IND vs SA Final: 8334 ರನ್, 6 ಸೆಂಚುರಿ, 69 ಅರ್ಧಶತಕ; ಫೈನಲ್ ಬಳಿಕ ಟಿ20 ಕ್ರಿಕೆಟ್‌ಗೆ ರೋಹಿತ್-ಕೊಹ್ಲಿ ವಿದಾಯ?
ಜೂನ್ 29 ಶನಿವಾರ, 10 ವರ್ಷಗಳ ಬಳಿಕ 2024ರ ಟಿ20ನ ವಿಶ್ವಕಪ್ ಫೈನಲ್ ತಲುಪಿರುವ ಭಾರತ ತಂಡವು ಚೋಕರ್ಸ್ ಹಣೆ ಪಟ್ಟಿ ಹೊಂದಿರುವ ದಕ್ಷಿಣ ಆಫ್ರಿಕಾ ವಿರುದ್ಧ ಪ್ರಶಸ್ತಿ ಗೆಲ್ಲಲು ಇಂದು ಸೆಣಸಾಡಲಿದೆ.
ಟೀಮ್ ಇಂಡಿಯಾವನ್ನು ಮುನ್ನೆಡೆಸುತ್ತಿರುವ ರೋಹಿತ್ ಶರ್ಮಾ ಅವರು ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ನಾಯಕನಾಗಿ ಹೊರ ಹೊಮ್ಮಿದ್ದಾರೆ. ಆದರೆ ಟೀಮ್ ಇಂಡಿಯಾ ಯಾವುದೇ ಐಸಿಸಿ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ.

ಇದೀಗ 2024ರ ಟಿ20 ವಿಶ್ವಕಪ್ ಫೈನಲ್‌ಗೆ ಬಂದಿರುವ ಟೀಮ್ ಇಂಡಿಯಾ ಐಸಿಸಿ ಟ್ರೋಫಿಯಿಂದ ಕೇವಲ ಒಂದು ಹೆಜ್ಜೆ ದೂರದಲ್ಲಿದೆ. ಈ ಮೂಲಕ ನಾಯಕ ರೋಹಿತ್ ಶರ್ಮಾ ಹಾಗು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯಂತಹ ಶ್ರೇಷ್ಠ ಆಟಗಾರರು ತಮ್ಮ ವೃತ್ತಿಜೀವನ ಮಹತ್ತರ ಸಾಧನೆಯನ್ನು ಮಾಡುವ ಅವಕಾಶವನ್ನು ಹೊಂದಿದ್ದಾರೆ.
ಏಕೆಂದರೆ 2022ರ ಟಿ20 ಮತ್ತು 2023ರ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಟ್ರೋಫಿಯ ಸಮೀಪಕ್ಕೆ ಬಂದು ಹಿಂತಿರುಗಿದಾಗ ರೋಹಿತ್ ಮತ್ತು ಕೊಹ್ಲಿ ಕಣ್ಣುಗಳು ತೇವವಾಗಿದ್ದವು. ಆದರೆ ಈ ಬಾರಿ ಭಾರತಕ್ಕೆ ಆ ಎಲ್ಲ ಸೋಲುಗಳ ನೋವಿಗೆ ಮುಲಾಮು ಸಿಗುವ ನಿರೀಕ್ಷೆಯಿದೆ.

ಇಂದು ನಡೆಯುವ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಐತಿಹಾಸಿಕ ಗೆಲುವಿಗಾಗಿ ಟೀಮ್ ಇಂಡಿಯಾ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನೊಂದೆಡೆ ರೋಹಿತ್ ಶರ್ಮಾ ಹಾಗು ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಗೆಲುವಿ ಬಳಿಕ ಚುಟುಕು ಕ್ರಿಕೆಟ್‌ಗೆ ವಿದಾಯ ಹೇಳುತ್ತಾರೆ ಎಂಬ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ.
ಟಿ20ಯಲ್ಲಿ ರೋಹಿತ್-ಕೊಹ್ಲಿ ಯುಗ ಅಂತ್ಯ?
2007ರ ಆರಂಭಿಕ ಟಿ20 ವಿಶ್ವಕಪ್‌ನಿಂದ ಇಲ್ಲಿಯವರೆಗೂ ನಡೆದ ಎಲ್ಲಾ ಆವೃತ್ತಿಗಳಲ್ಲಿ ಟೀಮ್ ಇಂಡಿಯಾ ಪರ ರೋಹಿತ್ ಆಡಿದ್ದಾರೆ. 2022ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ನಂತರ ಸುಮಾರು ಒಂದು ವರ್ಷಗಳ ಕಾಲ ರೋಹಿತ್-ಕೊಹ್ಲಿ ಚುಟುಕು ಕ್ರಿಕೆಟ್‌ನಿಂದ ದೂರವಿದ್ದರು.
ರೋಹಿತ್ ಶರ್ಮಾ ಮತ್ತೊಮ್ಮೆ ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನೆಡೆಸುತ್ತಿದ್ದು, 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಂದು ಪಂದ್ಯವನ್ನು ಸೋಲದೆ ಫೈನಲ್ ತಲುಪಿದ್ದು, ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಅಲ್ಲದೆ, ಈ ಫೈನಲ್ ಪಂದ್ಯ ರೋಹಿತ್ ಮತ್ತು ಕೊಹ್ಲಿ ಅವರ ಕೊನೆಯ ಟಿ20 ಪಂದ್ಯವಾಗಿರಬಹುದು. ಏಕೆಂದರೆ ಈ ಹಿಂದೆಯೇ ಬಿಸಿಸಿಐ ಮತ್ತು ರಾಷ್ಟ್ರೀಯ ಆಯ್ಕೆದಾರರು ಭಾರತ ಕ್ರಿಕೆಟ್ ತಿರುವು ಪಡೆಯಲಿದೆ ಎಂದು ಸೂಚಿಸಿದ್ದಾರೆ.
ಮುಂದಿನ ತಿಂಗಳು ಜಿಂಬಾಬ್ವೆ ಸರಣಿಯಿಂದ ಈ ಬದಲಾವಣೆ ಆರಂಭವಾಗಲಿದೆ. ಈಗಾಗಲೇ ಜಿಂಬಾಬ್ಬೆ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟವಾಗಿದೆ.
ಈ ತಂಡದಲ್ಲಿ ರೋಹಿತ್ ಮತ್ತು ಕೊಹ್ಲಿ ಹೊರತಾಗಿ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಆಯ್ಕೆ ಆಗಿಲ್ಲ. ಹೀಗಾಗಿ ಕೊಹ್ಲಿ ಹಾಗು ರೋಹಿತ್ ಟಿ20 ಕ್ರಿಕೆಟ್‌ನಿಂದ ದೂರ ಸರಿಯಲಿದ್ದಾರೆ ಎಂಬ ಮಾತುಗಳನ್ನು ಅಭಿಮಾನಿಗಳು ಆಡುತ್ತಿದ್ದಾರೆ.
ರೋಹಿತ್-ಕೊಹ್ಲಿ ಆಟ ಸ್ಮರಣೀಯ
ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿ ಮತ್ತು ರೋಹಿತ್ ಇಲ್ಲಿಯವರೆಗೆ ಅತ್ಯುತ್ತಮವಾಗ ತಮ್ಮ ಆಟವನ್ನು ಆಡಿದ್ದಾರೆ. ಆದರೆ 2024 ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಕಳಪೆ ಫಾರ್ಮ್‌ನಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ.
ಇದರ ಮಧ್ಯೆ ಒಂದು ವೇಳೆ ಟೀಮ್ ಇಂಡಿಯಾ ಫೈನಲ್‌ನಲ್ಲಿ ಪ್ರಶಸ್ತಿ ಗೆದ್ದರೆ ವಿರಾಟ್ ಕೊಹ್ಲಿ ಪಾಲಿಗೆ ಅತ್ಯಂತ ಸಂತಸ ಕ್ಷಣವಾಗಲಿದೆ. ವಿರಾಟ್ 2011ರ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಾರೆ. ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವುದು ರೋಹಿತ್ ಶರ್ಮಾ ಕನಸಾಗಿದೆ.
ಇಲ್ಲಿಯವರೆಗೆ ಕೊಹ್ಲಿ ಮತ್ತು ರೋಹಿತ್ ಜೋಡಿ 8334 ಟಿ20 ಅಂತರರಾಷ್ಟ್ರೀಯ ರನ್‌ಗಳು, 6 ಸೆಂಚುರಿಗಳು, 69 ಅರ್ಧ ಶತಕಗಳು ಹಾಗು 119 ಕ್ಯಾಚ್‌ಗಳನ್ನು ತಮ್ಮ ಹೆಗಲ ಮೇಲೆ ಹೊತ್ತಿದ್ದಾರೆ.
ಜೊತೆಗೆ 2024ರ ಟಿ20 ವಿಶ್ವಕಪ್ ಗೆದ್ದರೆ ಈ ಜೋಡಿ ಇತಿಹಾಸ ಬರೆಯಲಿದೆ. ರೋಹಿತ್ ಶರ್ಮಾ ನಾಯಕತ್ವದಿಂದ ಕೆಳಗಿಳಿದರೆ ಟೀಮ್ ಇಂಡಿಯಾದ ಹೊಸ ಸಾರಥಿಯ ಸ್ಥಾನಕ್ಕೆ ಪ್ರಬಲ ಪೈಪೋಟಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications