For Quick Alerts
ALLOW NOTIFICATIONS  
For Daily Alerts
 

T20 World Cup: ಫ್ಲಾಪ್ ರೋಹಿತ್‌ಗೆ ಸ್ಥಾನ ಏಕೆ, ಹಿಟ್‌ ವಿರಾಟ್‌ಗೆ ಗೇಟ್ ಪಾಸ್‌? ಅಂಕಿ ಅಂಶಗಳಲ್ಲಿ ಕೊಹ್ಲಿ ಕಿಂಗ್

ಟೀಮ್ ಇಂಡಿಯಾದ ಸ್ಟಾರ್‌ ಬ್ಯಾಟರ್ ವಿರಾಟ್‌ ಕೊಹ್ಲಿ ಸದ್ಯ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ನಲ್ಲಿ ವಿರಾಟ್‌ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಅಲ್ಲದೆ ಒಂದೇ ಏಕದಿನ ವಿಶ್ವಕಪ್ ನಲ್ಲಿ ಗರಿಷ್ಠ ರನ್ ಬಾರಿಸಿದ ಹಿರಿಮೆ ಬರೆದಿದ್ದಾರೆ. ಆದರೆ ವಿರಾಟ್‌ ಕೊಹ್ಲಿ 2024ರ ಟಿ20 ವಿಶ್ವಕಪ್ ಆಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ಬಿಸಿಸಿಐ ಮೂಲಗಳ ಪ್ರಕಾರ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಆಡುವುದಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. ಆದರೆ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಉಭಯ ಆಟಗಾರರು ವಿಶ್ವ ಕ್ರಿಕೆಟ್ ನಲ್ಲಿ ತಮ್ಮದೇ ಛಾಪು ಹೊಂದಿದ್ದಾರೆ.

Rohit Will Be Captain in T20 World Cup, Virat Kohli to miss the 2024 T20 World Cup?

ರೋಹಿತ್ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರ ಟಿ20 ಅಂಕಿ ಅಂಶಗಳನ್ನು ತಾಳೆ ಹಾಕಿದಾಗ, ಯಾರು ಬೆಸ್ಟ್‌ ಎನ್ನುವುದು ತಿಳಿಯುತ್ತದೆ. ಟಿ20 ವಿಶ್ವಕಪ್ ಹಾಗೂ ಟಿ20 ಸರಣಿಯಲ್ಲಿ ಭರ್ಜರಿ ಫಾರ್ಮ್‌ ನಲ್ಲಿರುವ ಆಟಗಾರರಿಗೆ ಮಣೆ ಹಾಕಬೇಕು. ಈ ಲೆಕ್ಕಾಚಾರದಲ್ಲಿ ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ ಅವರಿಗಿಂತ ಮುಂದಿದ್ದಾರೆ.

ರೋಹಿತ್ ಶರ್ಮಾ 2007 ರಿಂದ ಟಿ20 ವಿಶ್ವಕಪ್ ಆಡುತ್ತಿದ್ದಾರೆ. ಟಿ20 ವಿಶ್ವಕಪ್ ನಲ್ಲಿ ರೋಹಿತ್ 39 ಪಂದ್ಯಗಳ 36 ಇನ್ನಿಂಗ್ಸ್ ಗಳಲ್ಲಿ 34.39 ರ ಸರಾಸರಿಯಲ್ಲಿ ರೋಹಿತ್ 963 ರನ್ ಕಲೆ ಹಾಕಿದ್ದಾರೆ. ಇನ್ನು ವಿರಾಟ್‌ ಕೊಹ್ಲಿ 27 ಪಂದ್ಯಗಳ 25 ಇನ್ನಿಂಗ್ಸ್ ಗಳಲ್ಲಿ 81.50 ರ ಸರಾಸರಿಯಲ್ಲಿ 1141 ರನ್ ಸಿಡಿಸಿದ್ದಾರೆ.

Rohit Will Be Captain in T20 World Cup, Virat Kohli to miss the 2024 T20 World Cup?

ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ನಲ್ಲಿ ವಿರಾಟ್‌ ತಮ್ಮ ಘನತೆಗೆ ತಕ್ಕ ಆಟವನ್ನು ಆಡಿದ್ದರು. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ನಲ್ಲಿ ಸೋಲು ಕಂಡಿತ್ತು. ವಿರಾಟ್ ಒಟ್ಟು ಆರು ಪಂದ್ಯಗಳಲ್ಲಿ 296 ರನ್ ಸಿಡಿಸಿದ್ದರು. ಇದೇ ಟೂರ್ನಿಯಲ್ಲಿ ರೋಹಿತ್ ಶರ್ಮಾ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದರು.

ವಿರಾಟ್‌ ಅವರನ್ನು ಬಿಟ್ಟು ಟಿ20 ವಿಶ್ವಕಪ್ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಬಿಸಿಸಿಐ ಯೋಚಿಸುತ್ತಿದೆ. ಆದರೆ ಅಂಕಿ ಅಂಶಗಳು ವಿರಾಟ್‌ ಬೆನ್ನಿಗೆ ನಿಂತಿವೆ. ಇನ್ನು 2024ರ ಐಪಿಎಲ್‌ ವಿರಾಟ್‌ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ಮಹತ್ವದಾಗಿವೆ. ಐಪಿಎಲ್‌ ನಲ್ಲಿ ರನ್ ಮಹಲ್ ಕಟ್ಟಿ ತಮ್ಮಲ್ಲಿ ಇನ್ನು ಬ್ಯಾಟಿಂಗ್ ಶಕ್ತಿ ಇದೆ ಎಂದು ತೋರಿಸಬೇಕಿದೆ.

ರೋಹಿತ್ ಶರ್ಮಾ ಐಪಿಎಲ್ ನಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದಾರೆ. ಸತತ ನಾಲ್ಕು ಐಪಿಎಲ್ ಟೂರ್ನಿಗಳಲ್ಲಿ ರೋಹಿತ್ 400 ರನ್ ಗಳ ಗಡಿಯನ್ನು ದಾಟುವಲ್ಲಿ ವಿಫಲರಾಗಿದ್ದರು. ಇನ್ನು ಈ ಅಂಕಿ ಅಂಶದಲ್ಲೂ ವಿರಾಟ್ ಕಿಂಗ್‌.. 2022 ರ ಐಪಿಎಲ್‌ ಆವೃತ್ತಿಯನ್ನು ಹೊರತು ಪಡಿಸಿದರೆ, ಉಳಿದ ಮೂರು ಆವೃತ್ತಿಗಳಲ್ಲಿ ವಿರಾಟ್‌ 400 ರನ್ ಗಡಿ ದಾಟಿದ್ದಾರೆ.

ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ 237 ಇನ್ನಿಂಗ್ಸ್ ಗಳಲ್ಲಿ 7263 ರನ್ ಗಳಿಸಿದ್ದಾರೆ. ಈ ವೇಳೆ ಅವರ ಸರಾಸರಿ 37.25 ಇತ್ತು. ಇನ್ನು ರೋಹಿತ್ ಶರ್ಮಾ 243 ಇನ್ನಿಂಗ್ಸ್ ಗಳಲ್ಲಿ 29.58ರ ಸರಾಸರಿಯೊಂದಿಗೆ 6211 ರನ್ ಬಾರಿಸಿದ್ದಾರೆ.

ಹೀಗಾಗಿಯೇ ಮುಂಬರುವ ಐಪಿಎಲ್‌ ಸರಣಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ಮಹತ್ವದಾಗಿದೆ. ಐಪಿಎಲ್‌ ನಲ್ಲಿ ರನ್ ಗಳನ್ನು ಕಲೆ ಹಾಕಿ, ವಿಶ್ವಕಪ್ ಆಡಲು ತಾವು ಸಿದ್ಧರಿರುವುದಾಗಿ ವಿರಾಟ್‌ ಹಾಗೂ ರೋಹಿತ್ ಶರ್ಮಾ ಸಾಬಿತು ಪಡಿಸಬೇಕಿದೆ.

Story first published: Sunday, December 3, 2023, 11:48 [IST]
Other articles published on Dec 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+