For Quick Alerts
ALLOW NOTIFICATIONS  
For Daily Alerts
 

Mohammed Shami: ಟೀಮ್ ಇಂಡಿಯಾಕ್ಕೆ ಶಮಿ ಸೇರುವುದು ಯಾವಾಗ? ಕ್ಯಾಪ್ಟನ್‌ ಹೇಳಿದ್ದೇನು?

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಬಾರ್ಡರ್‌ ಗವಾಸ್ಕರ್‌ ಸರಣಿ ನಡೆಯುತ್ತಿದೆ. ಈ ಪಂದ್ಯದ ವೇಳೆ ಟೀಮ್ ಇಂಡಿಯ ಮೂರನೇ ಪಂದ್ಯದಲ್ಲಿ ಡ್ರಾ ಸಾಧಿಸಿದೆ. ಇನ್ನು ಉಭಯ ದೇಶಗಳ ನಡುವಿನ ನಾಲ್ಕನೇ ಪಂದ್ಯ ಮೆಲ್ಬರ್ನ್‌ನಲ್ಲಿ ಡಿಸೆಂಬರ್ 26ರಂದು ನಡೆಯಲಿದೆ. ಈ ಸರಣಿಗೆ ಇನ್ನು ಕಾಲಾವಕಾಶ ಇದ್ದು, ಟೀಮ್ ಇಂಡಿಯಾ ಭರ್ಜರಿ ತಯಾರಿ ನಡೆಸಿದೆ.

ಮೂರನೇ ಟೆಸ್ಟ್ ಬಳಿಕ ಟೀಮ್ ಇಂಡಿಯಾದ ಸ್ಟಾರ್‌ ಸ್ಪಿನ್ ಬೌಲರ್ ಅಶ್ವಿನ್‌ ನಿವೃತ್ತಿ ಘೋಷಿಸಿದ್ದಾರೆ. ಇವರ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡಲಿದೆ. ಈ ಮಧ್ಯೆ ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ಬಹುದಿನಗಳಿಂದ ಎದ್ದಿರುವ ಪ್ರಶ್ನೆ ಒಂದೇ. ಸ್ವಿಂಗ್‌ ಮಾಂತ್ರಿಕ ಮೊಹಮ್ಮದ್ ಶಮಿ ಮತ್ತೆ ಟೀಮ್ ಇಂಡಿಯಾಕ್ಕೆ ಕಮ್‌ ಬ್ಯಾಕ್‌ ಮಾಡುತ್ತಾರಾ ಎಂದು. ಈ ಪ್ರಶ್ನೆಗೆ ರೋಹಿತ್ ಶರ್ಮಾ ಉತ್ತರ ನೀಡಿದ್ದಾರೆ.

Rohit Sharma Updates on Mohammed Shami s Return India Prepares for Melbourne Test

ರೋಹಿತ್ ಹೇಳಿದ್ದೇನು?

ಕಳೆದ ಒಂದು ವರ್ಷದಿಂದ ಮೊಹಮ್ಮದ್‌ ಶಮಿ ತಂಡದಿಂದ ದೂರ ಉಳಿದಿದ್ದರು. ಈ ವೇಳೆ ಅವರು ಚೇತರಿಸಿಕೊಂಡು ದೇಶೀಯ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಮೊದಲು ರಣಜಿ ಟ್ರೋಫಿಯಲ್ಲಿ ಮಿಂಚು ಹರಿಸಿದ್ದ ಶಮಿ, ಬಳಿಕ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಅಬ್ಬರಿಸಿದ್ದಾರೆ. ಈಗ ವಿಜಯ್ ಹಜಾರೆ ಆಡಲು ಸಿದ್ಧತೆ ನಡೆಸಿದ್ದಾರೆ. ಈ ವೇಳೆ ರೋಹಿತ್ ಶರ್ಮಾ ಇವರ ಬಗ್ಗೆ ಬಿಗ್ ಅಪ್‌ ಡೇಟ್‌ ನೀಡಿದ್ದಾರೆ.

ಶಮಿ ಫಿಟ್ನೆಸ್‌ ಬಗ್ಗೆ ಎನ್‌ಸಿಎ ಅಧಿಕಾರಿಗಳು ಯಾರಾದರೂ ಮಾಹಿತಿ ನೀಡಬೇಕು. ಅವರು ಎನ್‌ಸಿಎದಲ್ಲಿ ಪುರ್ನವಸತಿ ಪಡೆಯುತ್ತಿದ್ದಾರೆ. ಅಲ್ಲಿಯ ಬಗ್ಗೆ ಕೆಲವು ಅಪ್‌ಡೇಟ್‌ ನೀಡಬೇಕಾಗಿತ್ತು. ಶಮಿ ಈಗಾಗಲೇ ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆಟಗಾರ ಮೈದಾನದಿಂದ ಹೊರ ನಡೆದು ಚೇತರಿಸಿಕೊಳ್ಳುವಾಗ ಏನೆಲ್ಲಾ ಸಮಸ್ಯೆಗಳು ಆಗುತ್ತವೆ ಎಂಬುದರ ಬಗ್ಗೆ ಅರಿವಿದೆ. ಅವರು ಸಂಪೂರ್ಣ ಫಿಟ್ ಆಗಿದ್ದಲ್ಲಿ ತಂಡ ಸೇರುತ್ತಾರೆ. ನಾವು ಅವರ ವಿಷಯದಲ್ಲಿ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಶಮಿ ಫಿಟ್ ಆಗಿದ್ದಾರೆ ಎಂದು ಎನ್‌ಸಿಎ ಅಧಿಕಾರಿಗಳು ಭಾವಿಸಿದ್ದರೆ, ಅವರನ್ನು ತಂಡಕ್ಕೆ ಕಳಿಸಬಹುದು. ತಂಡದ ಬಾಗಿಲು ಅವರಿಗೆ ತೆರೆದಿರುತ್ತದೆ ಎಂದು ತಿಳಿಸಿದ್ದಾರೆ.

Rohit Sharma Updates on Mohammed Shami s Return India Prepares for Melbourne Test

ಪಂದ್ಯದ ಫಲಿತಾಂಶ

ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯ ಕೊನೆಯ ದಿನದಾಟದ ಮೊದಲಾವಧಿಯಲ್ಲಿ ಮಂದ ಬೆಳಕು ಕಾಟ ನೀಡಿದ್ದರಿಂದ ಪಂದ್ಯವನ್ನು ಸ್ಥಗಿತ ಗೊಳಿಸಲಾಯಿತು. ಅಲ್ಲದೆ ಬಳಿಕ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 445 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ ಆರಂಭಿಸಿದ್ದ ಟೀಮ್ ಇಂಡಿಯಾ ಫಾಲೋ ಆನ್‌ ಭೀತಿ ಎದುರಿಸುತ್ತಿತ್ತು. ಈ ವೇಳೆ ಜಸ್ಪ್ರಿತ್ ಬುಮ್ರಾ ಹಾಗೂ ಆಕಾಶ್ ದೀಪ್ ಕೊನೆಯ ವಿಕೆಟ್‌ಗೆ ಸೊಗಸಾದ ಜೊತೆಯಟವನ್ನು ನೀಡಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಪರಿಣಾಮ ಭಾರತ 260 ರನ್‌ಗಳಿಗೆ ಸರ್ವಪತನ ಹೊಂದಿತು. ಆಸ್ಟ್ರೇಲಿಯಾ ಬೇಗನೆ ರನ್‌ ಕಲೆ ಹಾಕುವ ಭರಾಟೆಯಲ್ಲಿ 89 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಡಿಕ್ಲೇರ್ ಮಾಡಿಕೊಂಡಿತು. ಭಾರತ ಎರಡನೇ ಇನಿಂಗ್ಸ್‌ನಲ್ಲಿ 8 ರನ್‌ ಗಳಿಸಿದ್ದಾಗ ಪಂದ್ಯವನ್ನು ನಿಲ್ಲಿಸಲಾಯಿತು.

Story first published: Wednesday, December 18, 2024, 19:00 [IST]
Other articles published on Dec 18, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+