MI vs RR: ಮೈದಾನಕ್ಕೆ ನುಗ್ಗಿದ ಅಭಿಮಾನಿ ಕಂಡು ಹೌಹಾರಿದ ರೋಹಿತ್ ಶರ್ಮಾ!
ಸೋಮವಾರ, ಏಪ್ರಿಲ್ 1ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ 2024ರ ಪಂದ್ಯದ ಸಂದರ್ಭದಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆಯಿತು.
ಮುಂಬೈ ಇಂಡಿಯನ್ಸ್ ಫೀಲ್ಡಿಂಗ್ ಮಾಡುತ್ತಿದ್ದಾಗ ಅಭಿಮಾನಿಯೊಬ್ಬರು ಭದ್ರತೆಯನ್ನು ಉಲ್ಲಂಘಿಸಿ ಅವರ ಕ್ರಿಕೆಟ್ ಆರಾಧ್ಯ ದೈವ ರೋಹಿತ್ ಶರ್ಮಾ ಅವರನ್ನು ಭೇಟಿಯಾಗಲು ಮೈದಾನಕ್ಕೆ ನುಗ್ಗಿದರು.

ಆ ವೇಳೆ ಸ್ಲಿಪ್‌ನಲ್ಲಿ ನಿಂತಿದ್ದ ರೋಹಿತ್ ಶರ್ಮಾ ಅವರನ್ನು ಸಮೀಪಿಸಲು ಅಭಿಮಾನಿ ಯಶಸ್ವಿಯಾದ. ಇದೇ ವೇಳೆ ತಮ್ಮ ಬಳಿಗೆ ಓಡಿ ಬಂದ ಅಭಿಮಾನಿಯನ್ನು ನೋಡಿ ರೋಹಿತ್ ಶರ್ಮಾ ಒಂದು ಕ್ಷಣ ಶಾಕ್ ಆದರು. ಮೈದಾನದಲ್ಲಿ ಇದ್ದಕ್ಕಿದ್ದ ಹಾಗೆ ಅಭಿಮಾನಿಯನ್ನು ನೋಡಿ ಮೊದಲಿಗೆ ಭಯವಾಯಿತು ಎಂದು ಅವರು ಗಾಬರಿಯಾಗಿ ಹಿಂದೆ ಸರಿದ ಪ್ರತಿಕ್ರಿಯೆ ಹೇಳುತ್ತದೆ.
ಆಟಗಾರರ ಸುರಕ್ಷತೆ, ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪಂದ್ಯದ ಸಮಗ್ರತೆಯನ್ನು ಎತ್ತಿಹಿಡಿಯಲು ಭದ್ರತಾ ಸಿಬ್ಬಂದಿ ತ್ವರಿತವಾಗಿ ಕಾರ್ಯನಿರ್ವಹಿಸಿದರು. ಅಭಿಮಾನಿಯನ್ನು ಆಟದ ಪ್ರದೇಶದಿಂದ ತ್ವರಿತವಾಗಿ ಹೊರಕ್ಕೆ ಕರೆದೊಯ್ದರು.
ಇನ್ನು ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಫಲಿತಾಂಶಕ್ಕೆ ಬಂದರೆ, ಉಭಯ ತಂಡಗಳು ತಮ್ಮ ಮೂರನೇ ಪಂದ್ಯದಲ್ಲಿ ಸೆಣಸಾಡಿದವು. ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡವು ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ ಸತತ 3ನೇ ಗೆಲುವು ದಾಖಲಿಸಿತು.
ಇನ್ನು ತವರಿನ ಅಂಗಳದಲ್ಲಿಯೂ ಗೆಲುವು ಸಾಧಿಸಲಾಗದೇ ಮುಂಬೈ ಇಂಡಿಯನ್ಸ್ ಸತತ ಮೂರನೇ ಪಂದ್ಯವನ್ನು ಸೋತಿದೆ. ಹೊಸ ನಾಯಕನ ಅಡಿಯಲ್ಲಿ ಮೊದಲ ಗೆಲುವು ಪಡೆಯಲು ಇನ್ನೂ ಕಾಯಬೇಕಾಗಿದೆ.
ಮೊದಲು ಬೌಲಿಂಗ್ ಮಾಡುವ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್‌ಗಳಿಗೆ ನಿಯಂತ್ರಿಸಿತು. ನಂತರ 27 ಎಸೆತಗಳು ಮತ್ತು 6 ವಿಕೆಟ್‌ಗಳು ಬಾಕಿ ಇರುವಂತೆಯೇ ಗುರಿಯನ್ನು ಬೆನ್ನಟ್ಟಿತು.
ಫಾರ್ಮ್‌ನಲ್ಲಿರುವ ರಿಯಾನ್ ಪರಾಗ್ ಮತ್ತೊಮ್ಮೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. 39 ಎಸೆತಗಳನ್ನು ಎದುರಿಸಿ ಅಜೇಯ 54 ರನ್ ಗಳಿಸಿದರು ಮತ್ತು ತಂಡವನ್ನು ಸುಲಭವಾಗಿ ಗೆಲ್ಲಿಸಿದರು.
ಮುಂಬೈ ಇಂಡಿಯನ್ಸ್ ಈ ಋತುವಿನ ಮೊದಲ ತವರಿನ ಪಂದ್ಯದ ಇನ್ನಿಂಗ್ಸ್‌ನ 4ನೇ ಓವರ್‌ನಲ್ಲಿ ರನ್‌ಗಳಿಗೆ 4 ವಿಕೆಟ್ ಕಡೆದುಕೊಂಡು ತತ್ತರಿಸಿದಾಗ ದುರಂತ ಆರಂಭವನ್ನು ಪಡೆಯಿತು.
ಮತ್ತೆ ಅಭಿಮಾನಿಗಳ ಅಬ್ಬರಕ್ಕೆ ಒಳಗಾದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ 21 ಎಸೆತಗಳಲ್ಲಿ 34 ರನ್ ಗಳಿಸಿ ಪ್ರತಿಕ್ರಿಯಿಸಿದರು. ಇನ್ನು ತಿಲಕ್ ವರ್ಮಾ 29 ಎಸೆತಗಳಲ್ಲಿ 32 ರನ್ ಗಳಿಸಿದರು.
ರಾಜಸ್ಥಾನ್ ರಾಯಲ್ಸ್ ಪರ ಅನುಭವಿ ವೇಗಿ ಟ್ರೆಂಟ್ ಬೌಲ್ಟ್ 22 ರನ್ ನೀಡಿ 3 ವಿಕೆಟ್ ಪಡೆದರೆ, ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ 11 ರನ್ ನೀಡಿ 3 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications