Romario Shepherd: ಒಂದೇ ಎಸೆತದಲ್ಲಿ 3 ಸಿಕ್ಸರ್ ಬಾರಿಸಿದ RCB ಪ್ಲೇಯರ್
ವೆಸ್ಟ್ ಇಂಡೀಸ್ ತಂಡದ ಆಟಗಾರರು ತಮ್ಮ ಧಮಾಕೆದಾರ್ ಪ್ರದರ್ಶನದಿಂದ ವಿಶ್ವದ ನಾನಾ ಲೀಗ್‌ಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಈ ದೇಶದ ಸ್ಟಾರ್ ಆಟಗಾರರು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ನೆರವಾಗಿದ್ದಾರೆ. ಆರ್‌ಸಿಬಿ ತಂಡದ ಪರವೂ ಹಲವು ಸ್ಟಾರ್ ಆಟಗಾರರು ಬ್ಯಾಟ್ ಮಾಡಿ ಸೈ ಎನಿಸಿಕೊಂಡಿದ್ದಾರೆ. 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ಆಡಿದ ರೊಮಾರಿಯೋ ಶೆಫರ್ಡ್ ಆರ್ಭಟ ನಡೆಸಿದ್ದರು. ಈಗ ಇವರ ಬ್ಯಾಟ್ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಸದ್ದು ಮಾಡಿದೆ. ಇವರು ಒಂದೇ ಎಸೆತದಲ್ಲಿ 3 ಸಿಕ್ಸರ್ ಬಾರಿಸಿದ್ದಾರೆ. ಅದು ಹೇಗಪ್ಪಾ ಅನ್ನುವ ಕುತೂಹಲನಾ ಈ ವರದಿ ನೋಡಿ.
ವಿಶ್ವದಲ್ಲಿ ಯಾವುದೇ ಲೀಗ್‌ಗಳು ನಡೆದ್ರೂ ಸಹ ಅದರ ಮೇಲೆ ಆರ್‌ಸಿಬಿ ಅಭಿಮಾನಿಗಳ ಕಣ್ಣು ನೆಟ್ಟಿರುತ್ತದೆ. ಈ ಲೀಗ್‌ನಲ್ಲಿ ಆರ್‌ಸಿಬಿ ಪರ ಆಡುವ ಆಟಗಾರನ ಸಾಧನೆ ಹೇಗಿದೆ ಎಂಬ ಬಗ್ಗೆ ಅಭಿಮಾನಿಗಳು ಚಿತ್ತ ನೆಟ್ಟಿರುತ್ತಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೇಂಟ್ ಲೂಸಿಯಾ ಹಾಗೂ ಗಯಾನ್ ಅಮೆಜಾನ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಗಾಯನ್ ತಂಡ ಮೊದಲು ಬ್ಯಾಟಿಂಗ್ ಮಾಡಿತು.

ಗಯಾನ್ ತಂಡದ ಪರ ರೊಮಾರಿಯೋ ಶೆಫರ್ಡ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಇವರು ಬ್ಯಾಟಿಂಗ್ ಮಾಡುವಾಗ ಎದುರಾಳಿ ತಂಡದ ಓಶೇನ್ ಥಾಮಸ್ ಬೌಲಿಂಗ್ ಮಾಡಲು ಬಂದರು. 15ನೇ ಓವರ್ ಮೂರನೇ ಎಸೆತದಲ್ಲಿ ಥಾಮಸ್ ಮೊದಲು ಒಂದು ವೈಡ್ ಬೌಲ್ ಮಾಡಿದರು. ಹೀಗಾಗಿ ಮತ್ತೆ ಬೌಲಿಂಗ್ ನಡೆಸಬೇಕಾಯಿತು. ನಂತರದ ಎಸೆತವನ್ನು ಅವರು ನೋಬಾಲ್ ಮಾಡಿದರು. ಈ ಎಸೆತದಲ್ಲಿ ರೊಮಾರಿಯೋ ಸಿಕ್ಸರ್ ಬಾರಿಸಿದರು. ನಂತರದ ಎಸೆತವನ್ನು ಥಾಮಸ್ ನೋಬಾಲ್ ಮಾಡಿದರು. ಈ ಎಸೆತದಲ್ಲೂ ರೊಮಾರಿಯೋ ಸಿಕ್ಸರ್ ಬಾರಿಸಿದರು. ನಂತರ ಲೀಗ್‌ಲ ಎಸೆತವನ್ನು ಥಾಮಸ್ ಮಾಡಿದರು. ಈ ಎಸೆತದಲ್ಲೂ ರೊಮಾರಿಯೋ ಸಿಕ್ಸರ್ ಬಾರಿಸಿದರು. ಈ ಮೂಲಕ ಒಂದೇ ಎಸೆತದಲ್ಲಿ ಮೂರು ಸಿಕ್ಸರ್ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡರು. ಅಲ್ಲದೆ ಥಾಮಸ್ ಒಂದೇ ಎಸೆತದಲ್ಲಿ 21 ರನ್ ನೀಡಿದ ದಾಖಲೆ ಬರೆದರು. ಅಂತಿಮವಾಗಿ ಗಯಾನ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 202 ರನ್ ಸೇರಿಸಿತು. ರೊಮಾರಿಯೋ 34 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್ ನೆರವಿನಿಂದ ಅಜೇಯ 73 ರನ್ ಸಿಡಿಸಿದರು.
ಯುವ ಆಟಗಾರನ ಅಬ್ಬರ
ರೊಮಾರಿಯೋ ಶೆಫರ್ಡ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಹೊರತಾಗಿಯೂ ಗಯಾನ್ ಪಂದ್ಯವನ್ನು ಗೆಲ್ಲಲಿಲ್ಲ. ಸೆಂಟ್ ಲೂಸಿಯಾ ಕಿಂಗ್ಸ್ ತಂಡದ ಪರ ಅಕೀಮ್ ಆಗಸ್ಟೆ 35 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಾಯದಿಂದ 73 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಮಿಂಚಿದರು. ಅಂತಿಮವಾಗಿ ಸೆಂಟ್ ಲೂಸಿಯಾ 18.1 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 203 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications