ನಾಯಕನಾಗಿ ರೋಹಿತ್ ಶರ್ಮಾ ಅಂಕಿ ಅಂಶ ಬೆಸ್ಟ್: ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಹಾಗೆ ಉಳಿದವೆ ಹಲವು ಪ್ರಶ್ನೆ?
ಅಫ್ಘಾನಿಸ್ತಾನ ವಿರುದ್ಧದ 3 ಟಿ20 ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಬಹುದಿನಗಳ ಬಳಿಕ ಚುಟುಕು ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ರೋಹಿತ್ ಶರ್ಮಾ ಅವರು ತಂಡ ಸೇರಿಕೊಂಡಿದ್ದಕ್ಕೆ ಪ್ರಶ್ನೆಗಳು ಎದ್ದಿವೆ.
ರೋಹಿತ್ ಶರ್ಮಾ ಅವರು ನಾಯಕ ಹಾಗೂ ಬ್ಯಾಟರ್ ಆಗಿ ಟಿ20 ಕ್ರಿಕೆಟ್‌ನಲ್ಲಿ ಅಂಕಿ ಅಂಶಗಳು ಹೇಗಿವೆ ಎಂಬ ಚರ್ಚೆಗಳು ಆರಂಭವಾಗಿವೆ. ನಾಯಕನಾಗಿ ರೋಹಿತ್ ಶರ್ಮಾ ಅವರ ಅಂಕಿಅಂಶಗಳು ಅತ್ಯುತ್ತಮವಾಗಿವೆ. ಆದರೆ ಬ್ಯಾಟಿಂಗ್‌ನಲ್ಲಿ ಅವರು ಕಳೆದ ಕೆಲವು ವರ್ಷಗಳಿಂದ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.

ಅಂಕಿಅಂಶಗಳ ಪ್ರಕಾರ ರೋಹಿತ್ ಶರ್ಮಾ ಇದುವರೆಗೆ 51 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು, ಭಾರತ 39 ಪಂದ್ಯಗಳಲ್ಲಿ ಗೆದ್ದಿದ್ದು, 12 ಪಂದ್ಯಗಳಲ್ಲಿ ನಿರಾಸೆ ಕಂಡಿದೆ. ಹಿಟ್ ಮ್ಯಾನ್ ನಾಯಕತ್ವದಲ್ಲಿ ಟೀಮ್ ಇಂಡಿಯಾ 76.47 ರಷ್ಟು ಯಶಸ್ಸು ಕಂಡಿದೆ.
ಇನ್ನು ನಾಯಕನಾಗಿ ಸಿಕ್ಸರ್ ಕಿಂಗ್ ರೋಹಿತ್ 1527 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ನಾಯಕನಾಗಿ, ರೋಹಿತ್ ಶರ್ಮಾ 2 ಶತಕಗಳನ್ನು ಗಳಿಸಿದ್ದಾರೆ. ಅಲ್ಲದೆ 10 ಬಾರಿ ಅರ್ಧಶತಕ ಬಾರಿಸಿದ್ದಾರೆ.
ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಹಾಗೂ ನಾಯಕತ್ವದ ಗುಣಗಳನ್ನು ತೋರಿಸಿದ್ದರು. ಟೀಮ್ ಇಂಡಿಯಾ ಪರ ಆರಂಭಿಕರಾಗಿ ಬ್ಯಾಟ್ ಮಾಡಿದ್ದ ರೋಹಿತ್ ಶರ್ಮಾ ಬಿರುಸಿನ ಆರಂಭವನ್ನು ತಂಡಕ್ಕೆ ನೀಡಿದ್ದರು.
ಇದರ ಪ್ರಭಾವದಿಂದಲೇ ಮಿಡ್ಲ್ ಆರ್ಡರ್ ಬ್ಯಾಟರ್‌ಗಳು ಭರ್ಜರಿ ಬ್ಯಾಟಿಂಗ್ ಮಾಡಲು ಸಾಧ್ಯವಾಯಿತು. ಪವರ್ ಪ್ಲೇನಲ್ಲಿ ಪವರ್ ಫುಲ್ ಪ್ರದರ್ಶನ ನೀಡಿದ್ದಾರೆ. ರೋಹಿತ್ ಶರ್ಮಾ ವಿಶ್ವಕಪ್‌ನ 11 ಪಂದ್ಯಗಳಲ್ಲಿ 597 ರನ್ ಗಳಿಸಿದ್ದಾರೆ.
ರೋಹಿತ್ ಶರ್ಮಾ ವಿಶ್ವಕಪ್‌ನಲ್ಲಿ ಆರಂಭಿಕರಾಗಿ ಬಿಗ್ ಇನ್ನಿಂಗ್ಸ್ ಕಟ್ಟಿಲ್ಲ. ಆದರೆ ಪ್ರತಿಯೊಂದು ಪಂದ್ಯದಲ್ಲೂ ಬಿರುಸಿನ ಆರಂಭವನ್ನು ನೀಡಿದರು. ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಿದ ಶೈಲಿಯು ಇತರ ಬ್ಯಾಟ್ಸ್‌ಮನ್‌ಗಳಿಗೆ ಆತ್ಮವಿಶ್ವಾಸವನ್ನು ನೀಡಿತು ಮತ್ತು ಡ್ರೆಸ್ಸಿಂಗ್ ರೂಮ್‌ನ ವಾತಾವರಣವು ಅತ್ಯುತ್ತಮವಾಗಿ ಉಳಿಯಿತು.

ಟಿ20 ಪಂದ್ಯಗಳಲ್ಲಿ ರೋಹಿತ್ ಸಾಧನೆ
ರೋಹಿತ್ ಶರ್ಮಾ ಭಾರತದ ಪರ 148 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 139.25 ಸ್ಟ್ರೈಕ್ ರೇಟ್ ಮತ್ತು 30.82 ಸರಾಸರಿಯಲ್ಲಿ 3853 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಈ ಮಾದರಿಯಲ್ಲಿ 4 ಶತಕ ಬಾರಿಸಿ ದಾಖಲೆ ಬರೆದಿದ್ದಾರೆ. ಇದಲ್ಲದೇ ಐವತ್ತು ರನ್ ಗಳ ಸಂಖ್ಯೆ 29 ಬಾರಿ ದಾಟಿದೆ. ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ರೋಹಿತ್ ಶರ್ಮಾ ಬ್ಯಾಟ್ಸ್‌ಮನ್ ಆಗಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದು ಈಗ ಕುತೂಹಲಕಾರಿಯಾಗಿದೆ.
ಹೇಗಿದೆ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ದಾಖಲೆ?
ಇನ್ನು ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಅವರ ದಾಖಲೆ ಸಮಾಧನ ತರುವುದಿಲ್ಲ. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಆಡಿದ ಆರು ಪಂದ್ಯಗಳಿಂದ ಕೇವಲ 116 ರನ್ ಕಲೆ ಹಾಕಿದ್ದರು. 2021ರಲ್ಲಿ ನಡೆದ ವಿಶ್ವಕಪ್‌ನಲ್ಲಿ ರೋಹಿತ್ ಬ್ಯಾಟ್ ಸ್ಥಿರ ಪ್ರದರ್ಶನ ನೀಡಿತ್ತು.
ಈ ವಿಶ್ವಕಪ್‌ನಲ್ಲಿ ರೋಹಿತ್ 5 ಪಂದ್ಯಗಳಲ್ಲಿ 174 ರನ್ ಸಿಡಿಸಿದ್ದಾರೆ. ಮುಂಬರುವ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವ ಆಸೆಯನ್ನು ಹೊಂದಿರುವ ರೋಹಿತ್ ಶರ್ಮಾ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಮತ್ತೊಮ್ಮೆ ವಿಶ್ವಕಪ್ ಮುಕುಟ ತೊಡಿಸಲಿ ಎಂಬುದೇ ಅಭಿಮಾನಿಗಳ ಆಶಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications