T20 World Cup: ಈ ಸವಾಲುಗಳನ್ನೇ ಟೀಮ್ ಇಂಡಿಯಾ ಎದುರಿಸಲಿದೆ: ರೋಹಿತ್ ಶರ್ಮಾ
ಫೆಬ್ರವರಿ 7 ರಿಂದ ಭಾರತ ಹಾಗೂ ಶ್ರೀಲಂಕಾ ದೇಶಗಳು ಜಂಟಿಯಾಗಿ ಟಿ20 ವಿಶ್ವಕಪ್ ಆಯೋಜಿಸಲಿವೆ. ಭಾರತ ಈ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕೆ ಇಳಿಯಲಿದೆ. ಅಲ್ಲದೆ ಈ ಬಾರಿಯೂ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಸೂರ್ಯ ಪಡೆ ಸದ್ಯ ಭರ್ಜರಿ ಪ್ರದರ್ಶನ ನೀಡುತ್ತಿದೆ. ಟೀಮ್ ಇಂಡಿಯಾ ಟೂರ್ನಿಯಲ್ಲಿ ಎದುರಿಸಲಿರುವ ಸವಾಲುಗಳ ಬಗ್ಗೆ ಟಿ20 ವಿಶ್ವಕಪ್ ನಾಯಕ ರೋಹಿತ್ ಶರ್ಮಾ ವಿವರಿಸಿದ್ದಾರೆ.
ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾದ ಬೆನ್ನಲ್ಲೆ, ರೋಹಿತ್ ಶರ್ಮಾ ಟೀಮ್ ಇಂಡಿಯಾ ಎದುರಿಸಬಹುದಾದ ಸವಾಲುಗಳ ಬಗ್ಗೆ ಗಮನ ಹರಿಸಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್‌ಗೆ ಸ್ಪಿನ್ ಜೋಡಿಯಲ್ಲಿ ಯಾರನ್ನು ಆಡಿಸಬೇಕು ಎಂಬುದೇ ದೊಡ್ಡ ಚಿಂತೆಯಾಗಿರಲಿದೆ. ವರುಣ್ ಚಕ್ರವರ್ತಿ ಹಾಗೂ ಕುಲ್‌ದೀಪ್ ಯಾದವ್ ಇಬ್ಬರೂ ನುರಿತ ಸ್ಪಿನ್ ಬೌಲರ್‌ಗಳು.ಇಬ್ಬರೂ ತಮ್ಮದೇ ಆದ ಆಕ್ಷನ್ ಹೊಂದಿದ್ದಾರೆ. ಯಾವ ತಂತ್ರವನ್ನು ಮ್ಯಾನೇಜ್ಮೆಂಟ್ ಪಾಲಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ ಎಂದಿದ್ದಾರೆ.

ಟೀಮ್ ಇಂಡಿಯಾ ಕಳೆದ ಒಂದು ವರ್ಷದಲ್ಲಿ ಸ್ಪಿನ್ ಬೌಲರ್‌ಗಳ ಮೇಲೆ ಬಹಳ ಅವಲಂಬಿತವಾಗಿದೆ. ಭಾರತದ ಸ್ಪಿನ್ ಬೌಲರ್‌ಗಳಾದ ಕುಲ್‌ದೀಪ್ ಯಾದವ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಎದುರಾಳಿ ಬ್ಯಾಟರ್‌ಗಳನ್ನು ಬಹುವಾಗಿ ಕಾಡಿದ್ದಾರೆ ಎಂದು ರೋಹಿತ್ ತಿಳಿಸಿದ್ದಾರೆ. ಇನ್ನು ಮುಂದೆ ಮಾತನಾಡಿರುವ ರೋಹಿತ್ ಟಿ20 ವಿಶ್ವಕಪ್ ನಡೆಯುವ ಸಮಯದಲ್ಲಿ ಋತು ಬದಲಾಗುತ್ತದೆ. ಹೀಗಾಗಿ ಸಂಜೆಯ ಪಂದ್ಯಗಳಲ್ಲಿ ಇಬ್ಬನಿ ಪ್ರಭಾವ ಬೀರಲಿದೆ ಎಂದು ತಿಳಿಸಿದ್ದಾರೆ.
ಟೀಮ್ ಇಂಡಿಯಾದ ಎದುರಿಸುತ್ತಿರುವ ಸವಾಲುಗಳ ಹೊರತಾಗಿಯೂ ತಂಡದಲ್ಲಿ ಇಬ್ಬರೂ ಸ್ಪಿನ್ ಬೌಲರ್‌ಗಳಿಗೆ ಅವಕಾಶ ನೀಡುವುದು ಬೆಸ್ಟ್ ಎನ್ನುವುದು ರೋಹಿತ್ ಅಭಿಪ್ರಾಯವಾಗಿದೆ.
ಟೀಮ್ ಇಂಡಿಯಾ ಮುಂದಿರುವ ಸವಾಲುಗಳು ಏನು?
ಟೂರ್ನಿಯಲ್ಲಿ ಟೀಮ್ ಇಂಡಿಯಾ ಮೂವರು ಸ್ಪಿನ್ ಬೌಲರ್‌ಗಳೊಂದಿಗೆ ಆಡುವುದು ತಂಡದ ಸಮತೋಲನಕ್ಕೆ ಧಕ್ಕೆ ತರಬಹುದಾಗಿದೆ. ಒಂದು ವೇಳೆ ಅಕ್ಷರ್, ಕುಲ್‌ದೀಪ್, ವರುಣ್ ಮೂವರೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದರೆ, ಅರ್ಷದೀಪ್ ಸಿಂಗ್ ತಂಡದಿಂದ ಹೊರ ನಡೆಯಬೇಕಾಗುತ್ತದೆ. ಆಗ ಟೀಮ್ ಇಂಡಿಯಾ ಜಸ್ಪ್ರೀತ್ ಬುಮ್ರಾ ಅವರ ಮೇಲೆ ಹೆಚ್ಚಿನ ಅವಲಂಬಿತವಾಗಬೇಕಾಗುತ್ತದೆ ಎಂದು ಹೇಳಿದ್ದಾರೆ. ಸೂರ್ಯ ಹಾಗೂ ಗೌತಮ್ ಗಂಭೀರ್ ಅವರಿಗೆ ಆಡುವ ಹನ್ನೊಂದರ ಬಳಗ ಪಕ್ಕಾ ಮಾಡುವುದು ದೊಡ್ಡ ಸವಾಲಾಗಿರಲಿದೆ ಎಂದು ರೋಹಿತ್ ತಿಳಿಸಿದ್ದಾರೆ.

"ಟಿ20 ವಿಶ್ವಕಪ್ ಆರಂಭವಾಗುವ ಸಮಯದಲ್ಲಿ ಭಾರತದಲ್ಲಿ ಹೆಚ್ಚಾಗಿ ಇಬ್ಬನಿ ಕಾಣಿಸಿಕೊಳ್ಳುತ್ತದೆ. ಭಾರತದಲ್ಲಿ 90 ರಿಂದ 95 ಪ್ರತಿಷತ ಮೈದಾನಗಳಲ್ಲಿ ಇಬ್ಬನಿ ಇರುತ್ತದೆ ಎಂದು ರೋಹಿತ್ ಶರ್ಮಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಭಾರತ ಟಿ20 ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಫೆಬ್ರವರಿ 7 ರಂದು ಯುಎಸ್‌ಎ ವಿರುದ್ಧ ಆರಂಭಿಸಲಿದೆ. ಟೀಮ್ ಇಂಡಿಯಾ ಲೀಗ್ ಹಂತದ ಪಂದ್ಯಗಳನ್ನು ಮುಂಬೈ, ದೆಹಲಿ, ಕೊಲಂಬೊ ಹಾಗೂ ಅಹಮದಾಬಾದ್‌ನಲ್ಲಿ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications