ಭಾರತ vs ದ.ಆಫ್ರಿಕಾ: ನಾಯಕನಾಗಿ ಆಯ್ಕೆಯಾಗಿರುವ ರೋಹಿತ್ ಅಭಿಮಾನಿಗಳ ಪಾಲಿಗಿದು ಕಹಿಸುದ್ದಿ

ಇತ್ತೀಚಿಗಷ್ಟೇ ಯುಎಇಯಲ್ಲಿ ಮುಕ್ತಾಯಗೊಂಡ ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಹಂತವನ್ನು ತಲುಪಲಾಗದೇ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದ ಟೀಮ್ ಇಂಡಿಯಾ ಈ ಟೂರ್ನಿ ಮುಗಿದ ಬೆನ್ನಲ್ಲೇ ಭಾರತ ಪ್ರವಾಸವನ್ನು ಕೈಗೊಂಡ ನ್ಯೂಜಿಲೆಂಡ್ ವಿರುದ್ಧ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಜಯಭೇರಿ ಬಾರಿಸಿತು. ಹೀಗೆ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಮತ್ತು ಟೆಸ್ಟ್ ಎರಡೂ ಸರಣಿಗಳನ್ನೂ ವಶಪಡಿಸಿಕೊಂಡ ಟೀಮ್ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲು ಸಜ್ಜಾಗಿದ್ದು 3 ಪಂದ್ಯಗಳ ಟೆಸ್ಟ್ ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಹರಿಣಗಳ ವಿರುದ್ಧ ಸೆಣಸಾಟ ನಡೆಸಲಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮೊದಲಿಗೆ ಟೆಸ್ಟ್ ಸರಣಿ ನಡೆಯಲಿದ್ದು, ಇತ್ತಂಡಗಳ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯ ಡಿಸೆಂಬರ್ 26ರಂದು ಆರಂಭವಾಗಲಿದೆ. ಹೀಗೆ ಇತ್ತಂಡಗಳ ನಡುವೆ ಮೊದಲು ನಡೆಯಲಿರುವ ಟೆಸ್ಟ್ ಸರಣಿಗೆ ಬಿಸಿಸಿಐ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಿದ್ದು 18 ಆಟಗಾರರನ್ನು ಹೆಸರಿಸಿದೆ. ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಅಜಿಂಕ್ಯ ರಹಾನೆ ಬದಲಾಗಿ ರೋಹಿತ್ ಶರ್ಮಾ ಭಾರತ ಟೆಸ್ಟ್ ತಂಡದ ಉಪನಾಯಕನ ಸ್ಥಾನಕ್ಕೇರಿದ್ದಾರೆ.
ಹೌದು, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಪ್ರಕಟವಾಗಿರುವ ಭಾರತ ತಂಡದ ಮೂಲಕ ರೋಹಿತ್ ಶರ್ಮಾ ಉಪ ನಾಯಕನಾಗಿ ಆಯ್ಕೆಯಾಗಿದ್ದು, ಇದಕ್ಕೂ ಮುನ್ನ ಬಿಸಿಸಿಐ ಭಾರತ ಏಕದಿನ ತಂಡದ ಕುರಿತು ಮಹತ್ವದ ಘೋಷಣೆಯೊಂದನ್ನು ಮಾಡುವುದರ ಮೂಲಕ ರೋಹಿತ್ ಶರ್ಮಾ ಹೆಗಲಿಗೆ ಭಾರತ ಏಕದಿನ ತಂಡದ ನಾಯಕತ್ವವನ್ನು ಹಾಕಿದೆ. ಈ ಮೂಲಕ ಇತ್ತೀಚಿಗಷ್ಟೆ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದ್ದ ವಿರಾಟ್ ಕೊಹ್ಲಿ ಇದೀಗ ಭಾರತ ಏಕದಿನ ತಂಡದ ನಾಯಕತ್ವವನ್ನು ಕೂಡ ಕಳೆದುಕೊಂಡಿದ್ದು, ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿ ಮೂಲಕ ಭಾರತ ಟ್ವೆಂಟಿ ತಂಡದ ನಾಯಕನಾಗಿದ್ದ ರೋಹಿತ್ ಶರ್ಮಾ ಈಗ ಭಾರತ ಏಕದಿನ ತಂಡದ ನಾಯಕನಾಗಿ ಕೂಡ ಆಯ್ಕೆಯಾಗಿದ್ದಾರೆ. ಹೀಗೆ ವೈಟ್ ಬಾಲ್ ಕ್ರಿಕೆಟ್‍ನ ಎರಡೂ ಮಾದರಿಗಳಿಗೂ ನೂತನ ನಾಯಕನಾಗಿ ಆಯ್ಕೆಯಾಗಿರುವ ರೋಹಿತ್ ಶರ್ಮಾ ಗಾಯದ ಸಮಸ್ಯೆಗೆ ಒಳಗಾಗಿರುವುದರ ಕುರಿತಾಗಿ ಈ ಕೆಳಕಂಡಂತೆ ಸುದ್ದಿಗಳು ಹರಿದಾಡುತ್ತಿದೆ.

ಅಭ್ಯಾಸದ ವೇಳೆ ರೋಹಿತ್ ಕೈಗೆ ತಾಗಿದ ಚೆಂಡು
ಭಾರತ ಏಕದಿನ ಮತ್ತು ಟಿ ಟ್ವೆಂಟಿ ತಂಡಗಳಿಗೆ ಪೂರ್ಣಾವಧಿ ನಾಯಕನಾಗಿ ಆಯ್ಕೆಯಾಗಿರುವ ರೋಹಿತ್ ಶರ್ಮಾ ಮುಂಬರಲಿರುವ ದಕ್ಷಿಣ ಆಫ್ರಿಕಾ ಪ್ರವಾಸದ ಸಲುವಾಗಿ ಮುಂಬೈನ ಶರದ್ ಪವಾರ್ ಅಕಾಡೆಮಿಯಲ್ಲಿ ತಂಡದ ಆಟಗಾರರಾದ ಅಜಿಂಕ್ಯ ರಹಾನೆ ಮತ್ತು ಕೆ ಎಲ್ ರಾಹುಲ್ ಜತೆ ಅಭ್ಯಾಸ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಭಾರತ ತಂಡದ ಥ್ರೋಡೌನ್ ತಜ್ಞ ರಾಘವೇಂದ್ರ ಅವರು ಎಸೆದ ಎಸೆತ ರೋಹಿತ್ ಶರ್ಮಾ ಅವರ ಕೈಗೆ ಬಲವಾಗಿ ಬಡಿದಿದೆ. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ತೀವ್ರ ನೋವಿಗೆ ಒಳಗಾದರು ಎಂದು ವರದಿಯಾಗಿದೆ. ಹೀಗೆ ಚೆಂಡು ಬಲವಾಗಿ ಕೈಗೆ ತಾಗಿದ ಕಾರಣ ನೋವಿಗೊಳಗಾದ ಕಾರಣ ರೋಹಿತ್ ಶರ್ಮಾ ಅಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದು ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದ ಮೇಲೆ ಪ್ರಭಾವ ಬೀರಲಿದೆಯಾ ಈ ಘಟನೆ
ಅಭ್ಯಾಸದ ವೇಳೆ ಕೈಗೆ ಚೆಂಡು ಬಲವಾಗಿ ತಾಗಿರುವ ಕಾರಣದಿಂದಾಗಿ ಅಭ್ಯಾಸವನ್ನು ರೋಹಿತ್ ಶರ್ಮಾ ಅರ್ಧಕ್ಕೆ ಮೊಟಕುಗೊಳಿಸಿರುವುದು ಸದ್ಯ ರೋಹಿತ್ ಅಭಿಮಾನಿಗಳ ಪಾಲಿಗೆ ಕಹಿ ಸುದ್ದಿಯಾಗಿ ಪರಿಣಮಿಸಿದೆ. ರೋಹಿತ್ ಶರ್ಮಾಗೆ ಚೆಂಡು ಬಲವಾಗಿ ತಾಗಿದೆಯಾ ಹಾಗೂ ಇದರಿಂದ ರೋಹಿತ್ ಗಾಯಕ್ಕೊಳಗಾಗಿರುವ ಸಂಭವವಿದೆಯಾ ಎಂಬ ಆತಂಕ ಇದೀಗ ರೋಹಿತ್ ಶರ್ಮಾ ಅಭಿಮಾನಿಗಳಲ್ಲಿ ಮೂಡಿದೆ. ಆದರೆ, ಅಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ ರೋಹಿತ್ ಶರ್ಮಾ ಸ್ಥಳದಲ್ಲಿ ನೆರೆದಿದ್ದ ತಮ್ಮ ಅಭಿಮಾನಿಗಳಿಗೆ ನಗುಮೊಗದೊಂದಿಗೆ ಸೆಲ್ಫಿ ನೀಡಿದ್ದು ಮಾತ್ರ ರೋಹಿತ್ ಅಭಿಮಾನಿಗಳ ಪಾಲಿಗೆ ಕೊಂಚ ಸಮಾಧಾನವನ್ನು ತಂದಿದೆ.

ಏಕದಿನ ನಾಯಕನಾಗಿ ರೋಹಿತ್ ಅಂಕಿ ಅಂಶ
ರೋಹಿತ್ ಶರ್ಮಾ ಇದುವರೆಗೂ ಒಟ್ಟು 10 ಏಕದಿನ ಪಂದ್ಯಗಳಲ್ಲಿ ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, ಈ ಪಂದ್ಯಗಳ ಪೈಕಿ ಭಾರತ 8 ಪಂದ್ಯಗಳಲ್ಲಿ ಗೆದ್ದಿದ್ದು, ಕೇವಲ 2 ಪಂದ್ಯಗಳಲ್ಲಿ ಸೋತಿದೆ. 2018ರಲ್ಲಿ ನಡೆದ ಏಷ್ಯಾ ಕಪ್ ಟೂರ್ನಮೆಂಟ್ ವೇಳೆ ವಿರಾಟ್ ಕೊಹ್ಲಿ ತಂಡದಿಂದ ಹೊರಗುಳಿದು ವಿಶ್ರಾಂತಿ ಪಡೆದಿದ್ದ ಕಾರಣ ಭಾರತ ತಂಡವನ್ನು ಈ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅವರೇ ಮುನ್ನಡೆಸಿ ಯಶಸ್ವಿಯಾಗಿ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications