Rohit Sharma: ಕ್ಯಾಪ್ಟನ್ಸಿ ಬಿಡಿ, ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದು ಕಷ್ಟ
ಟೀಮ್ ಇಂಡಿಯಾ ಅನುಭವಿ ಆಟಗಾರ ರೋಹಿತ್ ಶರ್ಮಾ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಇವರ ಅಬ್ಬರ ಜೋರು. ಪ್ರಸಕ್ತ ವರ್ಷ ನಡೆದ ಟಿ20 ಕ್ರಿಕೆಟ್ ವಿಶ್ವ ಚಾಂಪಿಯನ್ ಪಟ್ಟವನ್ನು ಭಾರತಕ್ಕೆ ಎರಡನೇ ಬಾರಿ ತೊಡಿಸಿದ ನಾಯಕ. ತಮ್ಮ ಆರ್ಭಟದ ಬ್ಯಾಟಿಂಗ್‌ನಿಂದಲೇ ತಂಡಕ್ಕೆ ನೆರವಾಗುವ ಪ್ಲೇಯರ್. ಇವರು ಬ್ಯಾಟ್ ಹಿಡಿದು ಕ್ರೀಸ್‌ಗೆ ಇಳಿದರೆ, ಎದುರಾಳಿ ಬೌಲರ್‌ಗಳು ಥಂಡಾ ಹೊಡೆಯುತ್ತಾರೆ. ಆದರೆ ರೋಹಿತ್ ವೈಟ್ ಜೆರ್ಸಿಯಲ್ಲಿ ಮಾತ್ರ ಮಂಕಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧವೂ ಇವರ ಆಟ ಸಪ್ಪೆಯಾಗಿದೆ. ಹೀಗೆ ಮುಂದೆವರೆದರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ.
ಟೀಮ್ ಇಂಡಿಯಾದ ಯಶಸ್ವಿ ನಾಯಕರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ರೋಹಿತ್ ಶರ್ಮಾ. ಟೆಸ್ಟ್, ಏಕದಿನ, ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಚತರು. ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಚುಟುಕು ಕ್ರಿಕೆಟ್‌ನಿಂದ ನಿವೃತ್ತರಾದರು. ಈಗ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ. ಆದರೆ ಇವರ ಫಾರ್ಮ್ ನೋಡಿದರೆ ಮ್ಯಾನೇಜ್ಮೆಂಟ್‌ಗೂ ಟೆನ್ಷನ್ ಆರಂಭವಾಗಿದೆ.

ಆಸ್ಟ್ರೇಲಿಯಾದಲ್ಲಿ ಆರಂಭವಾದ ಬಾರ್ಡರ್ ಗವಾಸ್ಕರ್ ಸರಣಿಯ ಮೊದಲ ಪಂದ್ಯಕ್ಕೆ ರೋಹಿತ್ ಶರ್ಮಾ ಅಲಭ್ಯರಾಗಿದ್ದರು. ಇದೇ ವೇಳೆ ಜಸ್ಪ್ರಿತ್ ಬುಮ್ರಾ ತಂಡವನ್ನು ಮುನ್ನಡೆಸಿದರು. ಈ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದುಕೊಂಡಿತ್ತು. ಎರಡನೇ ಟೆಸ್ಟ್‌ಗೆ ರೋಹಿತ್ ಮತ್ತೆ ತಂಡ ಸೇರಿದರು. ಆದರೆ ಆಡಿಲೇಡ್ ಟೆಸ್ಟ್‌ನಲ್ಲಿ ತಂಡ ಹೀನಾಯ ಸೋಲನ್ನು ಕಂಡಿತು. ಇನ್ನು ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲೂ ಟೀಮ್ ಇಂಡಿಯಾ ಫಾಲೋ ಆನ್ ಭೀತಿ ಎದುರಿಸುತ್ತಿತ್ತು. ಈ ವೇಳೆ ತಂಡಕ್ಕೆ ನೆರವಾಗ ಬೇಕಿದ್ದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದಾಗ, ಬೌಲರ್‌ಗಳು ತಂಡದ ಪರ ಅಗತ್ಯ ರನ್ ಕಲೆ ಹಾಕಿ ತಂಡವನ್ನು ಫಾಲೋ ಆನ್ ನಿಂದ ಪಾರು ಮಾಡಿತು. ಈ ಪಂದ್ಯದಲ್ಲಿ ರೋಹಿತ್ ಠುಸ್ ಪಟಾಕಿ.
ನ್ಯೂಜಿಲೆಂಡ್ ವಿರುದ್ಧವೂ ನಿರಾಸೆ
ಕಿವೀಸ್, ಶ್ರೀಲಂಕಾ ಪ್ರವಾಸದಲ್ಲಿ ಎರಡೂ ಟೆಸ್ಟ್ ಪಂದ್ಯಗಳನ್ನು ಸೋತು ಭಾರತಕ್ಕೆ ಬಂದಿತ್ತು. ಈ ವೇಳೆ ನ್ಯೂಜಿಲೆಂಡ್ ತಂಡವನ್ನು ಭಾರತ ಸುಲಭವಾಗಿ ಸೋಲಿಸಬಹುದು ಎಂಬ ಲೆಕ್ಕಾಚಾರಗಳೇ ಇದ್ದವು. ಆದರೆ ಆಗಿದ್ದೇ ಬೇರೆ ತವರಿನಲ್ಲಿ ಟೀಮ್ ಇಂಡಿಯಾ ದಶಕಗಳ ಬಳಿಕ ಕ್ಲೀನ್ ಸ್ವೀಪ್ ಸೋಲು ಕಂಡಿತು. ಈ ಸರಣಿಯಲ್ಲೂ ರೋಹಿತ್ ಶರ್ಮಾ ಹೇಳಿಕೊಳ್ಳುವಂತಹ ಸಾಧನೆಯನ್ನು ಏನು ಮಾಡಲಿಲ್ಲ. ಆಡಿದ ಮೂರು ಪಂದ್ಯಗಳಲ್ಲಿ 15ರ ಸರಾಸರಿಯಲ್ಲಿ 19 ರನ್ ಸಿಡಿಸಿ ನಿರಾಸೆ ಅನುಭವಿಸಿದರು.

2024ರಲ್ಲಿ ಹೇಗಿದೆ ಪ್ರದರ್ಶನ
ಪ್ರಸಕ್ತ ವರ್ಷ ರೋಹಿತ್ ಶರ್ಮಾ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಈ ವರ್ಷ ಇವರು 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 26.39ರ ಸರಾಸರಿಯಲ್ಲಿ 607 ರನ್ ಸಿಡಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 2 ಅರ್ಧಶತಕಗಳು ಸೇರಿವೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ, ರೋಹಿತ್ ಶರ್ಮಾ ಅವರಿಗೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದೇ ಕಷ್ಟ ಎಂದು ಹೇಳಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications