ಜುಲೈ 21 ಭಾನುವಾರ, ಮುಂದಿನ ತಿಂಗಳು ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ನಾಯಕನಾಗಿ ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ. ಈ ವೇಳೆ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೃಹತ್ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಆಗಸ್ಟ್ 2 ರಿಂದ ಆಗಸ್ಟ್ 7 ರವರೆಗೆ ಕೊಲಂಬೊದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಜುಲೈ 27ರಿಂದ ಜುಲೈ 30ರವರೆಗೆ ಭಾರತ ಮತ್ತು ಶ್ರೀಲಂಕಾ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ಈಗಾಗಲೇ ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದು, ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಭಾರತಕ್ಕೆ ನಾಯಕರಾಗಿದ್ದಾರೆ. ಹೀಗಾಗಿ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಆಡಲಿರುವ 00
ಹಿಟ್‌ಮ್ಯಾನ್ ಶ್ರೇಷ್ಠ ದಾಖಲೆ ನಿರ್ಮಿಸಲು ಅವಕಾಶ ಹೊಂದಿದ್ದಾರೆ
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ವೇಳೆ ರೋಹಿತ್ ಶರ್ಮಾ ಎರಡು ಶತಕಗಳನ್ನು ಬಾರಿಸುವಲ್ಲಿ ಯಶಸ್ವಿಯಾದರೆ, ಹಿಟ್‌ಮ್ಯಾನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಶತಕ ಪೂರೈಸಲಿದ್ದಾರೆ. ಈ ಮೂಲಕ 'ಹಿಟ್‌ಮ್ಯಾನ್' ಭಾರತದ ಪರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಶತಕಗಳನ್ನು ಗಳಿಸಿದ ವಿಶ್ವದ 9ನೇ ಮತ್ತು
ಮೂರನೇ ಭಾರತೀಯ ಬ್ಯಾಟರ್ ಆಗಲಿದ್ದಾರೆ.
ಇದುವರೆಗೆ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಮಾತ್ರ ಭಾರತದ ಪರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50ಕ್ಕೂ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ 100 ಶತಕಗಳಿವೆ. ವಿರಾಟ್ ಕೊಹ್ಲಿ 80 ಶತಕಗಳನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 48 ಶತಕಗಳನ್ನು ಗಳಿಸಿದ್ದಾರೆ.
1) ಸಚಿನ್ ತೆಂಡೂಲ್ಕರ್ - 100 ಶತಕಗಳು (ಟೆಸ್ಟ್ - 51, ಏಕದಿನ - 49)
2) ವಿರಾಟ್ ಕೊಹ್ಲಿ - 80 ಶತಕಗಳು (ಟೆಸ್ಟ್ - 29, ಏಕದಿನ- 50, ಟಿ20 - 1)
1) ಸಚಿನ್ ತೆಂಡೂಲ್ಕರ್ (ಭಾರತ) - 100 ಶತಕಗಳು
2) ವಿರಾಟ್ ಕೊಹ್ಲಿ (ಭಾರತ) - 80 ಶತಕಗಳು
3) ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 71 ಶತಕಗಳು
4) ಕುಮಾರ್ ಸಂಗಕ್ಕಾರ (ಶ್ರೀಲಂಕಾ) - 63 ಶತಕಗಳು
5) ಜಾಕ್ವೆಸ್ ಕಾಲಿಸ್ (ದಕ್ಷಿಣ ಆಫ್ರಿಕಾ) - 62 ಶತಕಗಳು
6) ಹಾಶಿಮ್ ಆಮ್ಲ (ದಕ್ಷಿಣ ಆಫ್ರಿಕಾ) - 55 ಶತಕಗಳು
7) ಮಹೇಲಾ ಜಯವರ್ಧನೆ (ಶ್ರೀಲಂಕಾ) - 54 ಶತಕಗಳು
8) ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್) - 53 ಶತಕಗಳು
9) ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) - 49 ಶತಕಗಳು
10) ರೋಹಿತ್ ಶರ್ಮಾ (ಭಾರತ) - 48 ಶತಕಗಳು
1) ಸಚಿನ್ ತೆಂಡೂಲ್ಕರ್ (ಭಾರತ) - 100 ಶತಕಗಳು
2) ವಿರಾಟ್ ಕೊಹ್ಲಿ (ಭಾರತ) - 80 ಶತಕಗಳು
3) ರೋಹಿತ್ ಶರ್ಮಾ (ಭಾರತ) - 48 ಶತಕಗಳು
4) ರಾಹುಲ್ ದ್ರಾವಿಡ್ (ಭಾರತ) - 48 ಶತಕಗಳು
5) ವೀರೇಂದ್ರ ಸೆಹ್ವಾಗ್ (ಭಾರತ) - 38 ಶತಕಗಳು
6) ಸೌರವ್ ಗಂಗೂಲಿ (ಭಾರತ) - 38 ಶತಕಗಳು
7) ಸುನಿಲ್ ಗವಾಸ್ಕರ್ (ಭಾರತ) - 35 ಶತಕಗಳು
8) ಮೊಹಮ್ಮದ್ ಅಜರುದ್ದೀನ್ (ಭಾರತ) - 29 ಶತಕಗಳು
9) ಶಿಖರ್ ಧವನ್ (ಭಾರತ) - 24 ಶತಕಗಳು
10) ವಿವಿಎಸ್ ಲಕ್ಷ್ಮಣ್ (ಭಾರತ) - 23 ಶತಕಗಳು
ರೋಹಿತ್ ಶರ್ಮಾ ಟೀಮ್ ಇಂಡಿಯಾ ಪರ 159 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 31.34 ಸರಾಸರಿಯಲ್ಲಿ 4231 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20ಯಲ್ಲಿ 5 ಶತಕ ಹಾಗೂ 32 ಅರ್ಧ ಶತಕ ಸಿಡಿಸಿದ್ದಾರೆ.
ರೋಹಿತ್ ಶರ್ಮಾ 262 ಏಕದಿನ ಪಂದ್ಯಗಳಲ್ಲಿ 49.12 ಸರಾಸರಿಯಲ್ಲಿ 10709 ರನ್ ಬಾರಿಸಿದ್ದಾರೆ. ರೋಹಿತ್ ಶರ್ಮಾ ಏಕದಿನದಲ್ಲಿ 31 ಶತಕ ಮತ್ತು 55 ಅರ್ಧ ಶತಕಗಳನ್ನು ಹೊಂದಿದ್ದಾರೆ.
ರೋಹಿತ್ ಶರ್ಮಾ 59 ಟೆಸ್ಟ್ ಪಂದ್ಯಗಳಲ್ಲಿ 45.47 ಸರಾಸರಿಯಲ್ಲಿ 4138 ರನ್ ಕಲೆ ಹಾಕಿದ್ದಾರೆ. ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ 12 ಶತಕ ಹಾಗೂ 1 ದ್ವಿಶತಕ ಸೇರಿದಂತೆ 17 ಅರ್ಧ ಶತಕ ಸಿಡಿಸಿದ್ದಾರೆ.