IND vs BAN 2nd Test: ಡಿಆರ್‌ಎಸ್ ಔಟ್ ನೀಡುತ್ತಿದ್ದಂತೆ ರೋಹಿತ್ ಶರ್ಮಾ ರಿಯಾಕ್ಷನ್ ಸಖತ್ ವೈರಲ್
ಭಾರತ ಹಾಗೂ ಬಾಂಗ್ಲಾದೇಶ ನಡುಣ ಎರಡನೇ ಟೆಸ್ಟ್ ಪಂದ್ಯ ಇಲ್ಲಿನ ಕಾನ್ಪುರ್ ಅಂಗಳದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್‌ನ್ನು ಗೆದ್ದ ಟೀಮ್ ಇಂಡಿಯಾ ಬೌಲಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಸದ್ಯ ಎರಡನೇ ಟೆಸ್ಟ್ ನ ಮೊದಲ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶ ಬ್ಯಾಟುಂಗ್ ಮಾಡುತ್ತಿದೆ.
ಈ ಪಂದ್ಯದಲ್ಲಿ ಬಾಂಗ್ಲಾದೇಶ ಉತ್ತಮವಾಗಿ ಬ್ಯಾಟಿಂಗ್ ಆರಂಭಿಸಿತ್ತು. ಜಾಕೀರ್ ಹಸನ್ ಹಾಗೂ ಶದಮನ್ ಇಸ್ಲಾಂ ಜೋಡಿ 24 ರನ್‌ಗಖ ಜೊತೆಯಾಟದ ಕಾಣಿಕೆ ನೀಡಿದರು. ಇದೇ ವೇಳೆ ಪ್ರವಾಸಿ ತಂಡದ ಜಾಕೀರ್ ಹಸನ್ ಒಂದೂ ರನ್ ಸಹ ಬಾರಿಸಿರಲಿಲ್ಲ. ಇವರು 24 ಎಸೆತಗಳನ್ನು ಎದುರಿಸಿ ಖಾತೆ ತೆರೆಯುವ ಕನಸು ಕಂಡಿದ್ದರು. ಆದರೆ ಇವರ ಕನಸಿಗೆ ಆಕಾಶ್ ದೀಪ್ ಕೊಳ್ಳಿ ಇಟ್ಟರು.

ಆಕಾಶ್ ದೀಪ್ ಅಬ್ಬರ
ಈ ಟೆಸ್ಟ್‌ನಲ್ಲಿ ಆಕಾಶ್ ದೀಪ್ ಮೊನಚಾದ ದಾಳಿ ಸಂಘಟಿಸಿದರು. ಇವರು ಇನಿಂಗ್ಸ್‌ನ 9ನೇ ಓವರ್ ಎಸೆಯಲು ಮುಂದಾದರು. ಈ ವೇಳೆ ಜಾಕೀರ್ ಹಸನ್ ಬ್ಯಾಟಿಂಗ್ ಮಾಡುತ್ತಿದ್ದರು. ಈ ಓವರ್‌ನ ಮೂರನೇ ಎಸೆತವನ್ನು ಆಕಾಶ್ ದೀಪ್ ಮಾಡಿದರು. ಆಫ್ ಸ್ಟಂಪ್ ಆಚೆಗೆ ಇದ್ದ ಎಸೆತವನ್ನು ನೋಡಿದ ಜಾಕೀರ್ ಡಿಫೆನ್ಸ್ ಆಟವನ್ನು ಆಡಲು ಮುಂದಾದರು. ಚೆಂಡು ಪಿಚ್ ಆಗಿ ಇವರಿಗೆ ಬಡಿದು, ಯಶಸ್ವಿ ಜೈಸ್ವಾಲ್ ಹಿಡಿದ ಕ್ಯಾಚ್‌ಗೆ ಬಲಿಯಾದರು. ಈ ಮೂಲಕ ಭಾರತದ ಪಾಳಯದಲ್ಲಿ ಖುಷಿ ಮನೆ ಮಾಡಿತು.
ಆರಂಭಿಕ ಎರಡು ವಿಕೆಟ್ ಪಡೆದ ಆಕಾಶ್
ಈ ವಿಕೆಟ್ ಟೀಮ್ ಇಂಡಿಯಾ ಆಟಗಾರರ ನವ ಉತ್ಸಾಹ ತುಂಬಿತು. ಆಕಾಶ್ ದೀಪ್ ಮತ್ತೆ 13ನೇ ಓವರ್ ಬೌಲರ್ ಮಾಡಿದರು. ಆಗ ಬಾಂಗ್ಲಾದೇಶದ ಶದಮನ್ ಇಸ್ಲಾಂ ಬ್ಯಾಟ್ ಮಾಡುತ್ತಾ ಇದ್ದರು. ಆಕಾಶ್ ದೀಪ್ ಅವರ ಲೆಂತ್ ಡಿಲೇವರಿಯನ್ನು ಕೊಂಚ ಆಂಗಲ್ ನೀಡಿ ಹಾಕಿದರು. ರೌಂಡ್ ದ ಸ್ಟಂಪ್ಸ್ ಬಂದು ಬೌಲ್ ಮಾಡಿದ್ದರು. ಚೆಂಡು ಆಫ್ ಸ್ಟಂಪ್ ಆಚೆಗೆ ಬಿದ್ದು, ಲೆಗ್ ಸ್ಟಂಪ್‌ನತ್ತ ಸಾಗುತ್ತಿತ್ತು. ಇದನ್ನು ಕಂಡು ಆಕಾಶ್ ದೀಪ್ ಔಟ್ ಗೆ ಅಪೀಲ್ ಮಾಡಿದರು.

ಫೀಲ್ಡ್‌ನಲ್ಲಿದ್ದ ಅಂಪೈರ್ ಇವರ ಮನವಿಯನನ್ನು ತಿರಸ್ಕರಿಸಿದರು. ಆಕಾಶ್ ದೀಪ್ ರೋಹಿತ್ ಶರ್ಮಾ ಅವರಿಗೆ ಡಿಆರ್‌ಎಸ್ ಪಡೆಯುವಂತೆ ಮನವಿ ಮಾಡಿದರು. ರೋಹಿತ್, ರಿಷಭ್, ಆಕಾಶ್ ಸಮಾಲೋಚಿಸಿ ಡಿಆರ್‌ಎಸ್‌ಗೆ ಮನವಿ ಸಲ್ಲಿಸಿದರು. ರೋಹಿತ್ ಸಹ ಈ ತೀರ್ಪು ಏನ್ ಆಗುತ್ತದೋ ಎಂಬ ಚಿಂತೆಯಲ್ಲಿದ್ದರು. ಆಗಲೇ ಬಿಗ್ ಸ್ಕ್ರೀನ್‌ನಲ್ಲಿ ಚೆಂಡು ಬಿದ್ದು ಲೆಗ್ ಸ್ಟಂಪ್‌ಗೆ ಬಡೆಯುತ್ತಿರುವುದು ಗೋಚಿಸರಿಸಿತು. ತೀರ್ಪು ಔಟ್ ಎಂದು ಬರುತ್ತಿದ್ದಂತೆ ಆಟಗಾರರು ಫುಲ್ ಖುಷ್. ಬಾಂಗ್ಲಾದೇಶ ಎರಡನೇ ವಿಕೆಟ್ ಕಳೆದುಕೊಂಡಿತು.
ಇದನ್ನು ಕಂಡಿದ್ದೇ ರೋಹಿತ್ ಶರ್ಮಾ ಅವರಿಗೆ ತುಂಬ ಖಷಿ ಆಯಿತು. ಇವರ ರಿಯಾಕ್ಷನ್ ಈಗ ಸಖತ್ ವೈರಲ್ ಆಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications