ಫಿಟ್ನೆಸ್ ಟೆಸ್ಟ್ ಹೊರತಾಗಿ ರೋಹಿತ್ ಶರ್ಮಾ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲ್ಲ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಆವೃತ್ತಿ ಕೊನೆಗೊಂಡ ಬಳಿಕ ಟೀಮ್ ಇಂಡಿಯಾ ಆಸ್ಟ್ರೇಲಿಯಾಕ್ಕೆ ಪ್ರವಾಸ ಸರಣಿಗೋಸ್ಕರ ಹೋಗಲಿದೆ. ಅಲ್ಲಿ ಮೂರು ಏಕದಿನ ಪಂದ್ಯಗಳು, ಮೂರು ಟಿ20ಐ ಪಂದ್ಯಗಳು ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಆಸ್ಟ್ರೇಲಿಯಾ-ಭಾರತ ಪ್ರವಾಸ ಸರಣಿಗಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಪ್ರಕಟಿಸಿದ್ದ ತಂಡದಲ್ಲಿ ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹೆಸರಿರಲಿಲ್ಲ. ಈಗ ಶರ್ಮಾಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಅವಕಾಶ ನೀಡಲು ಬಿಸಿಸಿಐ ಯೋಚಿಸಿದೆ. ಆದರೆ ಒಂದು ಕಂಡೀಶನ್ ಹಾಕಿದೆ.
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾಗಿರುವ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಪಯಣಿಸಬೇಕಾದರೆ ಫಿಟ್ನೆಸ್ ಟೆಸ್ಟ್‌ನಲ್ಲಿ ಪಾಸಾಗಬೇಕು. ಇಲ್ಲದಿದ್ದರೆ ರೋಹಿತ್ ಆಸ್ಟ್ರೇಲಿಯಾಕ್ಕೆ ಹೋಗುವ ಸಾಧ್ಯತೆಯಿಲ್ಲ ಎಂದು ಬಿಸಿಸಿಐ ಹೇಳಿದೆ.
'ಟೀಮ್ ಇಂಡಿಯಾ ಫಿಸಿಯೋ ನಿತಿನ್ ಪಾಟೆಲ್ ನಡೆಸುವ ಫಿಟ್ನೆಸ್ ಪರೀಕ್ಷೆ ಪಾಸ್ ಮಾಡದ ಹೊರತಾಗಿ ರೋಹಿತ್ ಶರ್ಮಾ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುತ್ತಿಲ್ಲ. ಪಾಟೆಲ್ ಮತ್ತು ಭಾರತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ರೋಹಿತ್ ಫಿಟ್ ಎಂದು ಘೋಷಿಸದಿದ್ದರೆ ರೋಹಿತ್ ಆಸ್ಟ್ರೇಲಿಯಾಕ್ಕೆ ಹೋಗಲಾರರು,' ಎಂದು ಬಿಸಿಸಿಐ ಮೂಲ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications