Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ನನ್ನ ಎಸೆತಗಳನ್ನು ಧೈರ್ಯವಾಗಿ ಎದುರಿಸಲಾರ'; ಹಳೇ ಹೇಳಿಕೆ ಕೆದಕಿ ರೋಹಿತ್‌ಗೆ ಟಾಂಗ್ ಕೊಟ್ಟ ಪಾಕ್ ಕ್ರಿಕೆಟಿಗ

Rohit Sharma was struggling while facing me says Mohammad Amir

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸೆಣಸಾಟವನ್ನು ಬದ್ಧವೈರಿಗಳ ಕಾಳಗ ಎಂದೇ ಕರೆಯಲಾಗುತ್ತದೆ. ಕ್ರಿಕೆಟ್‍ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಗಳು ಹುಟ್ಟುಹಾಕುವಷ್ಟು ಕುತೂಹಲ ಹಾಗೂ ಕ್ರೇಜ್ ಇತರೆ ಯಾವುದೇ ತಂಡಗಳ ನಡುವಿನ ಹಣಾಹಣಿಗೂ ಕೂಡ ಉಂಟಾಗುವುದಿಲ್ಲ. ಅದರಲ್ಲಿಯೂ ಐಸಿಸಿ ಟೂರ್ನಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಗಳೆಂದರೆ ಕ್ರೇಜ್ ದುಪ್ಪಟ್ಟಾಗಲಿದೆ.

ಇನ್ನು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಗಳು ಸಮೀಪಿಸುತ್ತದೆ ಎಂದಾಗ ಮಾಜಿ ಕ್ರಿಕೆಟಿಗರು ಹಾಗೂ ಹಾಲಿ ಕ್ರಿಕೆಟಿಗರು ಪಂದ್ಯಗಳ ಕುರಿತಾಗಿ ಹೇಳಿಕೆಗಳನ್ನು ನೀಡುವುದು ಸಾಮಾನ್ಯ. ಅದರಂತೆಯೇ ಈ ಹಿಂದೆ ರೋಹಿತ್ ಶರ್ಮಾ ಪಾಕಿಸ್ತಾನದ ಬೌಲರ್ ಓರ್ವನ ಕುರಿತು ಮಾತನಾಡುವಾಗ ಆತ ವಿಶ್ವ ಶ್ರೇಷ್ಠ ಆಟಗಾರನೇನು ಅಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು.

2016ರ ಏಷ್ಯಾ ಕಪ್ ಟೂರ್ನಿಯ ಸಮಯದಲ್ಲಿ ಮಾತನಾಡಿದ್ದ ರೋಹಿತ್ ಶರ್ಮಾ ಪಾಕಿಸ್ತಾನದ ಬೌಲರ್ ಓರ್ವನ ಕುರಿತು ಈ ರೀತಿ ಹೇಳಿಕೆ ನೀಡಿದ್ದರು. ಹಾಗೂ ಇದೀಗ ಈ ಹೇಳಿಕೆಯ ಕುರಿತು ಮಾತನಾಡಿರುವ ಪಾಕಿಸ್ತಾನದ ಬೌಲರ್ ರೋಹಿತ್ ಶರ್ಮಾಗೆ ಈ ಕೆಳಕಂಡಂತೆ ಟಾಂಗ್ ನೀಡಿದ್ದಾರೆ.

ಆತ ವಿಶ್ವಶ್ರೇಷ್ಠ ಬೌಲರ್ ಅಲ್ಲ ಎಂದಿದ್ದರು ರೋಹಿತ್ ಶರ್ಮಾ

ಆತ ವಿಶ್ವಶ್ರೇಷ್ಠ ಬೌಲರ್ ಅಲ್ಲ ಎಂದಿದ್ದರು ರೋಹಿತ್ ಶರ್ಮಾ

ರೋಹಿತ್ ಶರ್ಮಾ 2016ರ ಏಷ್ಯಾಕಪ್ ಟೂರ್ನಿಯ ಸಮಯದಲ್ಲಿ ಆಗಿನ ಪಾಕಿಸ್ತಾನ ತಂಡದ ಪ್ರಮುಖ ಬೌಲರ್ ಎಂದು ಗುರುತಿಸಿಕೊಂಡಿದ್ದ ಮೊಹಮ್ಮದ್ ಆಮೀರ್ ಕುರಿತು ಮಾತನಾಡಿ ಆತ ವಿಶ್ವಶ್ರೇಷ್ಠ ಬೌಲರ್ ಅಲ್ಲ, ಸತತವಾಗಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಆತನನ್ನು ವಿಶ್ವಶ್ರೇಷ್ಠ ಬೌಲರ್ ಎಂದು ಪರಿಗಣಿಸಬಹುದು ಎಂದು ಮೊಹಮ್ಮದ್ ಅಮೀರ್ ಕುರಿತು ಹೇಳಿಕೆ ನೀಡಿದ್ದರು.

ಹಲವು ವರ್ಷಗಳ ಬಳಿಕ ಆಮೀರ್ ತಿರುಗೇಟು

ಹಲವು ವರ್ಷಗಳ ಬಳಿಕ ಆಮೀರ್ ತಿರುಗೇಟು

ರೋಹಿತ್ ಶರ್ಮಾ ಅಂದು ನೀಡಿದ್ದ ಹೇಳಿಕೆಯ ಕುರಿತು ಸುಮಾರು 6 ವರ್ಷಗಳ ನಂತರ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಮೀರ್ ಇತ್ತಿಚಿಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ರೋಹಿತ್ ಶರ್ಮಾ ನೀಡಿದ ಹೇಳಿಕೆಯನ್ನು ನಾನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ, ಎಲ್ಲರಿಗೂ ಅವರದ್ದೇ ಆದ ವೈಯಕ್ತಿಕ ಅಭಿಪ್ರಾಯಗಳಿರುತ್ತವೆ, ನನ್ನನ್ನು ಎಲ್ಲರೂ ವಿಶ್ವಶ್ರೇಷ್ಠ ಬೌಲರ್ ಎಂದು ಪರಿಗಣಿಸಬೇಕು ಎಂದುಕೊಳ್ಳುವುದು ತಪ್ಪು, ಇಂಥ ಅಭಿಪ್ರಾಯಗಳಿಗೆ ಬೇಸರಗೊಳ್ಳಬಾರದು ಎಂದು ಹೇಳಿಕೆ ನೀಡಿದ್ದಾರೆ.

ನನ್ನ ಎಸೆತ ಎದುರಿಸಲು ಆತ ಪರಿತಪಿಸುತ್ತಿದ್ದ

ನನ್ನ ಎಸೆತ ಎದುರಿಸಲು ಆತ ಪರಿತಪಿಸುತ್ತಿದ್ದ

ಇನ್ನೂ ಮುಂದುವರಿದು ಮಾತನಾಡಿರುವ ಮೊಹಮ್ಮದ್ ಅಮೀರ್ ರೋಹಿತ್ ಶರ್ಮಾ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ, ಆತ ನನ್ನ ಎಸೆತಗಳನ್ನು ಸಮರ್ಥವಾಗಿ ಎದುರಿಸಲಾಗದೇ ಪರಿತಪಿಸುತ್ತಿದ್ದ, ಆದರೂ ಸಹ ಆತನನ್ನು ನಾನು ವಿಶ್ವ ಶ್ರೇಷ್ಠ ಆಟಗಾರ ಎಂದು ಕರೆಯುತ್ತೇನೆ ಎಂದು ಹೇಳಿಕೆ ನೀಡುವುದರ ಮೂಲಕ ಪರೋಕ್ಷವಾಗಿ ಕಾಲೆಳೆದಿದ್ದಾರೆ.

Story first published: Tuesday, June 21, 2022, 18:25 [IST]
Other articles published on Jun 21, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+