Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋಹಿತ್ ಶರ್ಮಾಗೆ ಟಿ20 ವಿಶ್ವಕಪ್, ಐಪಿಎಲ್ ಎರಡರಲ್ಲೂ ಆಡುವಾಸೆ

Rohit Sharma wants to play both T20 World Cup and IPL

ಮುಂಬೈ, ಜೂನ್ 15: ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತದ ಉಪನಾಯಕರಾಗಿರುವ ರೋಹಿತ್ ಶರ್ಮಾಗೆ ಟಿ20 ವಿಶ್ವಕಪ್ ಮತ್ತು ಐಪಿಎಲ್ ಎರಡರಲ್ಲೂ ಭಾಗವಹಿಸುವಾಸೆಯಿದೆ. ಕೊರೊನಾವೈರಸ್‌ ಹೊರತಾಗಿಯೂ ಒಂದು ವೇಳೆ ಎರಡೂ ಟೂರ್ನಿಗಳೂ ನಡೆದರೆ ಎರಡರಲ್ಲೂ ಪಾಲ್ಗೊಳ್ಳಲು ಬಯಸಿರುವುದಾಗಿ ಶರ್ಮಾ ಹೇಳಿದ್ದಾರೆ.

ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಇನ್ನೂ ಟಿ20 ವಿಶ್ವಕಪ್‌ ಭವಿಷ್ಯದ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಮುಂದಿನ ತಿಂಗಳು ಟೂರ್ನಿ ಬಗ್ಗೆ ನಿರ್ಧಾರ ತಾಳುವುದಾಗಿ ಐಸಿಸಿ ಹೇಳಿಕೊಂಡಿದೆ. ಸದ್ಯಕ್ಕೆ ಟಿ20 ವಿಶ್ವಕಪ್‌ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಸಲು ದಿನ ನಿಗದಿಯಾಗಿತ್ತು.

'ನೀವು ಐಪಿಎಲ್ ಮತ್ತು ಟಿ20 ವಿಶ್ವಕಪ್ ಇವುಗಳಲ್ಲಿ ಯಾವುದರಲ್ಲಿ ಆಡಲು ಬಯಸುತ್ತೀರಿ?' ಎಂದು ನಾಲ್ಕು ಬಾರಿಯ ಐಪಿಎಲ್ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರಲ್ಲಿ ಅಭಿಮಾನಿಗಳು ಇನ್‌ಸ್ಟಾಗ್ರಾಮ್ ಲೈವ್ ಚಾಟ್‌ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ರೋಹಿತ್, 'ಎರಡಕ್ಕೂ ಆದ್ಯತೆ ನೀಡುತ್ತೇನೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಈ ವರ್ಷದ ಅಂತ್ಯಕ್ಕೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ ಅಲ್ಲಿ ಟೆಸ್ಟ್ ಸರಣಿ ಆಡಲಿದೆ. ಇದರಲ್ಲಿ ಒಂದು ಡೇ-ನೈಟ್ ಟೆಸ್ಟ್ ಕೂಡ ಸೇರಿದೆ. ಈ ಪಿಂಕ್‌ ಬಾಲ್ ಟೆಸ್ಟ್‌ನ ಸವಾಲು ಸ್ವೀಕರಿಸಲು ಬಯಸಿರುವುದಾಗಿಯೂ ಶರ್ಮಾ ತಿಳಿಸಿದ್ದಾರೆ.

Story first published: Monday, June 15, 2020, 9:40 [IST]
Other articles published on Jun 15, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+