ಇಂಡಿಯಾ vs ಆಸ್ಟ್ರೇಲಿಯಾ: NCAನಲ್ಲಿ ತರಬೇತಿ ಆರಂಭಿಸಿದ ರೋಹಿತ್ ಶರ್ಮಾ

ಆಸ್ಟ್ರೇಲಿಯಾ ಪ್ರವಾಸದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ರೋಹಿತ್ ಶರ್ಮಾ ತರಬೇತಿಗಾಗಿ ಗುರುವಾರ ಬೆಂಗಳೂರಿಗೆ ಬಂದಿಳಿದಿದ್ದಾರೆ. ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ರೋಹಿತ್ ಶರ್ಮಾ ತಮ್ಮ ತರಬೇತಿಯನ್ನು ಆರಂಭಿಸಿದ್ದಾರೆ.
ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಆಯ್ಕೆಯಾಗಿಲ್ಲ. ಆರಂಭದಲ್ಲಿ ಗಾಯದ ಕಾರಣವನ್ನು ನೀಡಿ ಟೆಸ್ಟ್ ಸರಣಿಯ ತಂಡದಿಂದಲೂ ಅವರನ್ನು ಹೊರಗಿಡಲಾಗಿತ್ತು. ಆದರೆ ಐಪಿಎಲ್‌ನಲ್ಲಿ ಶರ್ಮಾ ಕಣಕ್ಕಿಳಿದ ಬಳಿಕ ಹೊಸ ಆಟಗಾರರ ಪಟ್ಟಿಯಲ್ಲಿ ರೊಹಿತ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಯಿಂದ ಮೊದಲ ಪಂದ್ಯದ ಬಳಿಕ ತವರಿಗೆ ವಾಪಾಸಾಗುವ ಕಾರಣ ರೊಹಿತ್ ಶರ್ಮಾ ಅವರ ಫಿಟ್‌ನೆಸ್ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಫಿಟ್‌ನೆಸ್ ಸಾಬೀತುಪಡಿಸಿದ ಬಳಿಕ ರೋಹಿತ್ ಆಸ್ಟ್ರೇಲಿಯಾಗೆ ಪ್ರಯಾಣಿಸಲಿದ್ದಾರೆ.
ಐಪಿಎಲ್ ಮುಕ್ತಾಯದ ಬಳಿಕ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ಎಲ್ಲರೂ ಯುಎಇಯಿಂದ ನೇರವಾಗಿ ಆಸ್ಟ್ರೇಲಿಯಾಗೆ ಪ್ರಯಾಣಿಸಿದ್ದರು. ರೊಹಿತ್ ಶರ್ಮಾ ಫಿಟ್‌ನೆಸ್ ಸಾಭೀತುಪಡಿಸುವ ಕಾರಣ ತವರಿಗೆ ವಾಪಾಸಾಗಿ ಕುಟುಂಬದಂದಿಗೆ ಕೆಲ ಕಾಲ ಕಳೆದಿದ್ದಾರೆ. ದೀಪಾವಳಿ ಆಚರಣೆಯ ಬಳಿಕ ಇದೀಗ ಎನ್‌ಸಿಎ ಸೇರಿಕೊಂಡಿದ್ದಾರೆ.
ಇದಕ್ಕೂ ಮುನ್ನ ಬುದವಾರ ಇಶಾಂತ್ ಶರ್ಮಾ ಕೂಡ ಎನ್‌ಸಿಎನಲ್ಲಿ ತರಬೇತಿಯನ್ನು ಆರಂಭಿಸಿದ್ದಾರೆ. ಇಶಾಂತ್ ಶರ್ಮಾ ಕೂಡ ಐಪಿಎಲ್‌ನಲ್ಲಿ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದರು. ರೋಹಿತ್ ಶರ್ಮಾ ಹಾಗೂ ಇಶಾಂತ್ ಶರ್ಮಾ ಇಬ್ಬರೂ ಜೊತೆಯಾಗಿ ಆಸ್ಟ್ರೇಲಿಯಾಗೆ ಪ್ರಯಾಣವನ್ನು ಬೆಳೆಸಲಿದ್ದು ತಂಡವನ್ನು ಸೇರಿಕೊಳ್ಳವ ಮುನ್ನ 14 ದಿನಗಳ ಕ್ವಾರಂಟೈನ್ ಪೂರೈಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications