ಟೀಕೆಗಳಿಗೆ ಮೈದಾನದಲ್ಲಿ ಉತ್ತರ ನೀಡಿದ ರೋಹಿತ್ ಬರೆದ ದಾಖಲೆಗಳ ಪಟ್ಟಿ
ತಮ್ಮ ಮೇಲಿನ ಟೀಕೆಗಳಿಗೆ ಹೇಗೆ ಉತ್ತರ ನೀಡಬೇಕು ಎಂಬುದನ್ನು ಕರಗತ ಮಾಡಿಕೊಂಡಿರುವ ರೋಹಿತ್ ಶರ್ಮಾ, ಆಸ್ಟ್ರೇಲಿಯಾದಲ್ಲಿ ತಮ್ಮ ಧಮಾಕೆದಾರ್ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಆಡಿಲೇಡ್‌ನಲ್ಲಿ ಆಡಿದ ಧಾಟಿಯಲ್ಲೇ ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ಬ್ಯಾಟ್ ಮಾಡಿದ ರೋಹಿತ್, ಆಕರ್ಷಕ ಬ್ಯಾಟಿಂಗ್‌ನಿಂದ ತಂಡಕ್ಕೆ ನೆರವಾದರು. ಅಲ್ಲದೆ ತಮ್ಮ ಏಕದಿನ ಕ್ರಿಕೆಟ್ ವೃತ್ತಿ ಜೀವನದ ಶತಕಗಳ ಸಂಖ್ಯೆಗೆ ಮತ್ತೊಂದು ಶತಕವನ್ನು ಸೇರಿಸಿದರು.
ಆಸ್ಟ್ರೇಲಿಯಾಕ್ಕೆ ಟೀಮ್ ಇಂಡಿಯಾ ಪ್ರವಾಸ ಆರಂಭಿಸುವ ಮುನ್ನ, ಈ ಪ್ರವಾಸ ರೋಹಿತ್ ಶರ್ಮಾ ಅವರಿಗೆ ಕೊನೆಯ ಅವಕಾಶ ಎಂದೇ ಹೇಳಲಾಗುತ್ತಿತ್ತು. ಆದರೆ ಕೊನೆಯ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ರೋಹಿತ್ ಶರ್ಮಾ, ತೋರಿಸಿಕೊಟ್ಟಿದ್ದಾರೆ. ಪರ್ತ್‌ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ರೋಹಿತ್, ಆಡಿಲೇಡ್‌ನಲ್ಲಿ ಲಯ ಕಂಡುಕೊಂಡು ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಮೂರನೇ ಏಕದಿನ ಪಂದ್ಯದಲ್ಲಿ ತಮ್ಮ ನೈಜ್ಯ ಆಟವನ್ನು ಆಡಿದ ರೋಹಿತ್ ತಮ್ಮ ಏಕದಿನ ವೃತ್ತಿ ಜೀವನದ 33ನೇ ಶತಕವನ್ನು ಬಾರಿಸಿ ಮಿಂಚಿದರು.

50ನೇ ಶತಕ
ಈ ಒಂದು ಶತಕದ ಮೂಲಕ ರೋಹಿತ್ ಶರ್ಮಾ ತಮ್ಮ ಕ್ರಿಕೆಟ್ ಜೀವನದಲ್ಲಿ ಮತ್ತೊಂದು ಮೈಲಿಗಲ್ಲು ಮುಟ್ಟಿದರು. ತಮ್ಮ ವೃತ್ತಿ ಜೀವನದ 502ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ರೋಹಿತ್ 50 ಶತಕವನ್ನು ಸಿಡಿಸಿದರು. ಈ ಮೂಲಕ ರೋಹಿತ್ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರ ದಾಖಲೆಯನ್ನು ಮೀರಿ ನಿಂತರು. ಡೇವಿಡ್ ವಾರ್ನರ್ 383 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 49 ಶತಕವನ್ನು ಸಿಡಿಸಿದ್ದರು. ರೋಹಿತ್ ಸಿಡ್ನಿಯಲ್ಲಿ ಶತಕ ಬಾರಿಸುವ ಮೂಲಕ ವಾರ್ನರ್ ದಾಖಲೆಯನ್ನು ಮೀರಿ ನಿಂತರು.
ವಿರಾಟ್ ದಾಖಲೆ ಅಳಿಸಿದ ರೋಹಿತ್
ಸಿಡ್ನಿ ಅಂಗಳದಲ್ಲಿ ರೋಹಿತ್ ಶರ್ಮಾ ಬಾರಿಸಿದ ಅಮೋಘ ಶತಕದ ನೆರವಿನಿಂದ ರೋಹಿತ್ ಶರ್ಮಾ ಆಸ್ಟ್ರೇಲಿಯಾದಲ್ಲಿ ಮತ್ತೊಂದು ದಾಖಲೆ ಬರೆದರು. ಕಾಂಗರೂ ನಾಡಿನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ವಿದೇಶಿ ಬ್ಯಾಟರ್ ಎಂಬ ಹೆಗ್ಗಳಿಕೆ ಈಗ ರೋಹಿತ್ ಶರ್ಮಾ ಪಾಲಾಗಿದೆ. ಇವರು 5 ಶತಕ ಬಾರಿಸಿರುವ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ. ರೋಹಿತ್ ಸಿಡ್ನಿಯಲ್ಲಿ ಶತಕ ಬಾರಿಸುವ ಮೂಲಕ ಆಸೀಸ್ ನೆಲದಲ್ಲಿ 6ನೇ ಶತಕ ಪೂರೈಸಿದರು.
ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಚೇಸ್ ಮಾಡುವಾಗ 17ನೇ ಶತಕ ಬಾರಿಸಿ ಮಿಂಚಿದರು. ಈ ಮೂಲಕ ತಮ್ಮಲ್ಲಿ ಇನ್ನು ಬ್ಯಾಟಿಂಗ್ ಕ್ಷಮತೆ ಇದೆ ಎಂಬುದನ್ನು ಸಾರಿ ಹೇಳಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ರೋಹಿತ್ ಶರ್ಮಾ ಅವರ 50 ನೇ ಶತಕವಾಗಿದ್ದು, ಈ ಮೈಲಿಗಲ್ಲು ತಲುಪಿದ ಮೂರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ 33 ಶತಕ, ಟೆಸ್ಟ್‌ನಲ್ಲಿ 12 ಶತಕ, ಟಿ20 ಅಂತಾರಾಷ್ಟ್ರೀಯ 5 ಶತಕ ಬಾರಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಮೈಲಿಗಲ್ಲು ತಲುಪಿದ ವಿಶ್ವದ 10 ನೇ ಆಟಗಾರ ಎಂಬ ಹೆಗ್ಗಳಿಕೆ ರೋಹಿತ್ ಪಾಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications