Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫುಟ್ಬಾಲ್ ದಿಗ್ಗಜ ರೊನಾಲ್ಡಿನೋಗೆ ಜಾಮೀನು, ಗೃಹಬಂಧನಕ್ಕೆ ಅನುಮತಿ

Ronaldinho Granted House Arrest in Paraguay After Fake Passports Claims

ಫುಟ್ಬಾಲ್ ದಂತಕತೆ ಬ್ರೆಜಿಲ್‌ನ ರೊನಾಲ್ಡಿನೋ ಮತ್ತು ಅವರ ಸಹೋದರನನ್ನು ಪರಾಗ್ವೆ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಗೃಹಬಂಧನದಲ್ಲಿರಲು ಪೆರಾಗ್ವೆ ನ್ಯಾಯಾಧೀಶರು ಅನುಮತಿ ನೀಡಿದ್ದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ತಪ್ಪು ದಾಖಲೆಗಳನ್ನು ನೀಡಿ, ನಕಲಿ ಪಾಸ್‌ಪೋರ್ಟ್ ಬಳಸಿ ಸೌತ್ ಅಮೆರಿಕನ್ ದೇಶಕ್ಕೆ ಪ್ರವೇಶಿಸಿದ ಆರೋಪದಲ್ಲಿ ರೊನಾಲ್ಡೋ ಮತ್ತು ಅವರ ಸೋದರ ಬಂಧಿಸಲ್ಪಟ್ಟಿದ್ದರು. ಪರಾಗ್ವೆಯ ರೆಸಾರ್ಟ್ ಯಾಚ್ & ಗಾಲ್ಫ್ ಕ್ಲಬ್‌ನಲ್ಲಿ ಮಾರ್ಚ್ 4ರ ರಾತ್ರಿ ಬಂಧಿಸಲಾಗಿತ್ತು.

ರೊನಾಲ್ಡಿನೊ ಮತ್ತು ಅವರ ಸಹೋದರ ರಾಬರ್ಟೊ ಎಸ್ಸಿಸ್ ಅವರನ್ನು ಅಸುನ್ಸಿಯಾನ್‌ನ ಮಧ್ಯಭಾಗದಲ್ಲಿರುವ ಹೋಟೆಲ್‌ಗೆ ವರ್ಗಾಯಿಸಲಾಗುತ್ತದೆ. ಅಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ ಜಾಮೀನಿಗಾಗಿ 1.6 ಮಿಲಿಯನ್ ಡಾಲರ್ ಪಾವತಿಸಲು ಒಪ್ಪಿದ ನಂತರ ಇಬ್ಬರೂ ಗೃಹಬಂಧನಕ್ಕೆ ಒಪ್ಪಸಲಾಯಿತು.

ರೊನಾಲ್ಡಿನೊ ಮತ್ತು ರಾಬರ್ಟೊ ಪಾಲ್ಮರೋಗೊ ಹೋಟೆಲ್‌ನಲ್ಲಿ ಗೃಹಬಂಧನದಲ್ಲಿರುತ್ತಾರೆ ಮತ್ತು ಅಧಿಕಾರಿಗಳು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಬ್ರೆಜಿಲ್ ತಂಡಕ್ಕೆ 2002ರಲ್ಲಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು 39ರ ಹರೆಯದ ರೊನಾಲ್ಡಿನೊ. ಅವರು 2018 ರಲ್ಲಿ ಫುಟ್ಬಾಲ್‌ನಿಂದ ನಿವೃತ್ತರಾಗಿದ್ದರು.

Story first published: Sunday, April 12, 2020, 20:15 [IST]
Other articles published on Apr 12, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+