ್ನಡೆಸುವುದು ಸೂಕ್ತ ಇಂಗ್ಲೆಂಡ್ ತಂಡದ ಮಾಜಿ ನಾಯಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ....

ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್
ಐದನೇ ಬಾರಿ ಐಪಿಎಲ್ ಟ್ರೋಪಿ ಎತ್ತಿ ಹಿಡಿದ ರೋಹಿತ್ ಶರ್ಮಾ ದೇಶಿಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ ನಾಯಕತ್ವವೇ ದೊಡ್ಡ ಬಲ ಎಂದು ಕ್ರಿಕೆಟ್ ದಿಗ್ಗಜರು ಅಭಿಪ್ರಾಯಪಟ್ಟಿದ್ದಾರೆ. ಸುರೇಶ್ ರೈನಾ, ವೀರೇಂದ್ರ ಸೆಹ್ವಾಗ್ ಅವರು ರೋಹಿತ್ 'ಗ್ರೇಟ್ ಲೀಡರ್' ಎಂದಿದ್ದಾರೆ. ಇದೀಗ, ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಸಹ ರೋಹಿತ್ ನಾಯಕತ್ವದ ಪರ ಬ್ಯಾಟ್ ಬೀಸಿದ್ದಾರೆ.

ಟಿ-ಟ್ವೆಂಟಿ ತಂಡಕ್ಕೆ ರೋಹಿತ್ ಸೂಕ್ತ ನಾಯಕ
''ಮರುಪ್ರಶ್ನೆಯಿಲ್ಲದೇ ಭಾರತ ಟಿ-ಟ್ವೆಂಟಿ ತಂಡಕ್ಕೆ ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಬೇಕು. ಅವರೊಬ್ಬ ಅದ್ಭುತ ನಾಯಕ ಹಾಗೂ ಮ್ಯಾನ್ ಮ್ಯಾನೇಜರ್. ಟಿ-ಟ್ವೆಂಟಿ ಪಂದ್ಯವನ್ನು ಹೇಗೆ ಗೆಲ್ಲಬೇಕು ಎಂದು ಅವರು ಚೆನ್ನಾಗಿ ಬಲ್ಲರು. ಈ ಬೆಳವಣಿಗೆಯಿಂದ ವಿರಾಟ್ ಕೊಹ್ಲಿ ಸಹ ಸ್ವಲ್ಪ ಆರಾಮಾಗಬಹುದು. ಇದು ಜಗತ್ತಿನ ಎಲ್ಲ ತಂಡಗಳಿಗೂ ವರ್ಕೌಟ್ ಆಗುತ್ತದೆ'' ಎಂದು ಮೈಕಲ್ ವಾನ್ ಟ್ವೀಟ್ ಮಾಡಿದ್ದಾರೆ.

ಭಾರತ ತಂಡದ ಉಪನಾಯಕ
ಪ್ರಸ್ತುತ ಭಾರತದ ಏಕದಿನ ಮತ್ತು ಟಿ ಟ್ವೆಂಟಿ ತಂಡಗಳಲ್ಲಿ ರೋಹಿತ್ ಶರ್ಮಾ ಉಪನಾಯಕರಾಗಿದ್ದಾರೆ. ಟೆಸ್ಟ್ ತಂಡದಲ್ಲಿ ಅಂಜಿಕ್ಯ ರಹಾನೆ ಉಪನಾಯಕರಾಗಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಏಕದಿನ ಮತ್ತು ಟಿ ಟ್ವೆಂಟಿ ತಂಡಗಳಿಂದ ರೋಹಿತ್ ಅವರನ್ನು ಕೈ ಬಿಟ್ಟಿದ್ದು ಟೆಸ್ಟ್ ತಂಡಕ್ಕೆ ಮಾತ್ರ ಆಯ್ಕೆ ಮಾಡಲಾಗಿದೆ.

ಐಪಿಎಲ್ ಶ್ರೇಷ್ಠ ನಾಯಕ
ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಐದು ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರರ ಪೈಕಿ ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ ಬಳಿಕ ಮೂರನೇ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ಪರವಾಗಿ 155 ಪಂದ್ಯಗಳನ್ನು ಆಡಿರುವ ರೋಹಿತ್ ಇಡೀ ಟೂರ್ನಿಯಲ್ಲಿ 200 ಪಂದ್ಯವನ್ನಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications