ಟಿ20 ವಿಶ್ವಕಪ್‌ಗೆ ಭರ್ಜರಿ ತಯಾರಿ ನಡೆದಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ 14 ತಿಂಗಳು ಬಳಿಕ ಅಂಗಳಕ್ಕೆ ಪ್ರವೇಶಿಸಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ 2022ರ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ಸೋತ ಬಳಿಕ ಸ್ಟಾರ್ ಆಟಗಾರರು ಮೈದಾನಕ್ಕೆ ಇಳಿದಿರಲಿಲ್ಲ.
ಟಿ20 ವಿಶ್ವಕಪ್‌ಗೆ ತಯಾರಿ ನಡೆಸಿದ್ದ ಟೀಮ್ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಪ್ರಶ್ನೆಗಳೇ ಎದ್ದಿದ್ದವು. ಈ ಎಲ್ಲ ಪ್ರಶ್ನೆಗಳಿಗೆ ಈಗಾಗಲೇ ಆಯ್ಕೆದಾರರು ಉತ್ತರ ನೀಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದ ಆಯ್ಕೆ ಸಮಿತಿ, ಹಿರಿಯ ಆಟಗಾರರಿಗೆ ಮಣೆ ಹಾಕಿದೆ.

ಅಫ್ಘಾನಿಸ್ತಾನ ವಿರುದ್ಧ ಸರಣಿಗೆ ಟೀಮ್ ಇಂಡಿಯಾಕ್ಕೆ ಆಯ್ಕೆ ಆದ ರೋಹಿತ್ ಶರ್ಮಾ, ಮೈದಾನಕ್ಕೆ ಇಳಿಯುತ್ತಿದ್ದಂತೆ ದಾಖಲೆಯ ಪುಟಕ್ಕೆ ಹೆಸರು ನಮೂದಿಸಿದ್ದಾರೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಮುಂದಾಳತ್ವ ನಡೆಸಿದ ರೋಹಿತ್ ಹಿರಿಯ ನಾಯಕ ಎಂಬ ಹಿರಿಮೆ ತನ್ನದಾಗಿಸಿಕೊಂಡರು. ಎರಡನೇ ಪಂದ್ಯದಲ್ಲೂ ರೋಹಿತ್ ಶರ್ಮಾ ಮೈದಾನಕ್ಕೆ ಇಳಿದು ಗೆಲುವು ಸಾಧಿಸಿದರೆ ಮತ್ತೊಂದು ದಾಖಲೆ ಬರೆಯಬಹುದು.
ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯವನ್ನು ಆಡಲಿದೆ. ಜನವರಿ 14, ಭಾನುವಾರ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇತಿಹಾಸ ಸೃಷ್ಟಿಸಲು ಹೊರಟಿದ್ದಾರೆ. ಅವರು ಸರಣಿ ಗೆಲ್ಲುವ ಅವಕಾಶವನ್ನು ಹೊಂದಿದ್ದು, ಅವರು ಹಿಂದೆಂದೂ ಮಾಡದ ದಾಖಲೆಯನ್ನು ಸಹ ಮಾಡಲಿದ್ದಾರೆ. ಈ ದಿಗ್ಗಜರು ಅತಿ ಹೆಚ್ಚು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ದಾಖಲೆಯನ್ನು ಹೊಂದಿದ್ದಾರೆ. ಈ ಹಿಂದೆ ಯಾವ ನಾಯಕನೂ ಮಾಡದ ಅಂಕಿಅಂಶವನ್ನು ರೋಹಿತ್ ಶರ್ಮಾ ಮುಟ್ಟಲ್ಲಿದ್ದಾರೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ವಿಶ್ವದ ಅತಿ ಹೆಚ್ಚು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದೀಗ ಅದನ್ನು ಮತ್ತಷ್ಟು ಸುಧಾರಿಸಿ 150 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2007ರಲ್ಲಿ ಈ ಮಾದರಿಯಲ್ಲಿ ಭಾರತದ ಪರ ಮೊದಲ ಪಂದ್ಯವಾಡಿದ್ದ ಈ ದಿಗ್ಗಜ ಇದುವರೆಗೆ ಒಟ್ಟು 149 ಪಂದ್ಯಗಳನ್ನು ಆಡಿದ್ದಾರೆ. 134 ಪಂದ್ಯಗಳನ್ನು ಆಡಿರುವ ಐರ್ಲೆಂಡ್‌ನ ಪಾಲ್ ಸ್ಟಾರ್ಲಿನ್ ಹೆಸರು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ 128 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಐರ್ಲೆಂಡ್‌ನ ಜಾರ್ಜ್ ಡಾಕ್ರೆಲ್ ಇದ್ದಾರೆ.
2007 ರಲ್ಲಿ, ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧ T20 ವಿಶ್ವಕಪ್‌ನೊಂದಿಗೆ ತಮ್ಮ T20 ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದುವರೆಗೆ 149 ಪಂದ್ಯಗಳನ್ನು ಆಡಿದ ಹಿಟ್ ಮ್ಯಾನ್ 3853 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 4 ಶತಕಗಳನ್ನು ಬಾರಿಸಿದ್ದು ಸುದೀರ್ಘ ಕಾಲ ವಿಶ್ವ ದಾಖಲೆಯಾಗಿತ್ತು. ರೋಹಿತ್ ನಂತರ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ನಂತರ ಭಾರತದ ಸೂರ್ಯಕುಮಾರ್ ಯಾದವ್ ಈ ದಾಖಲೆ ಮಾಡಿದ್ದಾರೆ.