Retirement: ಹೊಸ ವರ್ಷದಂದು ಭಾರತ ತಂಡದ ಸ್ಟಾರ್ ಆಟಗಾರನ ವೃತ್ತಿಜೀವನ ಅಂತ್ಯ!
ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಸೋಲಿನ ನಂತರ ಭಾರತೀಯ ಕ್ರಿಕೆಟ್‌ನಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಅನೇಕ ಸ್ಟಾರ್ ಆಟಗಾರರು ವಿಮರ್ಶಕರ ಗುರಿಯಾಗಿದ್ದಾರೆ. ಇವರಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಟೀಕೆಗಳನ್ನು ಎದುರಿಸುವಂತಾಗಿದೆ. ಇಬ್ಬರಿಗೂ ನಿವೃತ್ತಿಯಾಗುವಂತೆ ಸಲಹೆ ನೀಡಲಾಗುತ್ತಿದೆ. ರೋಹಿತ್ ಮೆಲ್ಬೋರ್ನ್ ನಂತರ ನಿವೃತ್ತಿ ಘೋಷಿಸುತ್ತಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಈ ಕುರಿತು ಹೊಸ ಅಪ್‌ಡೇಟ್ ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ವರದಿಗಳ ಪ್ರಕಾರ, ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಅಂತ್ಯದ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಲಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಅಧಿಕಾರಿಗಳು ಮತ್ತು ಆಯ್ಕೆದಾರರು ಈಗಾಗಲೇ ರೋಹಿತ್ ಶರ್ಮಾ ಜೊತೆ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. ರೋಹಿತ್ ಮನಸ್ಸು ಬದಲಾಯಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ನಿವೃತ್ತಿ ಘೋಷಣೆಯ ನಿಖರವಾದ ಸಮಯವನ್ನು ನಿರ್ಧರಿಸಲಾಗಿಲ್ಲವಾದರೂ, ಸಿಡ್ನಿಯಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದ ನಂತರ ರೋಹಿತ್ ಶರ್ಮಾ ವೃತ್ತಿಜೀವನಕ್ಕೆ ತೆರೆ ಎಳೆಯುವ ಸಾಧ್ಯತೆ ಹೆಚ್ಚಿದೆ ಎಂದು ವರದಿಗಳಾಗಿವೆ.

ಭಾರತ ತಂಡ ಹೇಗಾದರೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್‌ಗೆ ಅರ್ಹತೆ ಪಡೆದರೆ, ರೋಹಿತ್ ಅವರು ತಂಡದಲ್ಲಿ ಉಳಿಯಲು ಅವಕಾಶ ನೀಡುವಂತೆ ಆಯ್ಕೆದಾರರನ್ನು ಮನವೊಲಿಸಲು ಪ್ರಯತ್ನಿಸಬಹುದು. ನಾಲ್ಕನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಹೀನಾಯ ಸೋಲಿನ ನಂತರ ರೋಹಿತ್ ಶರ್ಮಾ ಅಸಮಾಧಾನ ಹೊರಹಾಕಿದ್ದಾರೆ. ತಂಡದ ಸಾಂಘಿಕ ಸಮಸ್ಯೆಗಳ ಹೊರತಾಗಿ, ವೈಯಕ್ತಿಕ ಮಟ್ಟದಲ್ಲಿಯೂ ಕೆಲವು ವಿಷಯಗಳನ್ನು ಪರಿಹರಿಸಬೇಕಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಇದರ ಬೆನ್ನಲೇ ರೋಹಿತ್ ತನ್ನ ಫಾರ್ಮ್ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದಾರೆ.
ರೋಹಿತ್ ಹೇಳಿದ್ದೇನು?
ಮೆಲ್ಬೋರ್ನ್ ಟೆಸ್ಟ್ ಪಂದ್ಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿತ್ ಶರ್ಮಾ, ಇವತ್ತು ನಾನು ಎಲ್ಲಿ ನಿಂತಿದ್ದೇನೆಯೋ ಅಲ್ಲಿಯೇ ನಿಂತಿದ್ದೇನೆ. ಹಿಂದೆ ಏನಾಯಿತು ಎಂದು ಯೋಚಿಸುವ ಅಗತ್ಯವಿಲ್ಲ. ಕೆಲವು ಫಲಿತಾಂಶಗಳು ನಮ್ಮ ಪರವಾಗಿ ಹೋಗಲಿಲ್ಲ. ನಾಯಕನಾಗಿ ನನಗೆ ಇದು ನಿರಾಸೆ ತಂದಿದೆ. ನಿಮಗೆ ಗೊತ್ತಾ, ನಾನು ಪ್ರಯತ್ನಿಸುತ್ತಿರುವ ಬಹಳಷ್ಟು ಸಂಗತಿಗಳು ನಾನು ಹೋಗಲು ಬಯಸುವ ಸ್ಥಳಕ್ಕೆ ತಲುಪುತ್ತಿಲ್ಲ. ಆದರೆ ಮಾನಸಿಕವಾಗಿ ಇದು ನಿಸ್ಸಂದೇಹವಾಗಿ ತೊಂದರೆಗೊಳಗಾಗುತ್ತದೆ. ನೀವು ಇಲ್ಲಿಗೆ ಬಂದಿದ್ದರೆ, ಮಾಡಬೇಕಾದದ್ದನ್ನು ಯಶಸ್ವಿಯಾಗಿ ಮಾಡಲು ಪ್ರಯತ್ನಿಸಿ ಆ ವಿಷಯಗಳು ಕಾರ್ಯರೂಪಕ್ಕೆ ಬರದಿದ್ದರೆ ಅದು ದೊಡ್ಡ ನಿರಾಶೆಯಾಗಿದೆ ಎಂದಿದ್ದರು.
ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ ಆಡಿರುವ ಮೂರು ಟೆಸ್ಟ್ ಪಂದ್ಯಗಳ ಆರು ಇನ್ನಿಂಗ್ಸ್‌ಗಳಲ್ಲಿ 31 ರನ್ ಗಳಿಸಿದ್ದಾರೆ. ಈ ರನ್‌ಗಳು ಜಸ್ಪ್ರೀತ್ ಬುಮ್ರಾ ಅವರ 30 ವಿಕೆಟ್‌ಗಳಿಗಿಂತ ಕೇವಲ ಒಂದು ಹೆಚ್ಚು. ಇಂತಹ ಸಂದರ್ಭದಲ್ಲಿ ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿಯ ಘೋಷಣೆ ಮಾಡುವ ಬೇಡಿಕೆಯು ಉತ್ತುಂಗಕ್ಕೇರಿದೆ. ಬಹುಶಃ ಅವರು ಸಿಡ್ನಿಯಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications