For Quick Alerts
ALLOW NOTIFICATIONS  
For Daily Alerts
 

ವೀವ್ ರಿಚರ್ಡ್ಸ್ ಟು ವಿರಾಟ್ ಕೊಹ್ಲಿ: ಐಸಿಸಿ ಬೆಸ್ಟ್ 'ಪುಲ್‌ಶಾಟ್' ಪ್ರಶ್ನೆಗೆ ರೋಹಿತ್ ಅಸಮಾಧಾನ

Rohit Sharma Takes Dig At Icc Over Best Pull Shot Tweet

ವಿಶ್ವಾದ್ಯಂತ ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಎಲ್ಲಾ ಕ್ರೀಡಾಕೂಟಗಳು ಮುಂದೂಡಿಕೆಯಾಗಿದೆ. ಕೆಲವು ಕ್ರೀಡಾಕೂಟಗಳನ್ನಂತು ರದ್ದೇ ಮಾಡಲಾಗಿದೆ. ಹೀಗಾಗಿ ಆಟಗಾರರಿಗೆ ಮಾತ್ರವಲ್ಲ ಕ್ರೀಡಾ ಸಂಸ್ಥೆಗಳೂ ಕೈಕಟ್ಟಿ ಕೂರುವಂತೆ ಮಾಡಿದೆ.

ಕ್ರೀಡಾಕೂಟಗಳು ಇಲ್ಲದಿರುವ ಕಾರಣ ಕ್ರೀಡಾ ವಾಹಿನಿಗಳು ನೇರಪ್ರಸಾರಕ್ಕೆ ಯಾವುದೇ ವಿಷಯಗಳು ಇಲ್ಲದೆ ಹಳೇ ಪಂದ್ಯಗಳನ್ನು ಮರುಪ್ರಸಾರ ಮಾಡಿ ಸಮಯ ತುಂಬಿಸಲೇಬೇಕಾದ ಅನಿವಾರ್ಯತೆಗಳು ಉಂಟಾಗಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಂತೂ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ನಾನಾ ಸರ್ಕಸ್‌ ಮಾಡಬೇಕಾದ ಪರಿಸ್ಥಿತಿ ಕ್ರೀಡಾ ಸಂಸ್ಥೆಗಳಿಗಿದೆ.

ಇದೇ ಹಿನ್ನೆಲೆಯಲ್ಲಿ ವೀಕ್ಷಕರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಐಸಿಸಿ ಪ್ರಶ್ನೋತ್ತರಗಳನ್ನು ಏರ್ಪಡಿಸಿ ವೀಕ್ಷಕರನ್ನು ಹಿಡಿದಿಡುವ ಪ್ರಯತ್ನ ಮಾಡುತ್ತಿದೆ. ಈ ಸಂದರ್ಭದಲ್ಲಿ ಫೋಟೋ ಸಹಿತ ಕೇಳಿದ ಪ್ರಶ್ನೆಯೊಂದು ಟೀಮ್ ಇಂಡಿಯಾ ಆಟಗಾರ ರೋಹಿತ್ ಶರ್ಮಾರನ್ನು ಅಸಮಾಧಾನಗೊಳ್ಳುವಂತೆ ಮಾಡಿದೆ.

ಐಸಿಸಿ ಕೇಳಿದ ಪ್ರಶ್ನೆ

ಐಸಿಸಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪುಲ್‌ಶಾಟ್ ಕುರಿತಾಗಿ ಪ್ರಶ್ನೆಯೊಂದನ್ನು ವೀಕ್ಷಕರಲ್ಲಿ ಕೇಳಿದೆ. ವಿವಿಯನ್ ರಿಚರ್ಡ್ಸ್, ರಿಕಿ ಪಾಂಟಿಂಗ್, ಹರ್ಷಲ್ ಗಿಬ್ಸ್ ಮತ್ತು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಫುಲ್ ಶಾಟ್‌ಗಳ ಚಿತ್ರ ಕೊಲಾಜ್ ಮಾಡಿ ನಿಮಗಿಷ್ಟವಾದ ಹೊಡೆತ ಯಾವುದು ಎಂದು ಪ್ರಶ್ನೆಯನ್ನು ಕೇಳಿದೆ.

ಐಸಿಸಿಗೆ ರೋಹಿತ್ ಮರು ಪ್ರಶ್ನೆ

ಐಸಿಸಿ ಹಂಚಿಕೊಂಡ ಈ ಟ್ವೀಟ್‌ನ್ನು ರೋಹಿತ್ ರಿಟ್ವೀಟ್ ಮಾಡಿ 'ಯಾರಾದರು ಮಿಸ್ ಆಗಿದ್ದಾರಾ ಇಲ್ಲಿ? ನನಗನಿಸುತ್ತಿದೆ ಮನೆಯಿಂದ ಕೆಲಸ ಮಾಡುವುದು ಸುಲಭವಿಲ್ಲ' ಎಂದು ವ್ಯಂಗ್ಯವಾಡಿದ್ದಾರೆ. ಈ ಮೂಲಕ ತಮ್ಮ ಅಸಮಾಧಾನವನ್ನು ಕಾಲೆಳೆದು ವ್ಯಕ್ತಪಡಿಸಿದ್ದಾರೆ.

ರೋಹಿತ್ ಪುಲ್‌ಶಾ ನೋಡೋದೆ ಚಂದ

ರೋಹಿತ್ ಪುಲ್‌ಶಾ ನೋಡೋದೆ ಚಂದ

ರೋಹಿತ್ ಶರ್ಮಾ ತಮ್ಮ ಅಬ್ಬರದ ಬ್ಯಾಟಿಂಗ್ ಜೊತೆಗೆ ಪುಲ್‌ಶಾಟ್‌ಗೆ ತುಂಬಾ ಫೇಮಸ್. ರೋಹಿತ್ ಬತ್ತಳಿಕೆಯಲ್ಲಿ ಅದೆಷ್ಟೋ ಸುಂದರ ಫುಲ್ ಶಾಟ್‌ಗಳು ಇವೆ. ಆದರೆ ಐಸಿಸಿ ರೋಹಿತ್ ಶರ್ಮಾರನ್ನು ಗಣನೆಗೆ ತೆಗೆದುಕೊಂಡಿಲ್ಲ. ಇದು ರೋಹಿತ್‌ಗೂ ಅಸಮಾಧಾನವಾಗಿರಬಹುದು.

ವ್ಯಾಪಕ ಪ್ರತಿಕ್ರಿಯೆ

ವ್ಯಾಪಕ ಪ್ರತಿಕ್ರಿಯೆ

ಐಸಿಸಿ ಕೇಳಿರುವ ಈ ಪ್ರಶ್ನೆಗೆ ವ್ಯಾಪಕವಾಗಿ ಪ್ರತಿಕ್ರಿಯೆಗಳು ಬರುತ್ತಿವೆ. ಸಾವಿರಾರು ಜನರು ತಮ್ಮ ತಮ್ಮ ನೆಚ್ಚಿನ ಆಟಗಾರರ ಹೊಡೆತಗಳ ಬಗ್ಗೆ ಉತ್ತರಿಸುತ್ತಿದ್ದಾರೆ. ಅನೇಕ ಕುತೂಹಲಕಾರಿ ಪ್ರತ್ಯುತ್ತರಗಳನ್ನು ಈ ಟ್ವೀಟ್‌ಗೆ ನೀಡುತ್ತಿದ್ದಾರೆ ಕ್ರಿಕೆಟ್ ಅಭಿಮಾನಿಗಳು.

ಐಸಿಸಿ ಬಿಟ್ಟರೂ ಅಭಿಮಾನಿಗಳು ಬಿಡಲಿಲ್ಲ

ಈ ಪ್ರಶ್ನೆಯಲ್ಲಿ ಐಸಿಸಿ ರೋಹಿತ್ ಶರ್ಮಾರನ್ನು ಗಣನೆಗೆ ತೆಗೆದುಕೊಳ್ಳದೆ ಬಿಟ್ಟರೂ ಅಭಿಮಾನಿಗಳು ರೋಹಿತ್ ಶರ್ಮಾರ ಹೆಸರನ್ನು ಉತ್ತರಿಸುತ್ತಿದ್ದಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ರಿಕೊ ಪಾಂಟಿಂಗ್ ಜೊತೆಗೆ ರೋಹಿತ್ ಶರ್ಮಾ ಹೆಸರನ್ನು ಬರೆದುಕೊಂಡಿದ್ದಾರೆ.

ರೋಹಿತ್ ಶಾಟ್‌ ಟ್ವೀಟ್ ಮಾಡಿದ ಐಸಿಸಿ

ರೋಹಿತ್ ಶರ್ಮಾ ಮಾಡಿದ ಟ್ವೀಟ್‌ಗೂ ಸಾಕಷ್ಟು ಪ್ರತಿಕ್ರಿಯೆಗಳು ಬರತೊಡಗಿದವು. ಐಸಿಸಿಯನ್ನು ಅನೇಕ ಕ್ರಿಕೆಟ್ ಅಭಿಮಾನಿಗಳು ಪ್ರಶ್ನೆ ಮಾಡಲು ಆರಂಭಮಾಡಿದರು. ಈ ಸಂದರ್ಭದಲ್ಲಿ ರೋಹಿತ್ ಮಾಡಿದ ಟ್ವೀಟ್‌ಗೆ ರೋಹಿತ್ ಶರ್ಮಾ ಅವರ ಸುಂದರ ಪುಲ್‌ಶಾಟ್‌ವೊಂದರ ಜಿಫ್ ವಿಡಿಯೋವನ್ನು ಹಂಚಿಕೊಂಡಿದೆ.

Story first published: Sunday, March 22, 2020, 20:50 [IST]
Other articles published on Mar 22, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+