Rohit Sharma: ರೋಹಿತ್‌ರಿಂದ ನಾಯಕತ್ವ ಕಸಿದುಕೊಂಡ BCCI: ಹೇಗಿದೆ ಇವರ ಸಾಧನೆ?
ಟೀಮ್ ಇಂಡಿಯಾದ ಯಶಸ್ವಿ ನಾಯಕರ ಲೀಸ್ಟ್ ನೋಡ್ತಾ ಹೋದರೆ, ಆ ಪಟ್ಟಿಯಲ್ಲಿ ಅಗ್ರ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುವ ಹೆಸರು ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ. ಇವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಯಶಸ್ಸು ಕಂಡಿದೆ. ಇವರ ನಾಯಕತ್ವದಲ್ಲಿ ಹಲವು ಯುವ ಪ್ರತಿಭೆಗಳು ತಂಡದಲ್ಲಿ ಅವಕಾಶವನ್ನು ಪಡೆದು ಮಿಂಚಿವೆ. ಕಳೆದ ಏಳು ತಿಂಗಳು ಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ರೋಹಿತ್ ಶರ್ಮಾ ಮತ್ತೆ ಬ್ಲ್ಯೂ ಜೆರ್ಸಿಯಲ್ಲಿ ಮಿಂಚಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದರೆ ಈ ಬಾರಿ ಇವರು ನಾಯಕನಾಗಿ ಕಣಕ್ಕೆ ಇಳಿಯುತ್ತಿಲ್ಲ ಬದಲಿಗೆ ಒಬ್ಬ ಪ್ಲೇಯರ್ ಆಗಿ ಅಖಾಡ ಪ್ರವೇಶಿಸುತ್ತಿದ್ದಾರೆ. ಹಾಗಿದ್ದರೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರ ಸಾಧನೆ ಹೇಗಿದೆ ಎಂಬ ಬಗ್ಗೆ ವರದಿ ಇಲ್ಲಿದೆ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಹಾಗೂ ನ್ಯೂಜಿಲೆಂಡ್ ವಿರುದ್ಧದ ತವರಿನಲ್ಲಿ ಟೆಸ್ಟ್ ಸರಣಿಯಲ್ಲಿ ಸೋತ ಬಳಿಕ ರೋಹಿತ್ ಶರ್ಮಾ ನಿವೃತ್ತಿ ಘೋಷಿಸುತ್ತಾರೆ ಎಂಬ ಮಾತುಗಳು ಇದ್ದವು. ಆದರೆ ಇದಕ್ಕೆ ಯಾವುದಕ್ಕೂ ಸೊಪ್ಪು ಹಾಕದ ರೋಹಿತ್ ತಮ್ಮ ಆಟದತ್ತ ಗಮನ ಹರಿಸಿದರು. ಏಕದಿನ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿದ ರೋಹಿತ್ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸುವಲ್ಲಿ ಶ್ರಮಿಸಿದರು. ಇದಾದ ಬಳಿಕ ಇವರ ಮೇಲೆ ಟೀಕೆಗಳಿಗೆ ರೋಹಿತ್ ಅಂಗಳದಲ್ಲೇ ಉತ್ತರ ನೀಡಿದರು. ಆದರೂ ಬಿಸಿಸಿಐ ಇವರಿಗೆ ಏಕದಿನ ಫಾರ್ಮೆಟ್‌ನಲ್ಲಿ ಮುಂದಾಳತ್ವವನ್ನು ನೀಡದೆ, ಗಿಲ್‌ಗೆ ನಾಯಕತ್ವ ನೀಡಿದೆ.

ಈಗಾಗಲೇ ಟಿ20 ಹಾಗು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ ಬ್ಲ್ಯೂ ಜೆರ್ಸಿಯಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಇನ್ನು ಕಾಣಿಸಿಕೊಳ್ಳಬೇಕಿತ್ತು. ಆದಾಗ್ಯೂ ಇವರ ಫಿಟ್ನೆಸ್ ಬಗ್ಗೆ ಹಲವು ಪ್ರಶ್ನೆಗಳು ಎದ್ದವು. ಆದರೆ ರೋಹಿತ್ ಇದಕ್ಕೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ತಮ್ಮ ಆಟದ ಮೇಲೆ ಚಿತ್ತ ನೆಟ್ಟರು. ಅಲ್ಲದೆ ತಮ್ಮ ತೂಕವನ್ನು ಇಳಿಸಿಕೊಂಡು ತಾವು ಆಡಲು ಫಿಟ್ ಆಗಿರುವುದಾಗಿ ಘೋಷಿಸಿದರು. ಆದರೆ ಇವರಿಗೆ ಬಿಸಿಸಿಐ ನಾಯಕತ್ವವನ್ನು ನೀಡಲು ಹಿಂದೇಟು ಹಾಕಿ ಭವಿಷ್ಯದ ದೃಷ್ಟಿಯಿಂದ ಗಿಲ್ ಅವರಿಗೆ ಮಣೆ ಹಾಕಿದೆ.
ನಾಯಕನಾಗಿ ಸಾಧನೆ
ರೋಹಿತ್ ಶರ್ಮಾ 2017 ರಿಂದ 2025ರ ವರೆಗೆ ಭಾರತ ತಂಡವನ್ನು ಏಕದಿನ ಫಾರ್ಮೆಟ್‌ನಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಈ ವೇಳೆ 56 ಪಂದ್ಯಗಳಲ್ಲಿ ತಂಡ ಕಣಕ್ಕೆ ಇಳಿದಿದ್ದು, 42ರಲ್ಲಿ ಜಯ ಸಾಧಿಸಿದೆ. ಅಲ್ಲದೆ 12 ಪಂದ್ಯಗಳಲ್ಲಿ ಸೋಲು ಕಂಡಿದೆ. ಇವರ ಗೆಲುವಿನ ಶೇಕಡಾ ವಾರು 75 ಆಗಿದೆ. ಈ ಅಂಕಿ ಅಂಶಗಳು ರೋಹಿತ್ ಶರ್ಮಾ ಒಬ್ಬ ಬೆಸ್ಟ್ ನಾಯಕ ಎಂಬುದನ್ನು ಸಾಬೀತು ಪಡಿಸುತ್ತವೆ.

ನಾಯಕತ್ವದ ಹಾದಿ
ರೋಹಿತ್ ಶರ್ಮಾ 2018ರಲ್ಲಿ ಮೊದಲ ಬಾರಿಗೆ ಟೀಮ್ ಇಂಡಿಯಾವನ್ನು ಏಕದಿನ್ ಫಾರ್ಮೆಟ್‌ನಲ್ಲಿ ಮುಂದುವರೆಸಿದ್ದಾರೆ. ಇದಾದ ಬಳಿಕ ಡಿಸೆಂಬರ್ 2021ರಲ್ಲಿ ಇವರಿಗೆ ಪುರ್ಣ ಪ್ರಮಾಣದ ನಾಯಕತ್ವ ನೀಡಲಾಯಿತು. ಇವರ ಮುಂದಾಳತ್ವದಲ್ಲಿ ತಂಡ 2023ರಲ್ಲಿ ಶ್ರೀಲಂಕಾದಲ್ಲಿ ನಡೆದಿದ್ದ ಏಷ್ಯಾ ಕಪ್ ಏಕದಿನ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
2023ರ ಏಕದಿನ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಫೈನಲ್‌ಗೆ ಅರ್ಹತೆ ಪಡೆಯಿತು. ಈ ಟೂರ್ನಿಯಲ್ಲಿ ರೋಹಿತ್ ಪಡೆ ಒಂದೇ ಒಂದು ಪಂದ್ಯವನ್ನು ಸೋತಿರಲಿಲ್ಲ. ಆದರೆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಆಸೆಯನ್ನು ಕೈ ಬಿಟ್ಟಿತು. ಇನ್ನು ಈ ವರ್ಷದ ಆರಂಭದಲ್ಲಿ ನಡೆದ ಏಕದಿನ ಚಾಂಪಿಯನ್ಸ್ ಟ್ರೋಫಿಯಲ್ಲೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ರೋಹಿತ್, ಟ್ರೋಫಿಗೆ ಮುತ್ತಿಡುವಲ್ಲಿ ಯಶಸ್ವಿಯಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications