ವಿಶ್ವಕಪ್: ಥರ್ಡ್ ಅಂಪೈರ್‌ಗೆ ಟ್ವಿಟರ್ ಮೂಲಕ ಟಾಂಗ್ ಕೊಟ್ಟ ರೋಹಿತ್!

ಮ್ಯಾಂಚೆಸ್ಟರ್, ಜೂನ್ 28: ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿನ ವಿವಾದಾತ್ಮಕ ಔಟ್‌ಗೆ ಭಾರತದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣದ ಮೂಲಕ ನಿರಾಶೆ ಹೊರ ಹಾಕಿದ್ದಾರೆ. ಪಂದ್ಯದಲ್ಲಿ ತಾನು ನಾಟ್ ಔಟ್ ಎನ್ನುವುದನ್ನು ಸಾಭೀತುಪಡಿಸಲು ಶರ್ಮಾ ಫೋಟೋ ಟ್ವೀಟ್ ಮಾಡಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ನಲ್ಲಿ ಗುರುವಾರ (ಜೂನ್ 27) ನಡೆದಿದ್ದ ಭಾರತ vs ವೆಸ್ಟ್ ಇಂಡೀಸ್ ನಡುವಣ ವಿಶ್ವಕಪ್ ಪಂದ್ಯದಲ್ಲಿ ಶರ್ಮಾ 23 ಎಸೆತಗಳಿಗೆ 18 ರನ್ ಪೇರಿಸಿ ಓಟ್ ಆಗಿದ್ದರು. ಅಸಲಿಗೆ ಅದು ಔಟ್ ಆಗಿರಲಿಲ್ಲ. ತೀರ್ಪು ಪರಿಶೀಲನೆಗೆ ಬಳಸಿದ ಡಿಸಿಶನ್ ರಿವ್ಯೂ ಸಿಸ್ಟಮ್ (ಡಿಆರ್‌ಎಸ್)ನಿಂದಲೇ ಎಡವಟ್ಟಾಗಿತ್ತು.
5.6 ಓವರ್‌ನಲ್ಲಿ ಕೆಮರ್ ರೋಚ್ ಎಸೆತದ ವೇಳೆ ಸ್ಟ್ರೈಕ್‌ನಲ್ಲಿದ್ದ ಶರ್ಮಾ ಅವರನ್ನು ದಾಟಿ ಹೋಗಿದ್ದ ಚೆಂಡು ವಿಂಡೀಸ್ ವಿಕೆಟ್ ಕೀಪರ್ ಶಾಯ್ ಹೋಪ್ ಕೈ ಸೇರಿತ್ತು. ಆದರೆ ಅಸಲಿಗೆ ಚೆಂಡು ಬ್ಯಾಟಿಗೆ ತಾಗಿರಲಿಲ್ಲ. ಬದಲಿಗೆ ಶರ್ಮಾ ಪ್ಯಾಡ್‌ಗೆ ತಗುಲಿ ಕೀಪರ್ ಕೈ ಸೇರಿತ್ತು.
ಶೈ ಹೋಪ್, ಔಟ್‌ಗಾಗಿ ಅಪೀಲ್ ಮಾಡಿದಾಗ ಫೀಲ್ಡ್ ಅಂಪೈರ್ ರಿಚರ್ಡ್ ಇಲಿಂಗ್ವರ್ತ್ ನಾಟ್ ಔಟ್ ತೀರ್ಪು ನೀಡಿದ್ದರು. ಆದರೆ ಕೆರಿಬಿಯನ್ ಕ್ಯಾಪ್ಟನ್ ಜೇಸನ್ ಹೋಲ್ಡರ್ ರಿವ್ಯೂ ಮೊರೆ ಹೋದರು. ಆಗ ಥರ್ಟ್ ಅಂಪೈರ್ ಮೈಕೆಲ್ ಗೌಫ್ ಅವರು ಸ್ನಿಕೋ ಮೀಟರ್ ಗಮನಿಸಿ, ಚೆಂಡು ಬ್ಯಾಟ್ ತಾಗಿದೆಯೇ ಇಲ್ಲ ಪ್ಯಾಡ್ ತಾಗಿದೆಯೇ ಎಂದು ಪರಿಶೀಲಿಸದೆ ಔಟ್ ತೀರ್ಪಿತ್ತರು.
ವಾಸ್ತವವಾಗಿ ಸ್ನಿಕೋ ಮೀಟರ್ ವಿಶ್ಲೇಷಣೆ ಚೆಂಡು, ಪ್ಯಾಡ್‌ಗೆ ತಾಗಿರುವುದನ್ನು ಸೂಚಿಸುತ್ತಿದ್ದಾದರೂ ಥರ್ಡ್ ಅಂಪೈರ್ ತೀರ್ಪು ವೆಸ್ಟ್ ಇಂಡೀಸ್ ಪರವಾಗಿದ್ದರಿಂದ ರೋಹಿತ್ ಶರ್ಮಾ ನಿರಾಶೆ ಅನುಭವಿಸುವಂತಾಗಿತ್ತು. ಆ ಸನ್ನಿವೇಶದಲ್ಲಿ ಚೆಂಡು ಮತ್ತು ಬ್ಯಾಟ್‌ಗಿದ್ದ ಅಂತರವನ್ನು ಗೊತ್ತುಪಡಿಸಲು ಶರ್ಮಾ ಫೋಟೋ ಟ್ವೀಟ್ ಮಾಡಿದ್ದಾರೆ.
ಟ್ವೀಟ್‌ನಲ್ಲಿ ರೋಹಿತ್ ಏನೂ ಬರೆದುಕೊಂಡಿಲ್ಲವಾದರೂ ಮುಖದ ಮೇಲೆ ಕೈಯಿಟ್ಟುಕೊಂಡಿರುವ ಇಮೋಜಿ, ಅಂಪೈರ್ ಎಡವಟ್ಟನ್ನು ಸೂಚಿಸುವಂತಿದೆ. ಅಂದ್ಹಾಗೆ ಪಂದ್ಯವನ್ನು ಕೊಹ್ಲಿ ಬಳಗ 125 ರನ್‌ಗಳಿಂದ ಗೆದ್ದುಕೊಂಡಿತು. ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಲು ಭಾರತಕ್ಕೆ ಇನ್ನೊಂದೇ ಗೆಲುವು ಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications