ರೋಹಿತ್ ಶರ್ಮಾಗೆ ಟಿ20 ನಾಯಕನ ಪಟ್ಟ: ಮಾಜಿ ಕ್ರಿಕೆಟಿಗನ ಅಭಿಮತ

ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಇತ್ತೀಚೆಗೆ ತಮ್ಮ ನಾಯಕತ್ವದ ಸಾಧನೆಗೆ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಐಪಿಎಲ್‌ನಲ್ಲಿನ ಸಾಧನೆ ರೋಹಿತ್ ಶರ್ಮಾ ಅವರನ್ನು ಅತ್ಯುತ್ತಮ ನಾಯಕ ಎಂಬ ಚರ್ಚೆಗೆ ದೊಡ್ಡ ಧ್ವನಿಯಾಗಿದೆ. ಈ ಚರ್ಚೆಯ ಮಧ್ಯೆ ಮತ್ತೊಂದು ಅಭಿಪ್ರಾಯ ಕೇಳಿ ಬಂದಿದೆ.
ಈ ಚರ್ಚೆಗೆ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ರೋಹಿತ್ ಶರ್ಮಾ ಅವರನ್ನು ರಾಷ್ಟ್ರೀಯ ತಂಡದ ನಾಯಕನನ್ನಾಗಿ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಅಭಿಮಾನಿಗಳು ಈಗಾಗಲೇ ಈ ಬಗ್ಗೆ ಸಾಕಷ್ಟು ಚರ್ಚೆಯನ್ನು ನಡೆಸಿದ್ದಾರೆ. ಈ ಚರ್ಚೆಗೆ ಪೂರಕವಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರೊಬ್ಬರು ಧ್ವನಿ ಸೇರಿಸಿದ್ದಾರೆ. ಕನಿಷ್ಟ ಟಿ20ಯಲ್ಲಾದರೂ ಶರ್ಮಾ ನಾಯಕನಾಗಿಲಿ ಎಂದು ಅವರು ಹೇಳಿದ್ದಾರೆ.

ರೋಹಿತ್ ಶರ್ಮಾ ನಾಯಕನಾಗಲಿ
ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಅತುಲ್ ವಾಸನ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕನಿಷ್ಟ ಟಿ20 ಮಾದರಿಯಲ್ಲಾದರೂ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರೋಹಿತ್ ಸಹಜ ಪ್ರವೃತ್ತಿಯ ನಾಯಕ
ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಎಲ್ಲಾ ಮಾದರಿಯಲ್ಲು ನಾಯಕನಾಗಿ ಮುಂದಿವರಿಯಲು ಬಯಸಬಹುದು. ಆದರೆ ರೋಹಿತ್ ಶರ್ಮಾ ಅವರು ತಾನೊಬ್ಬ ಸಹಜ ಪ್ರವೃತ್ತಿಯ ನಾಯಕ ಎಂದು ಸಾಭೀತು ಪಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಬಾಸ್, ಏಕದಿನದಲ್ಲಿ ಕನಿಷ್ಟ ಮುಂದಿನ ಮುಂದಿನ ವಿಶ್ವಕಪ್‌ವರೆಗೆ ವಿರಾಟ್ ಮುಂದುವರಿಯಲಿ. ಆದರೆ ಟಿ20 ಕ್ರಿಕೆಟ್‌ನಲ್ಲಿ ನಾಯಕತ್ವವನ್ನು ರೋಹಿತ್ ಶರ್ಮಾಗೆ ಬಿಟ್ಟುಕೊಡುವುದು ಒಳ್ಳೆಯದು ಎಂದಿದ್ದಾರೆ ಅತುಲ್ ವಾಸನ್.

ಐಪಿಎಲ್‌ನಲ್ಲಿ ರೋಹಿತ್ ಸಾಬೀತು
ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಸಂಚಲನ ಮೂಡಿಸುವ ಜೊತೆಗೆ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಅತ್ಯಂತ ಯಶಸ್ವೀ ನಾಯಕ ಎಂಬುದನ್ನು ಸಾಬೀತು ಮಾಡಿದ್ದಾರೆ. ನಾಯಕನಾಗಿ ಮುಂಬೈ ಇಂಡಿಯನ್ಸ್‌ಗೆ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಪಟ್ಟವನ್ನು ತಂದುಕೊಟ್ಟಿದ್ದಾರೆ. ಹೀಗಾಗಿ ರೋಹಿತ್ ಪರವಾಗಿ ಅಭಿಮಾನಿಗಳು ಕೂಡ ಈ ಮಾತಿಗೆ ಬೆಂಬಲವನ್ನು ಸೂಚಿಸುತ್ತಿದ್ದಾರೆ.

ಯಾವುದೇ ಪ್ರಮುಖ ಟೂರ್ನಿ ಗೆದ್ದಿಲ್ಲ ವಿರಾಟ್
ನಾಯಕನಾಗಿ ವಿರಾಟ್ ಕೊಹ್ಲಿ ರಾಷ್ಟ್ರೀಯ ತಂಡದ ಪರವಾಗಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಆದರೆ ಈವರೆಗೂ ಯಾವುದೇ ವಿಶ್ವ ಮಟ್ಟದ ಪ್ರಮುಖ ಟೂರ್ನಿಯನ್ನು ಗೆಲ್ಲಲು ವಿರಾಟ್‌ಗೆ ನಾಯಕನಾಗಿ ಸಾಧ್ಯವಾಗಿಲ್ಲ. ಹೀಗಾಗಿ ರೋಹಿತ್ ಶರ್ಮಾಗೆ ನಾಯಕತ್ವ ನೀಡಬೇಕು ಎಂಬ ಮಾತುಗಳು ಜೋರಾಗಿ ಕೇಳಿಸುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications