ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಐಸಿಸಿ ಮೆಗಾ ಟೂರ್ನಿಗೂ ಮುನ್ನ ಲಯಕ್ಕೆ ಮರಳುತ್ತಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಉಪನಾಯಕ ಶುಭಮನ್ ಗಿಲ್ ಫಾರ್ಮ್ ಕಂಡುಕೊಂಡಿದ್ದಾರೆ. ಈ ಮೂಲಕ ಚಾಂಪಿಯನ್ಸ್ ಟ್ರೋಫಿಗೆ ತಾವು ರೆಡಿ ಯಾಗಿರುವುದಾಗಿ ತಿಳಿಸಿದ್ದಾರೆ. ಕಟಕ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಆರಂಭಿಕ ಜೋಡಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆಯಿತು. ಈಗ ಮೂರನೇ ಏಕದಿನ ಪಂದ್ಯಕ್ಕೆ ಸಿದ್ಧತೆಗಳು ನಡೆದಿವೆ. ಈ ಜೋಡಿ ಚಾಂಪಿಯನ್ಸ್ ಟ್ರೋಫಿಯಲ್ಲಿ ದೊಡ್ಡ ದಾಖಲೆ ಬರೆಯಲಿದೆ.
ಇಂಗ್ಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಸ್ಪರ್ಧಾತ್ಮಕ ಮೊತ್ತವನ್ನು ಚೇಸ್ ಮಾಡಿದಗ ತೋರಿದ ಧೈರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಇಬ್ಬರು ಆಟಗಾರರು ಮೈಚಳಿ ಬಿಟ್ಟು ಬ್ಯಾಟಿಂಗ್ ಮಾಡಿದ್ದಾರೆ. ಕಟಕ್‌ನಲ್ಲಿ ಈ ಜೋಡಿ ಮೊದಲ ವಿಕೆಟ್‌ಗೆ 136 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದೆ. ಈ ವೇಳೆ ಶುಭಮನ್ ಗಿಲ್ 50 ಎಸೆತಗಳಲ್ಲಿ 9 ಬೌಂಡರಿ ನೆರವಿನಿಂದ 60 ರನ್ ಸಿಡಿಸಿದ್ದಾರೆ. ಇನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ಕ್ಲಾಸಿಕ್ ಬ್ಯಾಟಿಂಗ್ ನೆರವಿನಿಂದ 90 ಎಸೆತಗಳಲ್ಲಿ 12 ಬೌಂಡರಿ, 7 ಸಿಕ್ಸರ್ ಸಹಯಾದಿಂದ 119 ರನ್ ಸಿಡಿಸಿ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ.

ಈ ಜೋಡಿ ಏಕದಿನ ಕ್ರಿಕೆಟ್‌ನಲ್ಲಿ ಮಹತ್ವದ ಮೈಲಿಗಲ್ಲು ತಲುಪುವ ಹತ್ತಿರದಲ್ಲಿದೆ. ಈ ಜೋಡಿ ವೇಗವಾಗಿ ಈ ಫಾರ್ಮೆಟ್‌ನಲ್ಲಿ ಎರಡು ಸಾವಿರ ರನ್ ಕಲೆ ಹಾಕುವತ್ತ ದೃಷ್ಟಿ ನೆಟ್ಟಿದೆ. ಈ ಜೋಡಿ ಭಾರತದ ಪರ 26 ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದಿದ್ದು, 74.72ರ ಸರಾಸರಿಯಲ್ಲಿ 1868 ರನ್‌ಗಳನ್ನು ಕಲೆ ಹಾಕಿದೆ. ಏಕದಿನ ಫಾರ್ಮೆಟ್‌ನಲ್ಲಿ ಈ ಜೋಡಿ 6 ಶತಕ ಹಾಗೂ 11 ಅರ್ಧಶತಕದ ಜೊತೆಯಾಟದ ಕಾಣಿಕೆ ನೀಡಿದೆ. ಈ ಜೋಡಿ 2 ಸಾವಿರ ರನ್‌ಗಳ ಗಡಿಯನ್ನು ಪಾರು ಮಾಡಲು ಇನ್ನು 132 ರನ್ ಅವಶ್ಯಕತೆ ಇದೆ. ಇಷ್ಟ ರನ್‌ಗಳನ್ನು ರೋಹಿತ್- ಗಿಲ್ ಮೂರನೇ ಪಂದ್ಯದಲ್ಲಿ ಮಾಡಬಹುದು. ಒಂದು ವೇಳೆ ಮಾಡುವಲ್ಲಿ ವಿಫಲರಾದಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೆಗಾ ರೆಕಾರ್ಡ್ ನಿರ್ಮಿಸಬಹುದು.

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಇನ್ನೊಂದು ಪಂದ್ಯವನ್ನು ಆಡುವ ಅವಕಾಶ ಭಾರತ ತಂಡದ ಆಟಗಾರರಿಗೆ ಇದೆ. ಈ ವೇಳೆ ರೋಹಿತ್ ಹಾಗೂ ಗಿಲ್ ತಮ್ಮ ಅಮೋಘ ಫಾರ್ಮ್ ಮುಂದುವರೆಸುವ ಅವಶ್ಯಕತೆ ಇದೆ. ಅಂದಾಗ ಮಾತ್ರ ಎದುರಾಳಿಗಳಿಗೆ ಕಾಡಲು ಅನಿವಾರ್ಯವಾಗಲಿದೆ. ಇನ್ನು ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಲಯ ಕಂಡು ಕೊಳ್ಳಲಿ ಟೀಮ್ ಮ್ಯಾನೇಜ್ಮೆಂಟ್ ನೆಮ್ಮದಿಯ ನಿದ್ದೆಗೆ ಜಾರಬಹುದು. ಇಲ್ಲದೇ ಇದ್ದಲ್ಲಿ ವಿರಾಟ್ ಕೊಹ್ಲಿಯ ಫಾರ್ಮ್ ಚಿಂತೆಯನ್ನು ನಿದ್ದೆ ಗೆಡಿಸಲಿದೆ.