For Quick Alerts
ALLOW NOTIFICATIONS  
For Daily Alerts
 

Rohit Sharma: ಟೀಮ್ ಇಂಡಿಯಾ ಚಾಂಪಿಯನ್‌ ಆಗುವುದು ಫಿಕ್ಸ್‌: ಎದುರಾಳಿಗೆ ಭಯ ಹುಟ್ಟಿಸುತ್ತದೆ ರೋಹಿತ್ ದಾಖಲೆ

ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲು ದುಬೈ ಪ್ರಯಾಣ ಬೆಳೆಸಿದೆ. ಈ ಬಾರಿ ಚಾಂಪಿಯನ್ಸ್ ಟ್ರೋಫಿ ಹೈಬ್ರೀಡ್‌ ಮಾಡೆಲ್‌ನಲ್ಲಿ ನಡೆಯುತ್ತಿದೆ. ಭಾರತ ಪಾಕ್‌ ಪ್ರವಾಸ ಬೆಳೆಸದ ಹಿನ್ನೆಲೆ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿದೆ. ಈಗಾಗಲೇ ಒಂದು ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯನ್ನು ಗೆದ್ದಿರುವ ಭಾರತ ತಂಡ ಮತ್ತೊಂದು ಟ್ರೋಫಿಯ ಹುಡುಕಾಟದಲ್ಲಿದೆ. ಈ ವೇಳೆ ಟೀಮ್ ಇಂಡಿಯಾಕ್ಕೆ ಗುಡ್‌ ನ್ಯೂಸ್‌ ಅಂದರೆ ಸ್ಟಾರ್ ಆಟಗಾರರು ಲಯಕ್ಕೆ ಮರಳಿದ್ದಾರೆ.

ಟೀಮ್ ಇಂಡಿಯಾ ದುಬೈನಲ್ಲಿ ಉತ್ತಮ ಅಂಕಿ ಅಂಶಗಳನ್ನು ಹೊಂದಿದೆ. ಏಕದಿನ ಕ್ರಿಕೆಟ್‌ನಲ್ಲಿ ದುಬೈ ಭಾರತೀಯರ ಪಾಲಿಗೆ ಲಕ್ಕಿ ಗ್ರೌಂಡ್. ಈ ಮೈದಾನದಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಹೀಗಾಗಿ ಈ ಬಾರಿ ಚಾಂಪಿಯನ್ಸ್ ಟ್ರೋಫಿ ಎತ್ತುವ ಕನಸು ಕಾಣುತ್ತಿದೆ. ಅಲ್ಲದೆ ಟೀಮ್ ಇಂಡಿಯಾದ ನಾಯಕ ರೋಹಿತ್‌ ಶರ್ಮಾ ಅವರಿಗೆ ಇದು ನೆಚ್ಚಿನ ಅಂಗಳ. ಈ ಮೈದಾನದಲ್ಲಿ ರೋಹಿತ್ ರನ್ ಶಿಖರ್ ಏರಿದ್ದಾರೆ.

Rohit Sharma s Dominance in Dubai Boosts India s Champions Trophy Hopes

ದುಬೈನಲ್ಲಿ ಹಿಟ್ ಮ್ಯಾನ್ ಆರ್ಭಟ

ಚಾಂಪಿಯನ್ಸ್ ಟ್ರೋಫಿಯನ್ನು ಭಾರತಕ್ಕೆ ತರಬೇಕಾದಲ್ಲಿ ಟೀಮ್ ಇಂಡಿಯಾ ನಾಯಕ ಪ್ರದರ್ಶನ ನೀಡಬೇಕಾಗುತ್ತದೆ. ಇಂಗ್ಲೆಂಡ್‌ ಸರಣಿಯಲ್ಲಿ ರೋಹಿತ್ ಶರ್ಮಾ ಫಾರ್ಮೆಗೆ ಮರಳಿರುವುದು ಗುಡ್ ನ್ಯೂಸ್‌. ಕಟಕ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಅಮೋಘ ಫಾರ್ಮ್‌ ಕಂಡುಕೊಂಡಿದ್ದರು. ಈ ಮೂಲಕ ತಮ್ಮ ಮೇಲಿನ ಟೀಕೆಗೆ ರೋಹಿತ್‌ ಸರಿಯಾದ ಉತ್ತರವನ್ನು ನೀಡಿದ್ದರು. ಇವರು ಈ ಲಯ ಚಾಂಪಿಯನ್ಸ್ ಟ್ರೋಫಿಯಲ್ಲೂ ಹೀಗೆ ಮುಂದುವರೆಯಲಿ ಎಂಬ ಆಶೆ ಅಭಿಮಾನಿಗಳದ್ದಾಗಿದೆ.

ಹೇಗಿದೆ ದುಬೈನಲ್ಲಿ ರೋಹಿತ್ ಸರಾಸರಿ?

ದುಬೈನಲ್ಲಿ ಹಿಟ್‌ಮ್ಯಾನ್ ಬೌಲರ್‌ಗಳನ್ನು ಕಾಡುವ ಬ್ಯಾಟರ್‌. ಈ ಮೈದಾನದಲ್ಲಿ ಈಗಾಗಲೇ 5 ಪಂದ್ಯಗಳನ್ನು ಆಡಿದ್ದು 105.66ರ ಸರಾಸರಿಯಲ್ಲಿ 317 ರನ್‌ ಸಿಡಿಸಿದ್ದಾರೆ. ಈ ವೇಳೆ 2 ಅರ್ಧಶತಕ ಹಾಗೂ 1 ಶತಕ ಸೇರಿವೆ. ರೋಹಿತ್ ಶರ್ಮಾ ಸ್ಟ್ರೈಕ್‌ ರೇಟ್‌ 93 ಆಗಿದ್ದು, ಇದೇ ರೀತಿಯ ಬ್ಯಾಟಿಂಗ್ ನಡೆಸಿದರೆ, ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರಬಹುದು. ಇನ್ನೊಂದು ವಿಶೇಷವೆಂದರೆ ರೋಹಿತ್ ಐದು ಇನ್ನಿಂಗ್ಸ್‌ಗಳಲ್ಲಿ ಎರಡರಲ್ಲಿ ಅಜೇಯರಾಗುಳಿದರು. ಟೀಮ್ ಇಂಡಿಯಾ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದ್ದು ರೋಹಿತ್‌ ಭರವಸೆ ಮೂಡಿಸಿದ್ದಾರೆ.

Rohit Sharma s Dominance in Dubai Boosts India s Champions Trophy Hopes

ಇನ್ನು ಈ ಅಂಗಳದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಅವರ ಅಂಕಿ ಅಂಶ ಸಹ ಸೊಗಸಾಗಿದೆ. ಈ ಮೈದಾನದಲ್ಲಿ ರೋಹಿತ್ 60ರ ಸರಾಸರಿಯನ್ನು ಹೊಂದಿದ್ದಾರೆ.

ಟೀಮ್ ಇಂಡಿಯಾ ಸ್ಟಾರ್ ಆಟಗಾರರ ಫಾರ್ಮ್ ಚಾಂಪಿಯನ್ಸ್‌ ಟ್ರೋಫಿಯಲ್ಲೂ ಇದೇ ರೀತಿ ಮುಂದುವರೆದರೆ, ನಿಶ್ಚಿತವಾಗಿ ಕಪ್‌ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಇನ್ನು ತಂಡಕ್ಕೆ ಮೊಹಮ್ಮದ್ ಶಮಿ ಎಂಟ್ರಿ ನೀಡಿರುವುದು ಆನೆ ಬಲ ಬಂದಂತೆ ಆಗಿದೆ. ಹರ್ಷಿತ್ ರಾಣಾ ಹಾಗೂ ಅಕ್ಷರ್ ಪಟೇಲ್ ಅವರ ಪ್ರದರ್ಶನದ ಮೇಲೂ ಎಲ್ಲರ ಚಿತ್ತ ನೆಟ್ಟಿರಲಿದೆ.

Story first published: Sunday, February 16, 2025, 13:16 [IST]
Other articles published on Feb 16, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+