ವಿಶ್ವಕಪ್ ಇತಿಹಾಸದಲ್ಲಿ ಸಚಿನ್ ದಾಖಲೆ ಹಿಂದಿಕ್ಕಿದ್ದಲ್ಲದೆ, 2023ರಲ್ಲಿ 1000 ಏಕದಿನ ರನ್ ಗಳಿಸಿದ ರೋಹಿತ್ ಶರ್ಮಾ
ಭಾನುವಾರ, ಅಕ್ಟೋಬರ್ 29ರಂದು ಲಕ್ನೋದಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಿತು.
ಇದೇ ವೇಳೆ 36 ವರ್ಷದ ರೋಹಿತ್ ಶರ್ಮಾ ಅವರು 2023ರಲ್ಲಿ ಏಕದಿನ ಪಂದ್ಯಗಳಲ್ಲಿ 1000 ರನ್ ಪೂರ್ಣಗೊಳಿಸಿದ ಎರಡನೇ ಭಾರತೀಯ ಬ್ಯಾಟರ್ ಎನಿಸಿದರು.

ನಾಗ್ಪುರ ಮೂಲದ ರೋಹಿತ್ ಶರ್ಮಾ ಈ ಸಾಧನೆಗೆ 31 ರನ್‌ಗಳ ಕೊರತೆಯನ್ನು ಹೊಂದಿದ್ದರು. ಅಷ್ಟು ರನ್ ಗಳಿಸುತ್ತಿದ್ದಂತೆಯೇ ಸುಲಭವಾಗಿ ಆ ಮೈಲಿಗಲ್ಲು ತಲುಪಿದರು. ಇದಕ್ಕೂ ಮೊದಲು ಶುಭ್ಮನ್ ಗಿಲ್ 2023ರಲ್ಲಿ 1000 ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿದ್ದರು.
ಶ್ರೀಲಂಕಾದ ಪಾಥುಮ್ ನಿಸ್ಸಾಂಕಾ ಕೂಡ ಈ ವಿಶ್ವಕಪ್ ಪಂದ್ಯಾವಳಿಯ ಆವೃತ್ತಿಯಲ್ಲಿ ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ 1000 ರನ್‌ಗಳ ಮೈಲಿಗಲ್ಲನ್ನು ತಲುಪಿದ್ದಾರೆ.
ವಿರಾಟ್ ಕೊಹ್ಲಿ ಕೂಡ 1000 ರನ್ ಗಳಿಸುವ ಅವಕಾಶವನ್ನು ಹೊಂದಿದ್ದರು. ಏಕೆಂದರೆ ಅವರು ಈ ಸಾಧನೆಗೆ ಕೇವಲ 34 ರನ್ ಅವಶ್ಯಕತೆ ಇತ್ತು. ಆದರೆ, ಭಾರತದ ಮಾಜಿ ನಾಯಕ ಡೇವಿಡ್ ವಿಲ್ಲಿಗೆ ಡಕ್‌ಗೆ ಔಟಾದರು. ಶಾಟ್ ಬಾಲ್ ಬಾರಿಸಲು ಹೋಗಿ ಮಿಡ್-ಆಫ್‌ನಲ್ಲಿ ಬೆನ್ ಸ್ಟೋಕ್ಸ್ ಕ್ಯಾಚ್ ನೀಡಿದರು.

ಸಚಿನ್ ತೆಂಡೂಲ್ಕರ್ ಹಿಂದಿಕ್ಕಿದ ರೋಹಿತ್ ಶರ್ಮಾ
ರೋಹಿತ್ ಶರ್ಮಾ ಎಲ್ಲಾ ವೈಟ್‌ಬಾಲ್ ಕ್ರಿಕೆಟ್‌ನ ವಿಶ್ವಕಪ್‌ಗಳಲ್ಲಿ ಭಾರತೀಯ ಬ್ಯಾಟರ್‌ಗಳ ಪಟ್ಟಿಯಲ್ಲಿ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.
ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ 45 ವಿಶ್ವಕಪ್ ಪಂದ್ಯಗಳಿಂದ 56.95ರ ಸರಾಸರಿಯಲ್ಲಿ 88.98ರ ಸ್ಟ್ರೈಕ್ ರೇಟ್‌ನೊಂದಿಗೆ 2278 ರನ್ ಗಳಿಸಿದ್ದಾರೆ. ಅವರು ಆರು ಶತಕಗಳು ಮತ್ತು 15 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಇನ್ನು 59 ವಿಶ್ವಕಪ್ ಪಂದ್ಯಗಳಿಂದ 63.12ರ ಸರಾಸರಿ ಮತ್ತು 102.76ರ ಸ್ಟ್ರೈಕ್ ರೇಟ್‌ನಲ್ಲಿ 2525 ರನ್ ಗಳಿಸಿರುವ ವಿರಾಟ್ ಕೊಹ್ಲಿ ಭಾರತದ ಪರ ಅಗ್ರ ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ.
ರೋಹಿತ್ ಶರ್ಮಾ ಅವರು ವಿಶ್ವಕಪ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈ ಅನುಭವಿ ವಿಶ್ವಕಪ್‌ನಲ್ಲಿ ಭಾರತೀಯ ಬ್ಯಾಟರ್‌ನಿಂದ ವೇಗದ ಶತಕವನ್ನು ಗಳಿಸಿದರು ಮತ್ತು 1983ರಲ್ಲಿ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದರು.
ಅದೇ ಪಂದ್ಯದಲ್ಲಿ ರೋಹಿತ್ ಶರ್ಮಾ 50 ಓವರ್‌ಗಳ ವಿಶ್ವಕಪ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಮುರಿದರು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಒಂದೇ ಕ್ಯಾಲೆಂಡರ್ ವರ್ಷದಲ್ಲಿ 50 ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications