Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನದ ಇಂಜಮಾಮ್‌ ಉಲ್‌ ಹಕ್‌ ದಾಖಲೆ ಅಳಿಸಿದ Rohit Sharma

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಎರಡನೇ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಭಾರತದ ಆರಂಭಿಕರಾದ ರೋಹಿತ್ ಶರ್ಮಾ (Rohit Sharma) ಹಾಗೂ ನಾಯಕ ಶುಭಮನ್‌ ಗಿಲ್‌ ಜೋಡಿ 44 ರನ್‌ಗಳ ಜೊತೆಯಾಟವನ್ನು ನೀಡಿತು.

ನಾಯಕ ಶುಭಮನ್‌ ಗಿಲ್‌ 6 ಬೌಂಡರಿ ನೆರವಿನಿಂದ 31 ರನ್‌ ಬಾರಿಸಿ ಔಟ್ ಆದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ರೋಹಿತ್ ಶರ್ಮಾ 1 ಬೌಂಡರಿ, 1 ಸಿಕ್ಸರ್ ಸಹಿತ 26 ರನ್‌ ಬಾರಿಸಿ ಮಿಂಚಿದರು. ರೋಹಿತ್ ಶರ್ಮಾ ಎರಡನೇ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರೂ ಸಹ ಏಕದಿನ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯನ್ನು ನಿರ್ಮಿಸಿದರು.

Rohit Sharma

ಏಕದಿನ ಕ್ರಿಕೆಟ್‌ನಲ್ಲಿ ಅನುಭವಿ ರೋಹಿತ್ ಶರ್ಮಾ ಅವರು ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೇರಿದ್ದಾರೆ. ಈ ಚಿಕ್ಕ ಇನಿಂಗ್ಸ್‌ನೊಂದಿಗೆ ರೋಹಿತ್‌ ಶರ್ಮಾ, ಪಾಕಿಸ್ತಾನ ದಿಗ್ಗಜ ಆಟಗಾರ ಇಂಜಮಾಮ್ ಉಲ್ ಹಕ್ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಇಂಜಮಾಮ್‌ ಉಲ್‌ ಹಕ್‌ ಪಾಕ್‌ ಪರ 378 ಏಕದಿನ ಪಂದ್ಯಗಳ 350 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿ 39ರ ಸರಾಸರಿಯಲ್ಲಿ 11739 ರನ್‌ ಸಿಡಿಸಿದ್ದಾರೆ. ಈ ದಾಖಲೆಯನ್ನು ರೋಹಿತ್ ಶರ್ಮಾ ಅಳಿಸಿ ಹಾಕಿದ್ದಾರೆ.

ಅರ್ಜೆಂಟೀನಾ ಫೈನಲ್‌ಗೆ ಪ್ರವೇಶಿಸುತ್ತಲೇ ಲಿಯೋನೆಲ್‌ ಮೆಸ್ಸಿ ವಿಶೇಷ ಕ್ಲಬ್‌ಗೆ ಎಂಟ್ರಿ

ಅರ್ಜೆಂಟೀನಾ ಫೈನಲ್‌ಗೆ ಪ್ರವೇಶಿಸುತ್ತಲೇ ಲಿಯೋನೆಲ್‌ ಮೆಸ್ಸಿ ವಿಶೇಷ ಕ್ಲಬ್‌ಗೆ ಎಂಟ್ರಿ

ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಆಡಿದ 287 ಪಂದ್ಯಗಳ 279 ಇನಿಂಗ್ಸ್‌ಗಳಲ್ಲಿ 48ರ ಸರಾಸರಿಯಲ್ಲಿ 11757 ರನ್‌ ಕಲೆ ಹಾಕಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಟೀಮ್ ಇಂಡಿಯಾ ದಿಗ್ಗಜ ಬ್ಯಾಟರ್‌ ಸಚಿನ್ ತೆಂಡೂಲ್ಕರ್‌ ಇದ್ದು, ಇವರು ಆಡಿದ 463 ಇನಿಂಗ್ಸ್‌ಗಳಲ್ಲಿ 18426 ರನ್‌ ಕಲೆ ಹಾಕಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ವಿರಾಟ್‌ ಕೊಹ್ಲಿ ಇದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ಸ್‌

ಸಚಿನ್ ತೆಂಡೂಲ್ಕರ್‌ (ಭಾರತ), 18426 ರನ್‌
ವಿರಾಟ್‌ ಕೊಹ್ಲಿ (ಭಾರತ), 14837 ರನ್‌
ಕುಮಾರ್‌ ಸಂಗಾಕ್ಕರ (ಶ್ರೀಲಂಕಾ), 14234 ರನ್‌
ರಿಕ್ಕಿ ಪಾಂಟಿಂಗ್‌ (ಆಸ್ಟ್ರೇಲಿಯಾ), 13704 ರನ್‌
ಸನತ್‌ ಜಯಸೂರ್ಯ (ಶ್ರೀಲಂಕಾ), 13430 ರನ್
ಮಹೇಲ್‌ ಜಯವರ್ಧನೆ (ಶ್ರೀಲಂಕಾ), 12650 ರನ್‌
ರೋಹಿತ್ ಶರ್ಮಾ (ಭಾರತ), 11757 ರನ್‌

FIFA World Cup 2026: ಕೊನೆಯ ಕ್ಷಣದಲ್ಲಿ ಅರ್ಜೆಂಟೀನಾ ಮ್ಯಾಜಿಕ್‌: ಫೈನಲ್‌ ಪ್ರವೇಶಿಸಿ ಮೆಸ್ಸಿ ಪಡೆ

FIFA World Cup 2026: ಕೊನೆಯ ಕ್ಷಣದಲ್ಲಿ ಅರ್ಜೆಂಟೀನಾ ಮ್ಯಾಜಿಕ್‌: ಫೈನಲ್‌ ಪ್ರವೇಶಿಸಿ ಮೆಸ್ಸಿ ಪಡೆ

ರೋಹಿತ್ ಶರ್ಮಾ ಸಾಧನೆ

39 ವರ್ಷದ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಮುಂದಿನ ಬಾರಿ ಏಕದಿನ ವಿಶ್ವಕಪ್ ಆಡುವ ಇರಾದೆಯನ್ನು ಹೊಂದಿದ್ದಾರೆ. ಇವರು ಈಗಾಗಲೇ ಟಿ20 ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈಗ ಇವರು ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಬ್ಯಾಟ್ ಮಾಡುತ್ತಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಇವರು 3 ಬಾರಿ ದ್ವಿಶತಕ ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಅಲ್ಲದೆ 33 ಶತಕ ಹಾಗೂ 62 ಅರ್ಧಶತಕ ಸಿಡಿಸಿದ್ದಾರೆ.

Story first published: Thursday, July 16, 2026, 19:33 [IST]
Other articles published on Jul 16, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+