IPL Auction 2025: "ರೋಹಿತ್ ಶರ್ಮಾಗೆ ಬಾಜಿ ಕಟ್ಟಲು ನಾವು ರೆಡಿ"
ಐಪಿಎಲ್ ಹರಾಜಿಗೆ ಭರದ ಸಿದ್ಧತೆಗಳು ಆರಂಭವಾಗಿವೆ. ಈಗ ಎಲ್ಲ ಅಭಿಮಾನಿಗಳ ಕಣ್ಣು ಹರಾಜಿನ ಮೇಲೆ ನೆಟ್ಟಿದೆ. ಯಾವ ತಂಡ ಯಾವ ಆಟಗಾರರನ್ನು ಇಟ್ಟುಕೊಳ್ಳಬಹುದು ಯಾರನ್ನು ರಿಲೀಸ್ ಮಾಡಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿವೆ. ಈ ಮಧ್ಯೆದಲ್ಲಿ ಈ ಬಾರಿಯ ಐಪಿಎಲ್ ಹರಾಜು ಅಂಗಳಕ್ಕೆ ನಿಶ್ಚಿತವಾಗಿ ದೊಡ್ಡ ದೊಡ್ಡ ಹೆಸರುಗಳು ಕೇಳಿ ಬರುತ್ತವೆ.
ಮುಂಬೈ ಇಂಡಿಯನ್ಸ್ ಯಾವೆಲ್ಲಾ ಆಟಗಾರರನ್ನು ರಿಲೀಸ್ ಮಾಡಬಹುದು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಮುಂಬೈ ತಂಡದಲ್ಲಿ ಹಲವು ಸ್ಟಾರ್ ಆಟಗಾರರು ಇದ್ದಾರೆ. ಯಾರನ್ನು ಇಟ್ಟುಕೊಂಡು ಯಾರಿಗೆ ಹರಾಜು ಅಂಗಳಕ್ಕೆ ಕಳಿಸುತ್ತಾರೆ ಎಂಬ ಕುತೂಹಲ ಮೂಡಿದೆ. ಒಂದು ವೇಳೆ ರೋಹಿತ್ ಶರ್ಮಾ ಅವರನ್ನು ರಿಲೀಸ್ ಮಾಡಿದ್ದೇ ಆದಲ್ಲಿ ತಾವು ಸಹ ಅವರನ್ನು ಖರೀದಿಸಲು ರೆಡಿ ಇರುವುದಾಗಿ ಐಪಿಎಲ್‌ನ ಮತ್ತೊಂದು ತಂಡ ಘೋಷಿಸಿದೆ.

ರೋಹಿತ್ ಶರ್ಮಾಗೆ 50 ಕೋಟಿ
ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾ ಅವರನ್ನು ರಿಲೀಸ್ ಮಾಡಿದ್ದೇ ಆದಲ್ಲಿ ಅವರನ್ನು ಕೊಂಡು ಕೊಳ್ಳಲು ಮಾಲೀಕರು ಹಣದ ಹೊಳೆ ಹರಿಸಲಿದ್ದಾರೆ. ಈ ವೇಳೆ ಹಲವು ತಂಡಗಳು ಇವರ ಅನುಭವವನ್ನು ಪಡೆದುಕೊಳ್ಳಲು ಪ್ಲ್ಯಾನ್ ಮಾಡಿವೆ. ಹರಾಜಿಗೂ ಮುನ್ನವೇ ನಾಯಕರ ಹುಡುಕಾಟದಲ್ಲಿರುವ ತಂಡಗಳು ರೋಹಿತ್‌ಗೆ ಬಿಡ್ ಮಾಡಲು ಮನಸ್ಸು ಮಾಡಿರುವುದಾಗಿ ಬಹಿರಂಗಪಡಿಸಿವೆ.
ಕೆಲ ದಿನಗಳ ಹಿಂದೆ ರೋಹಿತ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಮನಸ್ಸು ಮಾಡಿದ್ದಾಗಿ ತಿಳಿದು ಬಂದಿತ್ತು. ಇಷ್ಟೇ ಅಲ್ಲದೆ ಇವರು ಹರಾಜು ಅಂಗಳ ಪ್ರವೇಶಿಸಿದರೆ, ಇವರಿಗಾಗಿ 50 ಕೋಟಿ ಎತ್ತಿಡುವುದಾಗಿ ಉಭಯ ತಂಡಗಳು ಹೇಳಿಕೊಂಡಿದ್ದವು. ಈಗ ಈ ಸಾಲಿಗೆ ಮತ್ತೊಂದು ತಂಡ ಎಂಟ್ರಿ ನೀಡಿದೆ.

ನಾವು ಬಿಡ್ ಮಾಡಲು ರೆಡಿ
ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಅವರನ್ನು ಬಿಡ್ ಅಂಗಳಕ್ಕೆ ಬಿಟ್ಟಿದ್ದೇ ಆದಲ್ಲಿ ಅವರಿಗೆ ಬಿಡ್ ಮಾಡಲು ನಾವು ರೆಡಿಯಾಗಿದ್ದೇವೆ ಎಂದು ಪಂಜಾಬ್ ಕಿಂಗ್ಸ್ ಹೇಳಿದೆ. ನಾವು ಅವನನ್ನು ಖರೀದಿಸುತ್ತೇವೆಯೋ ಇಲ್ಲವೋ ಎಂಬುದು ನಮ್ಮ ಬಳಿ ಇರುವ ಹಣವನ್ನು ನೋಡಿಕೊಂಡು ತೀರ್ಮಾನಿಸಲಾಗುವುದು. ಆದರೆ ನಾವು ಸಹ ಟೀಮ್ ಇಂಡಿಯಾ ನಾಯಕನಿಗೆ ಬಾಜಿ ಕಟ್ಟಲು ರೆಡಿ ಇರುವುದಾಗಿ ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ತಿಳಿಸಿದ್ದಾರೆ.
ನಾಯಕನ ಹುಡುಕಾಟದಲ್ಲಿ ಪಂಜಾಬ್?
ಐಪಿಎಲ್ 2025ರ ಹರಾಜಿನಲ್ಲೂ ಪಂಜಾಬ್ ಕಿಂಗ್ಸ್ ನಾಯಕನ ಹುಡುಕಾಟ ನಡೆಸಲಿದೆ. ಪಂಜಾಬ್ ತಂಡದ ನಾಯಕ ಶಿಖರ್ ಧವನ್, ಇತ್ತೀಚಿಗೆ ವಿಡಿಯೋ ಸಂದೇಶದಲ್ಲಿ ತಾವು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವುದಾಗಿ ಘೋಷಿಸಿದ್ದರು. ಆದರೆ ಇವರು ಐಪಿಎಲ್‌ನಲ್ಲಿ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಇನ್ನು ಖಚಿತ ಮಾಹಿತಿ ಇಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications