ಅಭಿಮಾನಿಗಳ ನೆನೆದು ವಿಶೇಷ ಟ್ವೀಟ್ ಮಾಡಿದ ರೋಹಿತ್ ಶರ್ಮಾ

ನವದೆಹಲಿ: ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಖುಷಿಯಾಗಿದ್ದಾರೆ. ಅಭಿಮಾನಿಗಳ ಎದುರಿಗೆ ಬ್ಯಾಟ್ ಬೀಸಿ ಸಂಭ್ರಮಿಸಬೇಕು ಎಂದು ಕಾಯುತ್ತಿದ್ದ ಆಕ್ರಮಣಕಾರಿ ಆಟಗಾರನಿಗೆ ಮತ್ತೆ ಅಭಿಮಾನಿಗಳ ಎದುರು ಕ್ರಿಕೆಟ್ ಆಡುವ ಅವಕಾಶ ಸಿಕ್ಕಿರುವುದು ಖುಷಿ ನೀಡಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ. ಕೋವಿಡ್ ಕಾರಣ ಅಭಿಮಾನಿಗಳಿಲ್ಲದ ಖಾಲಿ ಮೈದಾನದಲ್ಲಿ ಆಡಿ ಬೇಜಾರಾಗಿದ್ದ ಶರ್ಮಾಗೆ ಅಭಿಮಾನಿಗಳು ಮತ್ತೆ ಮೈದಾನಕ್ಕೆ ಬರಲಿದ್ದಾರೆ ಅನ್ನೋ ಸಂಗತಿ ಖುಷಿ ನೀಡಿದೆ. ಈ ಖುಷಿಯನ್ನು ಶರ್ಮಾ ಟ್ವೀಟ್ ಮೂಲಕ ತೋರಿಕೊಂಡಿದ್ದಾರೆ.
ಮೇ 24ರ ಗುರುವಾರ (ಮೇ 27) ಟ್ವೀಟ್ ಮಾಡಿರುವ ರೋಹಿತ್, 'ಸ್ನೇಹಿತರೆ, ನಾವು ಮತ್ತೆ ಜೊತೆಯಾಗುತ್ತಿದ್ದೇವೆ. ಇದಕ್ಕಾಗೇ ನಾನು ಕಾಯುತ್ತಿದ್ದೆ' ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳತ್ತ ಮುಖ ಮಾಡಿ ಶತಕ ಸಂಭ್ರಮಾಚರಿಸುತ್ತಿರುವ ಚಿತ್ರವನ್ನು ರೋಹಿತ್ ಟ್ವೀಟ್ ಜೊತೆ ಹಾಕಿಕೊಂಡಿದ್ದಾರೆ.
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಜೂನ್ 18-22ರವರೆಗೆ ಸೌತಾಂಪ್ಟನ್‌ನ ರೋಸ್‌ಬೌಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ 3:30 PMನಂತೆ ಪಂದ್ಯ ಆರಂಭಗೊಳ್ಳಲಿದೆ. ಈ ಪಂದ್ಯದ ಮೂಲಕ ಬಹಳ ದಿನಗಳ ನಂತರ ಅಭಿಮಾನಿಗಳು ಮೈದಾನದಲ್ಲಿದ್ದು ಪಂದ್ಯ ವೀಕ್ಷಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications