18ನೇ ಆವೃತ್ತಿಯ ಐಪಿಎಲ್ ಆರಂಭವಾಗಿದೆ. ಸ್ಟಾರ್ ಆಟಗಾರರು ಅಂಗಳದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಆ ಒಬ್ಬ ಆಟಗಾರ ಇನ್ನು ಫಾರ್ಮ್ ಕಂಡು ಕೊಳ್ಳದೇ ಇರುವುದು ನಿಜಕ್ಕೂ ತಂಡದ ಚಿಂತೆಯನ್ನು ದೂರ ಮಾಡಿದೆ. ಇನ್ನು ಈ ಪ್ಲೇಯರ್ ಆಟ ಹೀಗೆ ಮುಂದುವರೆದಲ್ಲಿ ಇವರನ್ನು ಬೆಂಚ್ ಮೇಲೆ ಕೂರಿಸಬೇಕಾದ ಬಗ್ಗೆ ಮುಂಬೈ ತಂಡ ಚಿಂತೆ ನಡೆಸಬೇಕಾಗುತ್ತದೆ. ಇವರು ಈಗಾಗಲೇ ಐಪಿಎಲ್‌ನಲ್ಲಿ ತಮ್ಮದೇ ಆದಾ ಬ್ಯಾಟಿಂಗ್ ಧಾಟಿಯಿಂದ ಹೆಸರುವಾಸಿಯಾಗಿರುವ ಪ್ಲೇಯರ್.
ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕೆ ಇಳಿದ ರೋಹಿತ್ ಶರ್ಮಾ 2 ಬೌಂಡರಿ ಬಾರಿಸಿ ಲಯಕ್ಕೆ ಮರಳುವ ವಿಶ್ವಾಸವನ್ನು ಮೂಡಿಸಿದರು. ಆದರೆ ಇವರು 8 ರನ್‌ಗಳಿಗೆ ಆಟ ಮುಗಿಸಿದರು. ಈ ಇನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ಬರೆದರು. ಆದರೆ ಟೀಕೆಗಳಿಗೆ ಗುರಿಯಾಗುತ್ತಿದ್ದಾರೆ. ಆದರೆ ಇವರ ಬ್ಯಾಟಿಂಗ್ ಬಗ್ಗೆ ಪ್ರಶ್ನೆಗಳನ್ನು ಮಾಡುವುದು ತಪ್ಪು.

ಚಾಂಪಿಯನ್ಸ್ ಟ್ರೋಫಿಯಲ್ಲೂ ಇವರ ಬ್ಯಾಟಿಂಗ್ ಬಗ್ಗೆ ಪ್ರಶ್ನೆಗಳು ಎದ್ದಾಗ, ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲಿ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಮಿಂಚಿದ್ದರು. ಆದರೆ ಈ ಫಾರ್ಮ್‌ನ್ನು ರೋಹಿತ್ ಐಪಿಎಲ್‌ನಲ್ಲಿ ಮುಂದುವರೆಸುತ್ತಿಲ್ಲ ಎಂಬುದೇ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ. ಐಪಿಎಲ್‌ನ ಅಪರೂಪದ ಆಟಗಾರರಲ್ಲಿ ರೋಹಿತ್ ಶರ್ಮಾ ಅವರಿಗೆ ಸ್ಥಾನ. ಇವರು 18 ಆವೃತ್ತಿಗಳನ್ನು ಆಡಿದ ಕೆಲವೇ ಕೆಲವು ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಇವರ ಮುಂದಾಳತ್ವದಲ್ಲಿ ಮುಂಬೈ ಐದು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
18 ಬಾರಿ ನಡೆದ ಐಪಿಎಲ್ ಆವೃತ್ತಿಗಳಲ್ಲಿ ರೋಹಿತ್ ಶರ್ಮಾ ಕೇವಲ 8 ಬಾರಿ ಮಾತ್ರ 400 ರನ್ ಗಡಿ ದಾಟಿದ್ದಾರೆ. 2013ರಲ್ಲಿ ಇವರು ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾಗ ಇವರು ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದುರ. ಇವರು ಈ ಆವೃತ್ತಿಯಲ್ಲಿ 131.54 ಸ್ಟ್ರೈಕ್ ರೇಟ್‌ನಲ್ಲಿ 538 ರನ್ ಗಳಿಸಿದರು. ಕಳೆದ ಐದು ಆವೃತ್ತಿಗಳಲ್ಲಿ, ರೋಹಿತ್ ಕೇವಲ ಒಂದು ಬಾರಿ ಮಾತ್ರ 400 ರನ್‌ಗಳ ಗಡಿಯನ್ನು ದಾಟಿದ್ದಾರೆ.

ಕಳೆದ ಐದು ಋತುಗಳಲ್ಲಿ, ರೋಹಿತ್ 332 ರನ್ (2020), 381 ರನ್ (2021), 268 ರನ್ (2022), 332 ರನ್ (2023) ಮತ್ತು 417 ರನ್ (2024) ರನ್ ಸಿಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಹಿತ್ ಇದೇ ಸಾಲಿನಲ್ಲಿ ಒಮ್ಮೆ ಶತಕ ಸಾಧನೆ ಸಹ ಮಾಡಿದ್ದಾರೆ.
| ವರ್ಷ | ರನ್ |
|---|---|
| 2008 | 404 |
| 2009 | 362 |
| 2010 | 404 |
| 2011 | 372 |
| 2012 | 433 |
| 2013 | 538 |
| 2014 | 390 |
| 2015 | 482 |
| 2016 | 489 |
| 2017 | 333 |
| 2018 | 286 |
| 2019 | 405 |
| 2020 | 332 |
| 2021 | 381 |
| 2022 | 268 |
| 2023 | 3320 |
| 2024 | 417 |