IPL 2025: 3 ತಂಡಗಳಿಂದ 3 ಪ್ಲೇಯರ್‌ಗೆ ಬಿಗ್ ಡೀಲ್!: ಆರ್‌ಸಿಬಿ ತೆಕ್ಕೆಗೆ ಯಾರು?
ಐಪಿಎಲ್ 2025ರ ಹರಾಜು ನಡೆಯಬೇಕಿದೆ. ಇದಕ್ಕೂ ಮೊದಲು ಐಪಿಎಲ್ ತಂಡಗಳ ಮಾಲೀಕರು ರಿಟೇನ್ ಹಾಗೂ ರಿಲೀಸ್ ಪ್ಲೇಯರ್‌ಗಳ ಲೀಸ್ಟ್‌ನ್ನು ಐಪಿಎಲ್ ಮ್ಯಾನೇಜ್ಮೆಂಟ್‌ಗೆ ಕಳುಹಿಸಬೇಕಿದೆ. ಈಗಾಗಲೇ ಎಲ್ಲ ತಂಡಗಳು ತೆರೆಯ ಮರೆಯಲ್ಲಿ ಭರ್ಜರಿ ಕಸರತ್ತು ನಡೆಸಿವೆ. ಯಾರನ್ನು ಇಟ್ಟುಕೊಳ್ಳುವುದು ಹಾಗೂ ಯಾರನ್ನು ಕೈ ಬಿಡುವುದು ಎಂಬುದೇ ತಂಡಗಳಿಗೆ ಟೆನ್ಷನ್ ಶುರುವಾಗಿದೆ.
ಆರ್‌ಸಿಬಿ ಸಹ 18ನೇ ಆವೃತ್ತಿಯ ಐಪಿಎಲ್‌ಗೆ ಭರ್ಜರಿ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಅಳೆದು ತೂಗಿ ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಆರ್‌ಸಿಬಿ ಮುಂದಾಗಿದೆ. ಇದೇ ವೇಳೆ ಆರ್‌ಸಿಬಿ ಆಕ್ಷನ್‌ನಲ್ಲಿ ಯಾರನ್ನು ಖರೀದಿಸಬೇಕು ಎಂಬ ಲೆಕ್ಕಾಚಾರಗಳು ಆರಂಭವಾಗಿವೆ. ಫಾಫ್ ಡುಪ್ಲೇಸಿಸ್ ಬದಲಿಗೆ ಆರ್‌ಸಿಬಿ ಒಬ್ಬ ಒಳ್ಳೆಯ ನಾಯಕನ ಗುಣ ಹೊಂದಿರುವ ಆಟಗಾರನನ್ನು ನೋಡುತ್ತಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಚಾಂಪಿಯನ್ ನಾಯಕನಿಗೆ ಬಾಜಿ ಕಟ್ಟಲು ಮುಂದಾಗಿದೆ.

ಆರ್‌ಸಿಬಿ ಸೇರುವುದು ಯಾರು?
ಆರ್‌ಸಿಬಿ ಫಾಫ್ ಡುಪ್ಲೇಸಿಸ್ ಅವರನ್ನು ಕೈ ಬಿಡುವ ಸಾಧ್ಯತೆಗಳು ಇವೆ. ಇವರ ಬದಲಿಗೆ ಒಳ್ಳೆಯ ನಾಯಕನ ಹುಡುಕಾಟದಲ್ಲಿ ಆರ್‌ಸಿಬಿ ಇದೆ. ಸದ್ಯ ಮುಂಬೈ ಇಂಡಿಯನ್ಸ್‌ನಲ್ಲಿರುವ ರೋಹಿತ್ ಶರ್ಮಾ ಅವರಿಗೆ ತಂಡದ ಮೇಲೆ ಅಸಮಾಧಾನ ಇದೆ. ಇದನ್ನೇ ಬಂಡವಾಳ ಮಾಡಿಕೊಂಡು ಆರ್‌ಸಿಬಿ ಶತಾಯಗತಾಯ ರೋಹಿತ್‌ರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಪ್ಲ್ಯಾನ್ ಹೆಣೆದುಕೊಂಡಿದೆ.
ರೋಹಿತ್ ಅವರನ್ನು ಮುಂಬೈ ಇಂಡಿಯನ್ಸ್ ರಿಲೀಸ್ ಮಾಡಿದ್ದೇ ಆದಲ್ಲಿ, ರೋಹಿತ್ ಹರಾಜಿನಲ್ಲಿ ಭಾರೀ ಮೊತ್ತವನ್ನು ಗಳಿಸಲಿದ್ದಾರೆ. ಅಲ್ಲದೆ ರೋಹಿತ್ ಶರ್ಮಾ ಒಬ್ಬ ಬಿಗ್ ಪ್ಲೇಯರ್.. ದೊಡ್ಡ ತಂಡಗಳತ್ತವೇ ಇವರ ಚಿತ್ತ ನೆಟ್ಟಿರುತ್ತದೆ. ಒಂದು ವೇಳೆ ಆರ್‌ಸಿಬಿ ತಂಡಕ್ಕೆ ರೋಹಿತ್ ಶರ್ಮಾ ಬಂದಿದ್ದೇ ಆದಲ್ಲಿ, ಆರ್‌ಸಿಬಿ ಚಾಂಪಿಯನ್ ಪಟ್ಟದ ಕನಸು ಕಾಣಬಹುದು.

ವಿರಾಟ್, ರೋಹಿತ್ ಸ್ನೇಹಿತರು
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಒಳ್ಳೆಯ ಸ್ನೇಹಿತರು. ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಹೇಗೆ ಮಾಡಬೇಕು ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ರೋಹಿತ್, ವಿರಾಟ್ ಆರ್‌ಸಿಬಿ ಪರ ಇನ್ನಿಂಗ್ಸ್ ಆರಂಭಿಸಿದ್ದೇ ಆದಲ್ಲಿ ಇದಕ್ಕಿಂತ ಬೇರೆ ಒಳ್ಳೆಯ ಸುದ್ದಿ ಅಭಿಮಾನಿಗಳಿಗೆ ಸಿಗಲು ಚಾನ್ಸ್ ಇಲ್ಲವೇ ಇಲ್ಲ.
ಸೂರ್ಯಕುಮಾರ್ ಮೇಲೆ ಯಾರ ಕಣ್ಣು?
ಸೂರ್ಯಕುಮಾರ್ ಯಾದವ್ ಸಹ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾರೆ. ಮುಂಬೈ ಇವರನ್ನು ಆಕ್ಷನ್‌ಗೆ ರಿಲೀಸ್ ಮಾಡಿದ್ದೇ ಆದಲ್ಲಿ ಕೋಟಿ ಕೋಟಿ ರೂಪಾಯಿಗಳನ್ನು ಬಾಚಿಕೊಳ್ಳುತ್ತಾರೆ. ಇವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಲಕ್ನೋ ಸೂಪರ್ ಜೈಂಟ್ಸ್ ಪ್ಲ್ಯಾನ್ ಮಾಡಿಕೊಂಡಿದೆ.

ಎಲ್‌ಎಸ್‌ಜಿ ತಂಡ ತನ್ನ ಸದ್ಯದ ನಾಯಕ ಕೆ.ಎಲ್ ರಾಹುಲ್ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಎಲ್‌ಎಸ್‌ಜಿ ಸಹ ಉತ್ತಮ ನಾಯಕನ ಹುಡುಕಾಟದಲ್ಲಿದೆ. ಅಲ್ಲದೆ ಸೂರ್ಯಕುಮಾರ್ ಯಾದವ್ ಲಕ್ನೋ ತಂಡವನ್ನು ಸೇರಿದರೆ, ತಂಡದ ಬ್ರ್ಯಾಂಡ್ ವ್ಯಾಲ್ಯೂ ಸಹ ಹೆಚ್ಚಾಗುತ್ತದೆ.
ರಿಂಕು ಸಿಂಗ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮ್ಯಾಚ್ ಫಿನಿಶರ್.. ಮಿಡ್ಲ್ ಆರ್ಡರ್‌ನಲ್ಲಿ ಭರ್ಜರಿ ಆಗಿ ಬ್ಯಾಟ್ ಮಾಡುವ ರಿಂಕು ಸಿಂಗ್ ಅವರನ್ನು ಕೋಲ್ಕತ್ತ ನೈಟ್ ರೈಡರ್ಸ್ ರಿಲೀಸ್ ಮಾಡಿದಲ್ಲಿ, ಇವರಿಗೂ ಕೋಟಿ ಕೋಟಿ ರೂಪಾಯಿ ಬಿಡ್ ನಡೆಯಲಿದೆ. ರಿಂಕು ಅವರನ್ನು ಸೆಳೆದು ಕೊಳ್ಳಲು ಹಲವು ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಕೆಕೆಆರ್ ರಿಂಕು ಸಿಂಗ್ ಅವರನ್ನು ರಿಲೀಸ್ ಮಾಡುತ್ತದಾ ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications