Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲ್ಯಾಂಬೊರ್ಗಿನಿ ಖರೀದಿಸಿದ ರೋಹಿತ್‌ ಶರ್ಮಾ: ಕಾರ್‌ ನಂಬರ್ 3015, ಏನಿದರ ವಿಶೇಷತೆ..

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಸದ್ಯ ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನವೇ ರೋಹಿತ್ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದರು. ಈ ಮೂಲಕ ರೋಹಿತ್ ಶರ್ಮಾ ಇನ್ನು ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುವುದನ್ನು ಕಾಣಬಹುದಾಗಿದೆ. ಭಾರತೀಯ ಕ್ರಿಕೆಟಿಗ ರೋಹಿತ್ ಶರ್ಮಾ ಲ್ಯಾಂಬೊರ್ಗಿನಿ ಕಾರನ್ನು (ಲಂಬೋರ್ಘಿನಿ ಉರುಸ್ ಸೆ) ಖರೀದಿಸಿದ್ದಾರೆ. ಈ ಕಾರ್ ಸಖತ್ ಸ್ಟೈಲಿಶ್ ಆಗಿದೆ. ಆದರೆ ಅಭಿಮಾನಿಗಳ ಕಣ್ಣು ಇದರ ನಂಬರ್ ಪ್ಲೇಟ್ ಮೇಲೆ ನೆಟ್ಟಿದೆ.

ರೋಹೊತ್‌ ಶರ್ಮಾ ಕೇಸರಿ ಬಣ್ಣದ ಲ್ಯಾಂಬೊರ್ಗಿನಿ ಕಾರನ್ನು ಖರೀದಿಸಿದ್ದಾರೆ. ಈ ಕಾರಿನ ಸಂಖ್ಯೆ 3015. ಅಭಿಮಾನಿಗಳು ಈ ನಂಬರ್‌ಗೆ ಹಾಗೂ ರೋಹಿತ್ ಶರ್ಮಾ ಅವರಿಗೂ ಇರುವ ಸಂಬಂಧ ಏನು ಎಂಬ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಹಾಗಿದ್ದರೆ ರೋಹಿತ್ ಶರ್ಮಾ ಈ ನಂಬರ್‌ ಪಡೆದಿದ್ದರ ಹಿಂದೆಯೂ ಒಂದು ವಿಶೇಷ ಕಾರಣ ಇದೆ. ಆ ಕಾರಣ ಏನು? ಎಂಬ ಬಗ್ಗೆ ವರದಿ ಇಲ್ಲಿದೆ.

Rohit Sharma s New Lamborghini Urus A Car with a Unique License Plate Number

ರೋಹಿತ್‌ ಶರ್ಮಾ ಅವರಿಗೆ ಐಷಾರಾಮಿ ಕಾರ್‌ಗಳ ಮೇಲೆ ಎಲ್ಲಿಲದ ಪ್ರೀತಿ. ಇವರ ಮನೆಯ ಅಂಗಳದಲ್ಲಿ ಈಗಾಗಲೇ ಬ್ಲ್ಯೂ ಕಲರ್‌ ಲ್ಯಾಂಬೊರ್ಗಿನಿ ಕಾರ್‌ ಇದೆ. ಈ ಕಾರ್ ಸಂಖ್ಯೆ 0264. ಈ ಸಂಖ್ಯೆ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಬಾರಿಸಿದ ದೊಡ್ಡ ಸ್ಕೋರ್ ಆಗಿದೆ. ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ 264 ರನ್‌ಗಳ ವಿಶ್ವ ದಾಖಲೆಯ ಇನಿಂಗ್ಸ್ ಕಟ್ಟಿದ್ದರು. ಇದರ ನೆನೆಪಿಗಾಗಿ ಈ ನಂಬರ್ ಕಾರ್‌ ಇದೆ. ಆದರೆ ಈಗ ಖರೀದಿಸಿರುವ ಕಾರಿಗೆ 3015 ನಂಬರ್‌ ಇಟ್ಟಿದ್ದು ಏಕೆ ಎಂಬ ಕುತೂಹಲ ಮನೆ ಮಾಡಿದೆ.


3015 ನಂಬರ್‌ ವಿಶೇಷತೆ

ಈ ಕಾರ್‌ ನಂಬರ್ ವಿಶೇಷವಾಗಿದೆ. ಅಂದಹಾಗೆ ರೋಹಿತ್ ಶರ್ಮಾ ಅವರ ದೊಡ್ಡ ಮಗಳು ಸಮೈರಾ ಶರ್ಮಾ ಡಿಸೆಂಬರ್ 2018ರಂದು ಜನಿಸಿದರು. ಇನ್ನು ರಿತಿಕಾ ಹಾಗೂ ರೋಹಿತ್ ದಂಪತಿಗಳ ಎರಡನೇ ಮಗು ನವೆಂಬರ್‌ 15 ರಂದು ಜನಿಸಿತು. ಅಭಿಮಾನಿಗಳಿಗು ಈಗ ಕಾರಿನ ಸಂಖ್ಯೆಯ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಾರೆ. ಅಂದಹಾಗೆ ರೋಹಿತ್‌ ಶರ್ಮಾ ಅವರ ಹೊಸ ಕಾರಿನ ಮೊದಲ ಎರಡು ಸಂಖ್ಯೆ ಮಗಳ ಹುಟ್ಟಿದ ದಿನಾಂಕವನ್ನು ಸೂಸಿಚಿಸಿದರೆ. ಕೊನೆಯ ಎರಡು ಸಂಖ್ಯೆ ಮಗನ ಹುಟ್ಟಿದ ದಿನಾಂಕವನ್ನು ಸೂಚುಸುತ್ತವೆ. ಅಂದಹಾಗೆ 30+15 ಈ ಎರಡೂ ನಂಬರ್‌ಗಳನ್ನು ಸೇರಿಸಿದಾಗ 45 ಆಗುತ್ತಾದೆ. ಇದು ರೋಹಿತ್‌ ಶರ್ಮಾ ಅವರ ಜೆರ್ಸಿ ನಂಬರ್ ಆಗಿದೆ.


ರೋಹಿತ್ ಶರ್ಮಾ ಬಳಿ ಇರುವ ಐಷಾರಾಮಿ ಕಾರುಗಳು

ಮರ್ಸಿಡಿಸ್-ಬೆನ್ಜ್ ಎಸ್-ಕ್ಲಾಸ್- ರೂ. 1.50 ಕೋಟಿ
ರೇಂಜ್ ರೋವರ್ HSE LWB- ರೂ. 2.80 ಕೋಟಿ
ಮರ್ಸಿಡಿಸ್ GLS 400 D- ರೂ. 1.29 ಕೋಟಿ

Story first published: Sunday, August 10, 2025, 16:15 [IST]
Other articles published on Aug 10, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+