ಐಪಿಎಲ್ ಇತಿಹಾಸದ ಎರಡನೇ ವೇಗದ ಅರ್ಧಶತಕ ಬಾರಿಸಿದ ರೊಮಾರಿಯೊ ಶೆಫರ್ಡ್
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವೆಸ್ಟ್ ಇಂಡೀಸ್ ಆಟಗಾರರು ತಮ್ಮ ಹವಾ ಕ್ರಿಯೇಟ್ ಮಾಡಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ರೊಮಾರಿಯೊ ಶೆಫರ್ಡ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಅಬ್ಬರಿಸಿದ್ದಾರೆ. ಇಷ್ಟು ದಿನ ಟೀಮ್ ಡೇವಿಡ್ ಮಾಡುತ್ತಿದ್ದ ಕೆಲಸವನ್ನು, ರೊಮಾರಿಯೊ ಶೆಫರ್ಡ್ ಮಾಡಿ ಬೀಗಿದರು. ಇವರು 19ನೇ ಓವರ್‌ನಲ್ಲಿ ರನ್‌ಗಳ ಹೊರೆಯನ್ನು ಹರಿಸಿದಕ್ಕಾಗಿ ದೊಡ್ಡ ದಾಖಲೆಯನ್ನು ನಿರ್ಮಿಸಿದರು.
ಆರ್‌ಸಿಬಿ ತಂಡದ ನಾಯಕ ರಜತ್ ಪಟಿದಾರ್ ಅವರ ವಿಕೆಟ್ ಬೀಳ್ತಾ ಇದ್ದಂತೆ ಕ್ರೀಸ್‌ಗೆ ಬಂದ ರೊಮಾರಿಯೊ ಶೆಫರ್ಡ್ ತಮ್ಮ ನೈಜ್ಯ ಆಟವನ್ನು ಆಡಿದರು. ಇವರು ಐಪಿಎಲ್ ಇತಿಹಾಸದ ಅತಿ ವೇಗದ ಎರಡನೇ ಅರ್ಧಶತಕ ಬಾರಿಸಿದ ಹಿರಿಮೆಯನ್ನು ತನ್ನದಾಗಿಸಿಕೊಂಡರು.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಭಟಿಸಿದ ರೊಮಾರಿಯೊ ಶೆಫರ್ಡ್ 378 ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದ್ದಾರೆ. ಇವರು 14 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 53 ರನ್ ಬಾರಿಸಿ ಆರ್‌ಸಿಬಿ ತಂಡ ಸವಾಲಿನ ಮೊತ್ತ ಕಲೆ ಹಾಕುವಲ್ಲಿ ಕಾರಣರಾದರು. ಇವರ ಅಬ್ಬರದ ಆಟದ ಪರಿಣಾಮ ಆರ್‌ಸಿಬಿ ಸವಾಲಿನ ಮೊತ್ತವನ್ನು ಕಲೆ ಹಾಕುವಲ್ಲಿ ಸಫಲವಾಯಿತು.
13 ಎಸೆತಗಳಲ್ಲಿ ಅರ್ಧಶತಕ
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ. ಯಶಸ್ವಿ 13 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಹಿರಿಮೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಮೂವರು ಆಟಗಾರರು ಇದ್ದಾರೆ. ಕೆಎಲ್ ರಾಹುಲ್, ಪ್ಯಾಟ್ ಕಮಿನ್ಸ್, ರೊಮಾರಿಯೊ ಶೆಫರ್ಡ್ 14 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಯೂಸುಫ್ ಪಠಾಣ್ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications