For Quick Alerts
ALLOW NOTIFICATIONS  
For Daily Alerts
 

IND vs BAN: ಬಾಂಗ್ಲಾದೇಶದ ವಿರುದ್ಧ ವಿರಾಟ್‌, ರೋಹಿತ್ ದಾಖಲೆ ಹೇಗಿದೆ?

ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಮತ್ತೆ ಅಂಗಳ ಪ್ರವೇಶಿಸಲಿದ್ದಾರೆ. ಇದೇ 19 ರಿಂದ ಬಾಂಗ್ಲಾದೇಶದ ವಿರುದ್ಧ ಚೆನ್ನೈನಲ್ಲಿ ಮೊದಲ ಟೆಸ್ಟ್‌ ನಡೆಯಲಿದೆ. ಈ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ಪರ ಸ್ಟಾರ್ ಆಟಗಾರರು ಕಣಕ್ಕೆ ಇಳಿಯಲಿದ್ದಾರೆ. ಈ ವೇಳೆ ಟೀಮ್ ಇಂಡಿಯಾದ ಜವಾಬ್ದಾರಿಯನ್ನು ರೋಹಿತ್ ಶರ್ಮಾ ಅವರಿಗೆ ನೀಡಲಾಗಿದೆ. ಅನುಭವಿ ಬ್ಯಾಟರ್ ವಿರಾಟ್‌ ಕೊಹ್ಲಿ, ರಿಷಭ್ ಪಂತ್ ಟೆಸ್ಟ್‌ ತಂಡವನ್ನು ಸೇರಿಕೊಂಡಿದ್ದಾರೆ.

ಈ ಟೆಸ್ಟ್‌ ಪಂದ್ಯದ ಒಂದು ವಿಶೇಷತೆ ಎಂದರೆ ಭಾರತ ತಂಡ ಉಪನಾಯಕನಿಲ್ಲದೇ ಟೆಸ್ಟ್‌ ಆಡಲು ಅಂಗಳಕ್ಕೆ ಇಳಿಯಲಿದೆ. ಟೀಮ್ ಇಂಡಿಯಾ ಚೆನ್ನೈ ಟೆಸ್ಟ್‌ ಪಂದ್ಯವನ್ನು ಗೆದ್ದು ಇತಿಹಾಸದ ಪುಟದಲ್ಲಿ ಸ್ಥಾನ ಪಡೆಯುವ ಕನಸು ಕಾಣುತ್ತಿದೆ. ಸೋಲಿಗಿಂತ ಗೆಲುವಿನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಈ ಸರಣಿಯಲ್ಲಿ ಗೆಲುವು ಮಹತ್ವದಾಗಿದೆ.

Rohit Sharma to Lead Team India Virat Kohli Makes Return for the Test Series Against Bangladesh

ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರಂತಹ ಸ್ಟಾರ್ ಆಟಗಾರರು ಇದ್ದಾರೆ. ಈ ಇಬ್ಬರು ಬಾಂಗ್ಲಾ ವಿರುದ್ಧ ರನ್‌ಗಳ ಶಿಖರ್‌ವನ್ನು ಏರಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಕೆಲವು ದಿನಗಳಿಂದ ರೋಹಿತ್‌ ಶರ್ಮಾ ತಮ್ಮ ಆಟವನ್ನು ಬದಲಿಸಿಕೊಂಡಿದ್ದು, ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೇಗೆ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ರೋಹಿತ್‌ ಆರಂಭದಿಂದಲೂ ಅಟ್ಯಾಕಿಂಗ್ ಕ್ರಿಕೆಟ್‌ ಆಡುತ್ತಾರೆ. ಇದರಿಂದ ಎದುರಾಳಿಗಳು ಒತ್ತಡಕ್ಕೆ ಸಿಲುಕುತ್ತಾರೆ.

ಟೀಮ್ ಇಂಡಿಯಾದ ಇನ್ನೋರ್ವ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ ಸಹ ಯಾವುದೇ ಪರಿಸ್ಥಿತಿಗಾದರೂ ಹೊಂದಿಕೊಂಡು ಆಡುವ ಆಟಗಾರ. ಯಾವುದೇ ಪಿಚ್‌ ಆದರೂ ಸಮಯ ಕಳೆದು ಬಿಗ್‌ ಇನಿಂಗ್ಸ್ ಕಟ್ಟಬಲ್ಲ ಕ್ಷಮತೆಯನ್ನು ಇವರು ಹೊಂದಿದ್ದಾರೆ. ವಿಶ್ವದ ಎಲ್ಲ ಪಿಚ್‌ಗಳಲ್ಲೂ ಅಬ್ಬರಿಸಿರುವ ವಿರಾಟ್ ಆರ್ಭಟಿಸಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಈ ಇಬ್ಬರು ಆಟಗಾರರ ಆರ್ಭಟಿಸಿದರೆ ಬಾಂಗ್ಲಾದೇಶ ಬೌಲರ್‌ಗಳು ಕಂಠಕ ಗ್ಯಾರಂಟಿ.

ವಿರಾಟ್‌ ದ್ವಿಶತಕ

ಸೂಪರ್ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಬಾಂಗ್ಲಾ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇವರು ಬಾಂಗ್ಲಾ ವಿರುದ್ಧ 6 ಟೆಸ್ಟ್‌ ಪಂದ್ಯ ಆಡಿದ್ದು, 437 ರನ್ ಗಳಿಸಿದ್ದಾರೆ. ಈ ವೇಳೆ ಅವರ ಸರಾಸರಿ 54.62 ಆಗಿದ್ದು, ಎರಡು ಶತಕ ಬಾರಿಸಿದ್ದಾರೆ. 2017ರಲ್ಲಿ ಬಾಂಗ್ಲಾದೇಶ ವಿರುದ್ಧ 204 ರನ್‌ಗಳ ಇನ್ನಿಂಗ್ಸ್‌ ಕಟ್ಟಿ ಅಬ್ಬರಿಸಿದ್ದಾರೆ. ಅಲ್ಲದೆ ಫೀಲ್ಡ್‌ನಲ್ಲೂ ಏಳು ಕ್ಯಾಚ್‌ ಪಡೆದಿದ್ದಾರೆ.

Rohit Sharma to Lead Team India Virat Kohli Makes Return for the Test Series Against Bangladesh

ಏನು ಹೇಳುತ್ತೆ ರೋಹಿತ್ ಅಂಕಿ ಅಂಶ?

ವಿಶ್ವದ ನಾನಾ ತಂಡಗಳಿಗೆ ಕಾಟ ನೀಡಿರುವ ರೋಹಿತ್‌ ಶರ್ಮಾ ಅವರ ದಾಖಲೆ ಬಾಂಗ್ಲಾ ವಿರುದ್ಧ ಉತ್ತಮವಾಗಿಲ್ಲ. ಇವರು 3 ಟೆಸ್ಟ್ ಪಂದ್ಯಗಳಲ್ಲಿ ಕೇವಲ 33 ರನ್ ಗಳಿಸಿದ್ದಾರೆ. ಆದರೆ ಈ ಅಂಕಿ ಅಂಶಗಳು ರೋಹಿತ್ ಶರ್ಮಾ ಅವರ ಫಾರ್ಮ್‌ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ. ರೋಹಿತ್ ಶರ್ಮಾ ಅವರ ಬ್ಯಾಟ್‌ ಸದ್ಯ ಅಬ್ಬರಿಸುತ್ತಿದ್ದು, ಬಾಂಗ್ಲಾ ಬೌಲರ್‌ಗಳನ್ನು ಕಾಡಬಲ್ಲರು.

Story first published: Wednesday, September 11, 2024, 20:21 [IST]
Other articles published on Sep 11, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+