ICC Awards: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಪ್ರಶಸ್ತಿ ಗೆದ್ದ ಎಲ್ಲರ ಪಟ್ಟಿ

ಬೆಂಗಳೂರು, ಜನವರಿ 15: ಟೀಮ್ ಇಂಡಿಯಾದ ಓಪನರ್, 'ಹಿಟ್‌ಮ್ಯಾನ್' ರೋಹಿತ್ ಶರ್ಮಾಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) '2019ರ ವರ್ಷದ ಏಕದಿನ ಆಟಗಾರ' ಪ್ರಶಸ್ತಿ ಲಭಿಸಿದೆ. ಭಾರತದ ನಾಯಕ ವಿರಾಟ್ ಕೊಹ್ಲಿಗೆ 'ವರ್ಷದ ಸ್ಫೂರ್ತಿಯ ಆಟಗಾರ' ಪ್ರಶಸ್ತಿ ದೊರೆತಿದೆ.
2019ರಲ್ಲಿ ಏಕದಿನದಲ್ಲಿ ಅದ್ಭುತ ಫಾರ್ಮ್ ತೋರಿದ ರೋಹಿತ್‌ಗೆ ಗೌರವ ಸಂದರೆ, ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿಯ ವೇಳೆ ಕೊಹ್ಲಿ ತೋರಿದ ಸ್ಫೂರ್ತಿದಾಯಕ ನಡೆಗಾಗಿ ವಿರಾಟ್ ಐಸಿಸಿಯ ಸ್ಫೂರ್ತಿಯ ಆಟಗಾರನಾಗಿ ಮಿನುಗಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಐಸಿಸಿ ಅವಾರ್ಡ್ಸ್ ಲಭಿಸಿದ ಎಲ್ಲರ ಪಟ್ಟಿ ಕೆಳಗಿದೆ.
ಹಿಟ್‌ಮ್ಯಾನ್ ರೋಹಿತ್
ಕಳೆದ ವರ್ಷ ಅಂದರೆ 2019ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಒಟ್ಟು 28 ಏಕದಿನ ಪಂದ್ಯಗಳಲ್ಲಿ 1409 ರನ್ ಕಲೆ ಹಾಕಿದ್ದರು. ಇದರಲ್ಲಿ 7 ಶತಕಗಳೂ ಸೇರಿದ್ದವು. ಅದರಲ್ಲೂ ಐಸಿಸಿ ವಿಶ್ವಕಪ್ ವೇಳೆ 5 ಶತಕಗಳನ್ನು ಬಾರಿಸಿದ್ದ ಶರ್ಮಾ ವಿಶ್ವದಾಖಲೆ ನಿರ್ಮಿಸಿದ್ದರು. ಇದಕ್ಕಾಗಿ ಶರ್ಮಾಗೆ 2019ರ ವರ್ಷದ ಏಕದಿನ ಆಟಗಾರ ಗೌರವ ಸಂದಿದೆ.
ಚಾಹರ್ ಬೆಸ್ಟ್ ಟಿ20 ಬೌಲರ್
ಅಂತಾರಾಷ್ಟ್ರೀಯ ಟಿ20ಯಲ್ಲಿ ಅದ್ಭುತ ಬೌಲಿಂಗ್ ಸಾಧನೆ ತೋರಿದ ಭಾರತದ ವೇಗಿ ದೀಪಕ್ ಚಹಾರ್‌ಗೆ ಐಸಿಸಿ ಪ್ರಶಸ್ತಿ ದೊರೆತಿದೆ. ಭಾರತದ ನಾಗ್ಪುರದಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಟಿ20ಯಲ್ಲಿ ಚಾಹರ್ 7 ರನ್‌ಗೆ 6 ವಿಕೆಟ್ ಪಡೆದಿದ್ದರು. ಇದರಲ್ಲಿ ಹ್ಯಾಟ್ರಿಕ್ ವಿಕೆಟ್ ದಾಖಲೆಯೂ ಸೇರಿತ್ತು.
ಮನಗೆದ್ದಿದ್ದ ವಿರಾಟ್ ಕೊಹ್ಲಿ
ಐಸಿಸಿ ವಿಶ್ವಕಪ್ ಟೂರ್ನಿಯ ಭಾರತ-ಆಸ್ಟ್ರೇಲಿಯಾ ಮುಖಾಮುಖಿಯ ವೇಳೆ ಆಸೀಸ್ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರನ್ನು ಅಭಿಮಾನಿಗಳು ಅಣಕಿಸಿದ್ದರು. ಆಗ ಅಣಕಿಸುವ ಬದಲು ಸ್ಮಿತ್ ಆಟಕ್ಕೆ ಬೆಂಬಲಿಸಿ ಎಂದು ಕೊಹ್ಲಿ ಅಭಿಮಾನಿಗಳಲ್ಲಿ ಕೋರಿಕೊಂಡಿದ್ದರು. ಇದಕ್ಕಾಗಿ ಕೊಹ್ಲಿ, ಸ್ಫೂರ್ತಿಯ ಆಟಗಾರನಾಗಿ ಐಸಿಸಿಯಿಂದ ಗುರುತಿಸಿಕೊಂಡಿದ್ದಾರೆ.
ವೈಯಕ್ತಿಕ ಪ್ರಶಸ್ತಿ ಗೆದ್ದ ಎಲ್ಲರ ಪಟ್ಟಿ
1. ವರ್ಷದ ಅತ್ಯುತ್ತಮ ಕ್ರಿಕೆಟಿಗರಿಗಾಗಿ ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ - ಬೆನ್ ಸ್ಟೋಕ್ಸ್ (ಇಂಗ್ಲೆಂಡ್)
2. ವರ್ಷದ ಟೆಸ್ಟ್ ಕ್ರಿಕೆಟಿಗ - ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ)
3. ವರ್ಷದ ಏಕದಿನ ಕ್ರಿಕೆಟಿಗ - ರೋಹಿತ್ ಶರ್ಮಾ (ಭಾರತ)
4. ವರ್ಷದ ಟಿ20ಐ ಸಾಧನೆ - ದೀಪಕ್ ಚಹರ್ (ಭಾರತ, 6-7 ವಿ ಬಾಂಗ್ಲಾದೇಶ)
5. ವರ್ಷದ ಉದಯೋನ್ಮುಖ ಕ್ರಿಕೆಟಿಗ - ಮಾರ್ನಸ್ ಲ್ಯಾಬುಸ್ಚಾಗ್ನೆ (ಆಸ್ಟ್ರೇಲಿಯಾ)
6. ವರ್ಷದ ಸಹಾಯಕ (ಅಸೋಸಿಯೇಟ್) ಕ್ರಿಕೆಟಿಗ - ಕೈಲ್ ಕೋಟ್ಜರ್ (ಸ್ಕಾಟ್ಲೆಂಡ್)
7. ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ - ವಿರಾಟ್ ಕೊಹ್ಲಿ, ಓವಲ್‌ನಲ್ಲಿ ಸ್ಟೀವ್ ಸ್ಮಿತ್‌ರನ್ನು ಅಣಕಿಸುತ್ತಿದ್ದ ಅಭಿಮಾನಿಗಳಲ್ಲಿ ಅಣಕಿಸಿದಂತೆ ಕೊಹ್ಲಿ ಹೇಳಿದ್ದರು.
8. ವರ್ಷದ ಅಂಪೈರ್‌ಗಾಗಿ ಡೇವಿಡ್ ಶೆಫರ್ಡ್ ಟ್ರೋಫಿ - ರಿಚರ್ಡ್ ಇಲಿಂಗ್ವರ್ತ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications