Rohit Sharma: 2027ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಆಡುತ್ತಾರಾ? ಬಿಸಿಸಿಐ ಪ್ಲ್ಯಾನ್ ಏನು?
ಟೀಮ್ ಇಂಡಿಯಾ ಸದ್ಯ ಭಾರೀ ಚರ್ಚೆಯಲ್ಲಿರುವ ತಂಡ. ಈ ತಂಡ ತನ್ನ ಪ್ರದರ್ಶನದ ಬಲದಿಂದ ಚರ್ಚೆಗಳು ಆಗುತ್ತಿಲ್ಲ. ಬದಲಿಗೆ ಈ ತಂಡದಲ್ಲಿ ಹಿರಿಯ ಆಟಗಾರರು ಕ್ರಿಕೆಟ್‌ನ ಕೆಲವು ಸ್ವರೂಪಗಳಿಗೆ ನಿವೃತ್ತಿ ನೀಡಿದ್ದರಿಂದ ಚರ್ಚೆಗಳು ಆರಂಭವಾಗಿವೆ. ಕಳೆದ ಒಂದು ವರೆ ದಶಕದಿಂದ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗದ ಆಧಾರ ಸ್ಥಂಭವಾಗಿದ್ದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ, ಐಪಿಎಲ್ ಮಧ್ಯದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇವರು ಇನ್ನು ಭಾರತದ ಪರ ಏಕದಿನ ಮಾದರಿಯಲ್ಲಿ ಮಾತ್ರ ಬ್ಯಾಟ್ ಮಾಡುತ್ತಾರೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಇನ್ನು ಏಕದಿನ ಕ್ರಿಕೆಟ್‌ನತ್ತ ತಮ್ಮ ಚಿತ್ತವನ್ನು ಹರಿಸಲಿದ್ದಾರೆ. ಈ ಇಬ್ಬರು ಆಟಗಾರರ ಉಪಸ್ಥಿತಿಯಲ್ಲಿ ತಂಡ ಒಮ್ಮೆ ಟಿ20 ವಿಶ್ವಕಪ್ ಹಾಗೂ ಒಮ್ಮೆ ಚಾಂಪಿಯನ್ಸ್ ಟ್ರೋಫಿಯನ್ನು ಒಂದೇ ವರ್ಷದ ಅವಧಿಯಲ್ಲಿ ಗೆದ್ದಿದೆ. ಇವರಿಬ್ಬರು ಆಟಗಾರರು 2027ರ ಏಕದಿನ ವಿಶ್ವಕಪ್ ಮೇಲೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಈ ಮೂಲಕ ತಮ್ಮ ಕ್ರಿಕೆಟ್ ವೃತ್ತಿ ಜೀವನವನ್ನು ಐಸಿಸಿ ಟ್ರೋಫಿ ಗೆಲ್ಲುವ ಮೂಲಕ ಕೊನೆಗೊಳಿಸುವ ಆಸೆ ಉಭಯ ಆಟಗಾರರಾದ್ದಾಗಿದೆ. ಇವರಿಬ್ಬರೂ ಮುಂದಿನ ವಿಶ್ವಕಪ್ ವರೆಗೆ ಏಕದಿನ ತಂಡದ ಭಾಗವಾಗಿರಲಿದ್ದಾರೆ ಇಬ್ಬರೂ ಆಟಗಾರರು ಭಾವಿಸಿದ್ದಾರೆ.

ವಿರಾಟ್ ಕೊಹ್ಲಿ ಫಿಟ್ ಆಗಿದ್ದು ಅವರ ಬ್ಯಾಟಿಂಗ್ ಸಹ ಸ್ಥಿರವಾಗಿದೆ. ಹೀಗಾಗಿ ಇವರಿಗೆ ಏಕದಿನ ತಂಡದಲ್ಲಿ ಸ್ಥಾನ ನೀಡುವ ಬಗ್ಗೆ ಯಾವುದೇ ಸಮಸ್ಯೆಗಳು ಕಾಣುತ್ತಿಲ್ಲ. ಆದರೆ ರೋಹಿತ್ ಶರ್ಮಾ ಮುಂದಿನ ಬಾರಿ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟ ಕಂಡಂತೆ ಆಗುತ್ತಿದೆ. ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಅಮೋಘ ಬ್ಯಾಟಿಂಗ್ ನಡೆಸಿದ್ದರು. ಇವರ ಸ್ಥಿರ ಬ್ಯಾಟಿಂಗ್ ಪ್ರದರ್ಶನದ ಫಲವಾಗಿಯೇ ತಂಡ ಫೈನಲ್ ವರೆಗೆ ತಂಡ ಪ್ರವೇಶ ಪಡೆಯಿತು. ರೋಹಿತ್ ಶರ್ಮಾ ಮುಂದಿನ ಐಸಿಸಿ ಟೂರ್ನಿಗಳಲ್ಲಿ ನಾಯಕತ್ವ ವಹಿಸುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಪರಿಸ್ಥಿತಿಗಳಲ್ಲಿ ರೋಹಿತ್‌ಗೆ ತಂಡದಲ್ಲಿ ಸ್ಥಾನ ಸಿಗುವುದು ಕೊಂಚ ಡೌಟ್.2027 ರ ವಿಶ್ವಕಪ್ ರೋಹಿತ್ ಅವರ ಕೊನೆಯ ವಿಶ್ವಕಪ್ ಆಗಿರಬಹುದು. ಆದ್ದರಿಂದ, ಅವರು ನಾಯಕರಾಗುವ ಸಾಧ್ಯತೆಗಳು ಕಡಿಮೆ.
ಟೀಮ್ ಇಂಡಿಯಾದ ಯಶಸ್ವಿ ನಾಯಕ
ಚಾಂಪಿಯನ್ಸ್ ಟ್ರೋಫಿಯ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನಿವೃತ್ತಿ ಪಡೆಯುತ್ತಾರೆ ಎಂದು ಬಿಸಿಸಿಐ ಭಾವಿಸಿತ್ತು. ರೋಹಿತ್ ಚಾಂಪಿಯನ್ ಟ್ರೋಫಿ ಗೆದ್ದ ಬಳಿಕ ಇವರು ವಿದಾಯ ಹೇಳಬಹುದು ಎಂದು ನಮ್ಮಲ್ಲಿಯೇ ಹೆಚ್ಚು ಜನ ಅಂದುಕೊಂಡಿದ್ದರು ಎಂದು ಬಿಸಿಸಿಐ ಮೂಲಗಳು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದೆ. ಇನ್ನು ರೋಹಿತ್ ಹಾಗೂ ಆಯ್ಕೆ ಸಮಿತಿಯ ನಡುವೆ ಅವರ ಏಕದಿನ ಭವಿಷಗುದ ಬಗ್ಗೆ ಯಾವುದೇ ಮಾತುಗಳು ನಡೆದಿಲ್ಲ ಎಂದು ತಿಳಿದು ಬಂದಿವೆ.

ಬಿಸಿಸಿಐ ಆಯ್ಕೆ ಸಮಿತಿ ಶೀಘ್ರದಲ್ಲಿ ಏಕದಿನ ಫಾರ್ಮೆಟ್‌ಗೆ ರೋಹಿತ್ ಉತ್ತರಾಧಿಕಾರಿಯ ಹುಡುಕಾಟ ನಡೆಸಲಿ ಎಂದು ತಿಳಿದು ಬಂದಿದೆ. ರೋಹಿತ್ ಟೆಸ್ಟ್ ಕ್ಯಾಪ್ಟನ್ಸಿ ಮೇಲೆ ಪ್ರಶ್ನೆಗಳು ಇದ್ದವು. ಆದರೆ ಸೀಮಿತ ಓವರ್‌ಗಳ ಮಾದರಿಯಲ್ಲಿ ರೋಹಿತ್ ಬೆಸ್ಟ್ ನಾಯಕ. ಕಳೆದ ಮೂರು ಐಸಿಸಿ ಟೂರ್ನಿಗಳಲ್ಲಿ ಭಾರತ ಕೇವಲ 1 ಪಂದ್ಯವನ್ನು ಮಾತ್ರ ಸೋತಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಮುಂದಾಳತ್ವದ ತಂಡ ಆಸ್ಟ್ರೇಲಿಯಾ ವಿರುದ್ಧ ಫೈನಲ್ ವಿರುದ್ಧ ಮಾತ್ರ ಸೋಲು ಕಂಡಿತ್ತು. ಇದಾದ ಬಳಿಕ ಭಾರತ 2024ರ ಟಿ20 ವಿಶ್ವಕಪ್, 2025ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಎತ್ತಿ ಹಿಡಿದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications