For Quick Alerts
ALLOW NOTIFICATIONS  
For Daily Alerts
 

Rohit Sharma: ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲಿ ರೋಹಿತ್ ದಾಖಲೆ ಹೇಗಿದೆ?

ಭಾರತ ಹಾಗೂ ಬಾರ್ಡರ್ ಗವಾಸ್ಕರ್ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಸರಣಿಯಲ್ಲಿ ಈ ಬಾರಿ ಐದು ಪಂದ್ಯಗಳು ನಡೆಯಬೇಕಿದೆ. ಇದರಲ್ಲಿ ಈಗಾಗಲೇ ಒಂದು ಪಂದ್ಯ ಪರ್ತ್‌ನಲ್ಲಿ ನಡೆದಿದೆ. ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ತಂಡವನ್ನು 295 ರನ್‌ಗಳಿಂದ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ಜಸ್ಪ್ರಿತ್ ಬುಮ್ರಾ, ಎರಡನೇ ಟೆಸ್ಟ್‌ಗೆ ರೋಹಿತ್‌ ಶರ್ಮಾ ತಂಡ ಸೇರಲಿದ್ದಾರೆ. ಜಸ್ಪ್ರಿತ್ ಬುಮ್ರಾ ಉಪನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಬಾರ್ಡರ್‌ ಗವಾಸ್ಕರ್‌ ಟ್ರೋಫಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಟೀಮ್ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಹಿತ್‌ ಶರ್ಮಾ ಕೌಟುಂಬಿಕ ಕಾರಣದಿಂದ ಹೊರಗುಳಿದಿದ್ದರು. ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಇವರು ಮುನ್ನಡೆಸಲಿದ್ದಾರೆ. ಹಾಗಿದ್ದರೆ ರೋಹಿತ್ ಶರ್ಮಾ ಅವರ ದಾಖಲೆ ಆಸ್ಟ್ರೇಲಿಯಾ ವಿರುದ್ಧ ಹೇಗಿದೆ ಇಲ್ಲಿದೆ ಮಾಹಿತಿ.

Rohit Sharma to Lead India in Remaining Border-Gavaskar Trophy Matches Review of His Performance in the Series

ಆಸೀಸ್‌ ವಿರುದ್ಧ ರೋಹಿತ್ ದಾಖಲೆ ಹೇಗಿದೆ?

ಒಟ್ಟಾರೆ ರೋಹಿತ್ ಶರ್ಮಾ ಅವರ ದಾಖಲೆಯನ್ನು ನೋಡಿದರೆ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಅಂಕಿ ಅಂಶವನ್ನು ಹೊಂದಿದ್ದಾರೆ. ಇವರು ಆಸೀಸ್‌ ವಿರುದ್ಧ ಆಡಿದ 12 ಟೆಸ್ಟ್‌ ಪಂದ್ಯಗಳ 22 ಇನಿಂಗ್ಸ್‌ಗಳಲ್ಲಿ 708 ರನ್ ಸಿಡಿಸಿದ್ದಾರೆ. ಇದರಲ್ಲಿ 1 ಅರ್ಧಶತಕ ಹಾಗೂ 3 ಅರ್ಧಶತಕ ಸೇರಿವೆ. ಇನ್ನು ಆಸ್ಟ್ರೇಲಿಯಾದಲ್ಲಿ ರೋಹಿತ್ 47.66 ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ಇದರಲ್ಲಿ 3 ಅರ್ಧಶತಕ ಸೇರಿದಂತೆ 408 ರನ್‌ ಸಿಡಿಸಿದ್ದಾರೆ. ರೋಹಿತ್ ಈ ವರೆಗೆ 4 ಬಾರಿ ಬಾರ್ಡರ್‌ ಗಾವಾಸ್ಕರ್‌ ಟ್ರೋಫಿಯಲ್ಲಿ ಕಣಕ್ಕೆ ಇಳಿದಿದ್ದಾರೆ. ಈ ಸರಣಿಯಲ್ಲಿನ ಅಂಕಿ ಅಂಶಗಳು ಇಲ್ಲವೆ.

ಆಸ್ಟ್ರೇಲಿಯಾದ ಆತಿಥ್ಯದಲ್ಲಿ 2014-15 ರಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ 6 ಇನ್ನಿಂಗ್ಸ್‌ಗಳಲ್ಲಿ 28.83 ಸರಾಸರಿಯಲ್ಲಿ ಕೇವಲ 173 ರನ್, 2018-19ರಲ್ಲಿ 4 ಇನ್ನಿಂಗ್ಸ್‌ಗಳಲ್ಲಿ 35.33 ಸರಾಸರಿಯಲ್ಲಿ 106 ರನ್, 2020-21ರಲ್ಲಿ ಕೇವಲ 4 ಇನ್ನಿಂಗ್ಸ್‌ಗಳಲ್ಲಿ 32.35 ಸರಾಸರಿಯಲ್ಲಿ 129 ರನ್ ಬಾರಿಸಿದ್ದಾರೆ. ಭಾರತದಲ್ಲಿ ನಡೆದ ಬಾರ್ಡರ್‌ ಗವಾಸ್ಕರ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ 6 ಇನ್ನಿಂಗ್ಸ್‌ಗಳಲ್ಲಿ 40.33 ಸರಾಸರಿಯಲ್ಲಿ 242 ರನ್ ಸಿಡಿಸಿದ್ದಾರೆ.

Rohit Sharma to Lead India in Remaining Border-Gavaskar Trophy Matches Review of His Performance in the Series

ರೋಹಿತ್‌ ತಂಡಕ್ಕೆ ಆಗಮನ

ಬಾರ್ಡರ್ ಗವಾಸ್ಕರ್‌ ಸರಣಿಯಲ್ಲಿ ರೋಹಿತ್ ಶರ್ಮಾ ದಶಕದ ವರೆಗೂ ಶತಕ ಬಾರಿಸಿಲ್ಲ. ರೋಹಿತ್ ಆಸೀಸ್ ವಿರುದ್ಧ ಮೂರು ಅರ್ಧಶತಕ ಬಾರಿಸಿದ್ದಾರೆ. ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಅವರು ಮೊದಲ ಟೆಸ್ಟ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಈಗ ರೋಹಿತ್ ಶರ್ಮಾ ಅವರ ಆಗಮನದಿಂದ ಅವರ ಉಪಸ್ಥಿತಿಯಲ್ಲಿ ರಾಹುಲ್‌ ಯಾವ ಸ್ಥಾನದಲ್ಲಿ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಮೊದಲ ಟೆಸ್ಟ್‌ ಪಂದ್ಯದಲ್ಲಿ ತಂಡದಿಂದ ದೂರವಿರುವ ಶುಭಮನ್‌ ಗಿಲ್‌ ಗಾಯದಿಂದ ದೂರ ಉಳಿದಿದ್ದರು. ಹೀಗಾಗಿ ಇವರು ಚೇತರಿಸಿಕೊಂಡು ತಂಡಕ್ಕೆ ಮರಳುವ ಸಾಧ್ಯತೆ ಇದೆ.

Story first published: Saturday, November 30, 2024, 21:59 [IST]
Other articles published on Nov 30, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+