For Quick Alerts
ALLOW NOTIFICATIONS  
For Daily Alerts
 

IND vs NZ: ಗಂಭೀರ್ ಹೇಳಿಕೆಗೆ ಟಾಂಗ್ ಕೊಟ್ಟ ರೋಹಿತ್ ಶರ್ಮಾ

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ಟಾಸ್‌ ಕೂಡ ವಿಳಂಬವಾಗಿದೆ. ಸತತ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಎಡೆಬೆಡದೆ ಮಳೆ ಸುರಿಯುತ್ತಿದೆ. ಮುಂದಿನ ಐದು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾ ಆಗಬಹುದು.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ತಂಡದ ರೋಹಿತ್ ಮತ್ತು ಹೆಡ್‌ಕೋಚ್ ಗೌತಮ್ ಗಂಭೀರ್ ಪತ್ರಿಕಾಗೋಷ್ಠಿಯ ನಡೆಸಿದ್ದಾರೆ. ಈ ಪತ್ರಿಕಾಗೋಷ್ಠಿಯ ನಂತರ ಇಬ್ಬರ ಮಧ್ಯೆ ಇರುವ ಭಿನ್ನಾಭಿಪ್ರಾಯ ಬಹಿರಂಗವಾಗಿದೆ. ಅಕ್ಟೋಬರ್ 14 ರಂದು, ಗಂಭೀರ್ ಪತ್ರಿಕಾಗೋಷ್ಠಿ ನಡೆಸಿ ಹಿಟ್‌ಮ್ಯಾನ್‌ಗೆ ನೋವುಂಟು ಮಾಡುವ ವಿಷಯದ ಬಗ್ಗೆ ಮಾತನಾಡಿದ್ದರು. ಮರುದಿನ ಅಕ್ಟೋಬರ್ 15ರಂದು ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಶರ್ಮಾ ಅವರು ಗಂಭೀರ್ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.

Rohit Sharma spoke against Gautam Gambhir statement

ಗಂಭೀರ್ ಹೇಳಿದ್ದೇನು?

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೆ ಎರಡು ದಿನ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಗೌತಮ್ ಗಂಭೀರ್ ಅವರು ಟೀಮ್ ಇಂಡಿಯಾ ಬೌಲರ್‌ಗಳನ್ನು ಸಾಕಷ್ಟು ಹೊಗಳಿದ್ದರು. ಹೊಗಳಿದ್ದಷ್ಟೇ ಅಲ್ಲ ಮ್ಯಾಚ್ ವಿನ್ನರ್ ಎಂದೂ ಕರೆದಿದ್ದರು. ಬ್ಯಾಟರ್‌ಗಳು 1000 ರನ್ ಗಳಿಸಿದರೂ ಪಂದ್ಯ ಗೆಲ್ಲುವ ಭರವಸೆ ಇಲ್ಲ. ಬೌಲರ್‌ಗಳು 20 ವಿಕೆಟ್ ಪಡೆದರೆ ಶೇ.99 ಗೆಲ್ಲುವ ಸಾಧ್ಯತೆ ಇದೆ ಎಂದು ಗಂಭೀರ್ ಅಚ್ಚರಿ ಹೇಳಿಕೆ ನೀಡಿದ್ದರು.

ಆದರೆ ನಾಯಕ ರೋಹಿತ್ ಶರ್ಮಾ ಇದಕ್ಕೆ ತದ್ವಿರುದ್ಧವಾಗಿ ಮಾತನಾಡಿದ್ದರು. ರೋಹಿತ್ ಶರ್ಮಾ ಅಕ್ಟೋಬರ್ 14 ರಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ನಾಯಕ ತಂಡದ ಬ್ಯಾಟರ್‌ಗಳ ಪರವಾಗಿ ತಮ್ಮ ಬೆಂಬಲವನ್ನು ವ್ಯಕ್ತಪಸಿಡಿದ್ದರು. ಬೌಲಿಂಗ್‌ಗಿಂತ ಹೆಚ್ಚಿನ ಬ್ಯಾಟಿಂಗ್‌ ತಂಡಕ್ಕೆ ಮುಖ್ಯ ಎಂದು ಅವರು ತಿಳಿಸಿದ್ದರು.

'ಗೆಲುವಿಗೆ ರನ್ ಗಳಿಸುವ ಬ್ಯಾಟರ್‌‌ಗಳು ಸಹ ಬೇಕು. ಬೌಲರ್‌ಗಳಿಂದ ಮಾತ್ರ ಕೆಲಸ ನಡೆಯುತ್ತದೆ ಎಂದಲ್ಲ. ತಂಡದಲ್ಲಿ 11 ಮಂದಿ ಬಲಿಷ್ಠ ಆಟಗಾರರಿರುವುದು ಅತ್ಯಂತ ಮುಖ್ಯ. ಬ್ಯಾಟರ್‌‌ಗಳು ರನ್ ಗಳಿಸುವುದರೊಂದಿಗೆ, ಬೌಲರ್‌ಗಳು ಅವರ ಇಚ್ಛೆಯಂತೆ ಬೌಲ್ ಮಾಡಲು ಮುಕ್ತರಾಗಿದ್ದಾರೆ. ಇದನ್ನು ನೀವು ವಿಭಿನ್ನವಾಗಿ ನೋಡಿದರೆ, ನಿಮಗೆ ವಿಕೆಟ್ ಪಡೆಯುವ ಮತ್ತು ಪಂದ್ಯಗಳನ್ನು ಗೆಲ್ಲುವ ಅಂತಹ ಬೌಲರ್‌ಗಳು ಬೇಕು ಎನಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರ ಸಂಯೋಜನೆಯ ಅಗತ್ಯವಿದೆ' ಎಂದು ಗಂಭೀರ್‌ ಹೇಳಿಕೆ ಪರೋಕ್ಷವಾಗಿ ರೋಹಿತ್ ಶರ್ಮಾ ಟಾಂಗ್ ಕೊಟ್ಟಿದ್ದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

Story first published: Wednesday, October 16, 2024, 12:19 [IST]
Other articles published on Oct 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+