IND vs SL: ವಾಷಿಂಗ್ಟನ್ ಸುಂದರ್‌ಗೆ ಹೊಡೆಯಲು ಓಡೋಡಿ ಬಂದ ರೋಹಿತ್ ಶರ್ಮಾ; ವಿಡಿಯೋ ವೈರಲ್!
ಆಗಸ್ಟ್ 5 ಸೋಮವಾರ, ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಸೋತಿದೆ. ಈ ಗೆಲುವಿನೊಂದಿಗೆ ಶ್ರೀಲಂಕಾ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಸರಣಿಯ ಮೊದಲ ಪಂದ್ಯ ಟೈ ಆಗಿತ್ತು.
ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಲಂಕಾ ತಂಡದ ನಾಯಕ ಚರಿತ್ ಅಸಲಂಕಾ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಶ್ರೀಲಂಕಾ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 240 ರನ್ ಗಳಿಸಿತು. ಟೀಮ್ ಇಂಡಿಯಾ ಪರ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಗರಿಷ್ಠ 3 ವಿಕೆಟ್ ಪಡೆದು ಮಿಂಚಿದರು.

ಈ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಲಂಕಾ ಬೌಲಿಂಗ್ ದಾಳಿಗೆ ಮಂಕಾಯಿತು. ಪರಿಣಾಮ ಭಾರತ 45.3 ಓವರ್‌ಗಳಲ್ಲಿ 210 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ಶ್ರೀಲಂಕಾ 32 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು.
ಲಂಕಾ ಕಾಡಿದ ಸುಂದರ್
ಲಂಕಾ ಬ್ಯಾಟರ್ಸ್‌ಗೆ ವಾಷಿಂಗ್ಟನ್ ಸುಂದರು ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಸಾಕಷ್ಟು ಕಾಟ ನೀಡಿದರು.ಈ ಟೀಮ್ ಇಂಡಿಯಾ ಸ್ಪಿನ್ನರ್ ಮೊದಲು ಅವಿಷ್ಕಾ ಫರ್ನಾಂಡೊ ಅವರನ್ನು ಔಟ್ ಮಾಡಿದರು. ಬಳಿಕ ತಮ್ಮದೆ ಬೌಲಿಂಗ್ ಸಮಯದಲ್ಲಿ ಅವಿಷ್ಕಾ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು.
ಇದಾದ ನಂತರ ಸುಂದರ್ ಕೂಡ ಕುಸಾಲ್ ಮೆಂಡಿಸ್ ಅವರನ್ನು ಎಲ್ ಬಿಡಬ್ಲ್ಯೂ ಬಲೆಗೆ ಬೀಳಿಸುವಲ್ಲಿ ಸುಂದರ್ ಪಾಸ್ ಆದರು. 35ನೇ ಓವರ್‌ನಲ್ಲಿ ಸುಂದರ್ ಮೂರನೇ ವಿಕೆಟ್ ಪಡೆದು ಸಂಭ್ರಮಿಸಿದರು. ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಅವರ ಕ್ಯಾಚ್ ಅನ್ನು ಅಕ್ಸರ್ ಪಟೇಲ್ ಪಡೆದರು.
ಹೊಡಿಯಲು ಬಂದ ರೋಹಿತ್
ಶ್ರೀಲಂಕಾ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ವಿಚಿತ್ರ ಘಟನೆಯೊಂದು ನಡೆಯಿತು. ನಾಯಕ ರೋಹಿತ್ ಶರ್ಮಾ ಅವರ ಫನ್ನಿ ಸ್ಟೈಲ್ ಮತ್ತೆ ಮುನ್ನೆಲೆಗೆ ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಡು ವೈರಲ್ ಆಗುತ್ತಿದೆ.
ಪಂದ್ಯದ ವೇಳೆ, ಸುಂದರ್ ಒಂದು ಓವರ್‌ನಲ್ಲಿ ಎರಡು ಬಾರಿ ರನ್‌ಅಪ್ ಆರಂಭಿಸಿದ ನಂತರ ಚೆಂಡನ್ನು ಬೌಲ್ ಮಾಡಲು ಸಾಧ್ಯವಾಗಲಿಲ್ಲ. ಸುಂದರ್ ಬೌಲಿಂಗ್ ಮಾಡುವಾಗ ಪಾಪಿಂಗ್ ಕ್ರೀಸ್ ತಲುಪಿದ ನಂತರ ನಿಂತು ಬಿಟ್ಟರು.
ಇದೇ ಮೊದಲ ಬಾರಿಗೆ ಸ್ಲಿಪ್‌ನಲ್ಲಿ ನಿಂತಿದ್ದ ರೋಹಿತ್ ಶರ್ಮಾ ದೂರದಿಂದಲೇ ಏನೋ ಹೇಳಿದರು. ಬಳಿಕ ಸುಂದರ ಮತ್ತೆ ಬೌಲಿಂಗ್ ಮಾಡಲು ಮುಂದಾದಾಗ, ಅವರು ಮತ್ತೆ ಪಾಪಿಂಗ್ ಕ್ರೀಸ್‌ನಲ್ಲಿ ನಿಂತರು. ಈ ವೇಳೆ ರೋಹಿತ್ ಶರ್ಮಾ ಅವರಿಂದ ವಿಚಿತ್ರವೊಂದು ಕಾಣಿಸಿಕೊಂಡಿತ್ತು.
ಎರಡು ಬಾರಿ ಪಾಪಿಂಗ್ ಕ್ರೀಸ್ ಬಳಿ ನಿಂತ ಸುಂದರ್ ಅವರನ್ನು ಹೊಡೆಯಲು ರೋಹಿತ್ ಶರ್ಮಾ ಸ್ಲಿಪ್‌ನಿಂದ ಓಡಿ ಮುಂದೆ ಬಂದರು. ಇದನ್ನು ನೋಡಿದ ವಿಕೆಟ್‌ಕೀಪರ್ ಕೆಎಲ್ ರಾಹುಲ್ ಅಂತೂ ಒಂದು ಕ್ಷಣ ಶಾಕ್ ಆಗಿದ್ದರು.
ಆದರೆ ಕೆಲವು ಹೆಜ್ಜೆಗಳ ನಂತರ ರೋಹಿತ್ ಹಿಂತಿರುಗಿದರು. ರೋಹಿತ್ ಅವರ ಈ ತಮಾಷೆಯ ಶೈಲಿ ಸಹಾ ಆಟಗಾರರು ನಗುವಂತೆ ಮಾಡಿತ್ತು. ಸುಂದರ್ ಕೂಡ ರೋಹಿತ್ ಅವರನ್ನು ನೋಡಿ ನಗತೊಡಗಿದರು. ವೈರಲ್ ಅಗಿರುವ ಹಿಟ್‌ಮ್ಯಾನ್ ಅವರ ಈ ವಿಡಿಯೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications