2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅನುಭವಿ ರೋಹಿತ್ ಶರ್ಮಾ ಅವರೇ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಭಾನುವಾರ, ಜುಲೈ 7ರಂದು ಖಚಿತಪಡಿಸಿದರು.
ಮುಂದಿನ ವರ್ಷ ಭಾರತ ಇನ್ನೆರಡು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಂದ್ಯಾವಳಿಗಳನ್ನು ಗೆಲ್ಲುತ್ತದೆ ಎಂದು ಜಯ್ ಶಾ ವಿಶ್ವಾಸ ವ್ಯಕ್ತಪಡಿಸಿದರು.

2024ರ ಐಸಿಸಿ ಟಿ20 ವಿಶ್ವಕಪ್ ಗೆಲುವಿನಲ್ಲಿ ಭಾರತೀಯ ಆಟಗಾರರ ಪ್ರಯತ್ನಗಳನ್ನು ಶ್ಲಾಘಿಸುವಾಗ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಕನಿಷ್ಠ ಇನ್ನೊಂದು ವರ್ಷ ಮಿಂಚಲು ಭಾರತ ತಂಡವನ್ನು ಜಯ್ ಶಾ ಬೆಂಬಲಿಸಿದರು.
ಟಿ20 ವಿಶ್ವಕಪ್ ಗೆಲ್ಲಲು ರೋಹಿತ್ ಶರ್ಮಾ ನಾಯಕತ್ವದ ತಂಡಕ್ಕೆ ಬೆಂಬಲ ನೀಡಿದ್ದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೆನಪಿಸಿಕೊಂಡರು ಮತ್ತು ತಮ್ಮ ಮಾತು ನಿಜವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
2023ರ ಏಕದಿನ ವಿಶ್ವಕಪ್ ಫೈನಲ್‌ನ ಆಘಾಯಕಾರಿ ಸೋಲು ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಇತಿಹಾಸವನ್ನು ರಚಿಸಲು ಮಾಡಲು ಭಾರತೀಯ ತಂಡವನ್ನು ಉತ್ತೇಜಿಸಿತು ಎಂದು ಜಯ್ ಶಾ ತಿಳಿಸಿದರು.

"2023ರ ನವೆಂಬರ್‌ನಲ್ಲಿ 10 ಪಂದ್ಯಗಳನ್ನು ಗೆದ್ದ ನಂತರ, ಫೈನಲ್‌ನಲ್ಲಿ ಹೃದಯಾಘಾತ ಅನುಭವಿಸಿದೆವು. ನಮಗೆ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ನಾವು ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದೇವೆ," ಎಂದರು ಜಯ್ ಶಾ ಅಭಿಪ್ರಾಯಪಟ್ಟರು.
"2024ರ ಜೂನ್ 29ರಂದು ನಾವು ಹೃದಯಗಳನ್ನು ಗೆಲ್ಲುತ್ತೇವೆ, ಟ್ರೋಫಿ ಗೆಲ್ಲುತ್ತೇವೆ ಮತ್ತು ಬಾರ್ಬಡೋಸ್‌ನಲ್ಲಿ ಧ್ವಜಾರೋಹಣ ಮಾಡುತ್ತೇವೆ ಎಂದು ನಾನು ರಾಜ್‌ಕೋಟ್‌ನಲ್ಲಿ ಹೇಳಿದ್ದೆ. ನಮ್ಮ ನಾಯಕ ರೋಹಿತ್ ಶರ್ಮಾ ತ್ರಿವರ್ಣವನ್ನು ಅಲ್ಲಿ ಹಾರಿಸಿದರು," ಎಂದು ಜಯ್ ಶಾ ಬಿಸಿಸಿಐ ಹಂಚಿಕೊಂಡ ವಿಡಿಯೋದಲ್ಲಿ ಹೇಳಿದರು.
"ಈ ಗೆಲುವಿನ ನಂತರ, ಮುಂಬರುವ ಐಸಿಸಿ ಟೂರ್ನಿಗಳಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು ಚಾಂಪಿಯನ್ ಆಗಲಿದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ," ಎಂದು ಜಯ್ ಶಾ ತಿಳಿಸಿದರು.
ಗಮನಾರ್ಹವಾಗಿ, ಕಳೆದ ವರ್ಷ ರಾಜ್‌ಕೋಟ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಾಗ, ಬಾರ್ಬಡೋಸ್‌ನಲ್ಲಿ ನಡೆಯುವ ಟಿ20 ವಿಶ್ವಕಪ್ ಫೈನಲ್ ಗೆಲ್ಲಲು ಭಾರತ ತಂಡವನ್ನು ಜಯ್ ಶಾ ಬೆಂಬಲಿಸಿದ್ದರು.
ಜೂನ್ 29ರಂದು ಬಾರ್ಬಡೋಸ್‌ನಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ಟೀಮ್ ಇಂಡಿಯಾ ತನ್ನ ಎರಡನೇ ಟಿ20 ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು.
ಆ ಬಳಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಟಿ20 ಸ್ವರೂಪದಿಂದ ನಿವೃತ್ತರಾದರು. ಕ್ರಿಕೆಟ್‌ನ ಅತ್ಯಂತ ಕಡಿಮೆ ಸ್ವರೂಪದಲ್ಲಿ ತಮ್ಮ ವೃತ್ತಿಜೀವನವನ್ನು ವಿಶ್ವಕಪ್ ಗೆಲುವಿನೊಂದಿಗೆ ಕೊನೆಗೊಳಿಸಿದರು.
ಮೂವರು ಹಿರಿಯ ಆಟಗಾರರು ಚಾಂಪಿಯನ್ಸ್ ಟ್ರೋಫಿಯ ಭಾಗವಾಗಲಿದ್ದಾರೆ ಎಂದು ಜಯ್ ಶಾ ಈ ಹಿಂದೆಯೇ ಖಚಿತಪಡಿಸಿದ್ದರು. ರೋಹಿತ್ ಶರ್ಮಾ ನಾಯಕತ್ವವನ್ನು ಕನಿಷ್ಠ ಮುಂದಿನ ವರ್ಷದವರೆಗೆ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಖಚಿತಪಡಿಸುವುದರೊಂದಿಗೆ, ಅವರ ನಾಯಕತ್ವದ ಕೌಶಲ್ಯದಲ್ಲಿ ನಂಬಿಕೆಯನ್ನು ಬಿಸಿಸಿಐ ತೋರಿಸಿದೆ.
ಭಾರತದ ವಿಶ್ವಕಪ್ ತಾರೆಗಳು ತಮ್ಮ ಶ್ರೀಲಂಕಾ ಪ್ರವಾಸದ ವೇಳೆ ಕ್ರಿಕೆಟ್‌ಗೆ ಮರಳಲು ಸಿದ್ಧರಾಗಿದ್ದಾರೆ. ಜುಲೈ ಅಂತ್ಯದಲ್ಲಿ ಶ್ರೀಲಂಕಾ ಪ್ರವಾಸ ಪ್ರಾರಂಭವಾಗಲಿದೆ.
ಹಿರಿಯ ಆಟಗಾರರು ಮುಂದಿನ 12 ತಿಂಗಳ ಕಾಲ ಟೆಸ್ಟ್ ಮತ್ತು ಏಕದಿನ ಪಂದ್ಯಗಳತ್ತ ಗಮನ ಹರಿಸುವ ಸಾಧ್ಯತೆ ಇದೆ. 2023-25ರ ಚಕ್ರದಲ್ಲಿ ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ ಆರು ಗೆಲುವುಗಳೊಂದಿಗೆ ಭಾರತವು ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಆಸ್ಟ್ರೇಲಿಯಾದಲ್ಲಿ ನಡೆಯುವ 5-ಟೆಸ್ಟ್ ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸುವ ಮೊದಲು ಭಾರತ ತಂಡ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ಸ್ವದೇಶಿ ಟೆಸ್ಟ್ ಪಂದ್ಯಗಳನ್ನು ಆಡಲಿದೆ.
2017ರ ನಂತರ ಮೊದಲ ಬಾರಿಗೆ 50 ಓವರ್‌ಗಳ ಪಂದ್ಯಾವಳಿಯು ಕ್ರಿಕೆಟ್ ಕ್ಯಾಲೆಂಡರ್‌ಗೆ ಹಿಂತಿರುಗಿದ ಕಾರಣ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ-ಮಾರ್ಚ್ 2025ರಲ್ಲಿ ನಡೆಯಲಿದೆ.