Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Manchester Test: ಜೋ ರೂಟ್‌ 150: ಇಂಗ್ಲೆಂಡ್‌ಗೆ 186 ರನ್‌ ಮುನ್ನಡೆ: ವಿಕೆಟ್‌ ಪಡೆಯಲು ಬೌಲರ್ಸ್‌ ಪರದಾಟ

ಮ್ಯಾಂಚೆಸ್ಟರ್‌: ಸ್ಟಾರ್ ಆಟಗಾರ ಜೋ ರೂಟ್‌ (150 ರನ್) ಬಾರಿಸಿದ ಶತಕ ಹಾಗೂ ನಾಯಕ ಬೆನ್‌ ಸ್ಟೋಕ್ಸ್‌, ಬೆನ್‌ ಡಕೆಟ್‌ ಉತ್ತಮ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್‌ ನಾಲ್ಕನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ 186 ರನ್‌ಗಳ ಮುನ್ನಡೆ ಸಾಧಿಸಿತು. ಇಂಗ್ಲೆಂಡ್‌ ಮೂರನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್‌ ನಷ್ಟಕ್ಕೆ 544 ರನ್‌ ಕಲೆ ಹಾಕಿದೆ. ನಾಯಕ ಬೆನ್‌ ಸ್ಟೋಕ್ಸ್‌ (ಅಜೇಯ 77) ಹಾಗೂ ಲಿಯಾಮ್ ಡಾಸನ್ (ಅಜೇಯ 21) ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಶುಕ್ರವಾರ ಇಂಗ್ಲೆಂಡ್‌ 2 ವಿಕೆಟ್‌ಗೆ 225 ರನ್‌ಗಳಿಂದ ಮೊದಲ ಇನಿಂಗ್ಸ್ ಮುಂದುವರೆಸಿತು. ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಜೋ ರೂಟ್‌ ತಮ್ಮ ಘನತೆಗೆ ತಕ್ಕ ಆಟವನ್ನು ಆಡಿದರು. ಇವರಿಗೆ ಮೂರನೇ ಕ್ರಮಾಂಕದ ಓಲಿ ಪೋಪ್‌ 7 ಬೌಂಡರಿ ನೆರವಿನಿಂದ 71 ರನ್ ಬಾರಿಸಿ ಮಿಂಚಿದರು. ಪೋಪ್ ಹಾಗೂ ರೂಟ್ ಜೋಡಿ ಮೂರನೇ ವಿಕೆಟ್‌ಗೆ 231 ಎಸೆತಗಳಲ್ಲಿ 144 ರನ್‌ ಸೇರಿಸಿತು. ಇಂಗ್ಲೆಂಡ್ ತಂಡದ ಹ್ಯಾರಿ ಬ್ರೂಕ್‌ (3) ರನ್‌ ಕಲೆ ಹಾಕುವಲ್ಲಿ ವಿಫಲರಾದರು.

Root s 150 Puts England in Command with 186-Run Lead Against India

ಐದನೇ ವಿಕೆಟ್‌ಗೆ ಬೆನ್‌ ಸ್ಟೋಕ್ಸ್‌ ಹಾಗೂ ಜೋ ರೂಟ್‌ ಜೋಡಿ ಸ್ಥಿರ ಪ್ರದರ್ಶನ ನೀಡಿತು. ಈ ವೇಳೆ ಈ ಜೋಡಿ ಭಾರತದ ಬೌಲರ್‌ಗಳನ್ನು ಕಾಡಿದರು. ಈ ಜೋಡಿ 219 ಎಸೆತಗಳಲ್ಲಿ 142 ರನ್‌ ಸಿಡಿಸಿತು. ಈ ವೇಳೆ ಸ್ಟೋಕ್ಸ್‌ಗೆ ಗಾಯವಾಗಿದ್ದರಿಂದ ಮೈದಾನದಿಂದ ಹೊರ ನಡೆದರು. ಇಂಗ್ಲೆಂಡ್ ತಂಡದ ಭರವಸೆಯ ಬ್ಯಾಟರ್‌ ಜೇಮಿ ಸ್ಮಿತ್ ಹಾಗೂ ಕ್ರಿಸ್‌ ವೋಕ್ಸ್‌ ರನ್‌ ಕಲೆ ಹಾಕುವಲ್ಲಿ ಪರದಾಟ ನಡೆಸಿದರು.

ಜೋ ರೂಟ್‌ ಶತಕ

ಇಂಗ್ಲೆಂಡ್ ತಂಡದ ಭರವಸೆಯ ಬ್ಯಾಟರ್‌ ಜೋ ರೂಟ್‌ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 248 ಎಸೆತಗಳಲ್ಲಿ 14 ಬೌಂಡರಿ ನೆರವಿನಿಂದ 150 ರನ್‌ ಬಾರಿಸಿದರು. ಇದು ರೂಟ್‌ ಟೆಸ್ಟ್‌ ಕ್ರಿಕೆಟ್‌ನ 38ನೇ ಶತಕವಾಗಿದೆ. ಈ ಶತಕದ ಮೂಲಕ ರೂಟ್‌ ಹಲವು ದಾಖಲೆಗಳನ್ನು ಬರೆದರು.

ಅವಕಾಶ ಕೈ ಚೆಲ್ಲಿದ ಭಾರತ

ಇಂಗ್ಲೆಂಡ್ ತಂಡ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿತ್ತು. ಇನಿಂಗ್ಸ್‌ನ 54ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಅವರ ಆರನೇ ಎಸೆತವನ್ನು ಗುರುತಿಸುವಲ್ಲಿ ವಿಫಲರಾದರು. ಅಲ್ಲದೆ ಇವರ ಬ್ಯಾಟ್‌ ಅಂಚಿನಿಂದ ಬಡೆದ ಚೆಂಡು ಸ್ಲಿಪ್‌ ಫೀಲ್ಡರ್‌ನತ್ತ ಸಾಗಿತು. ಸಾಯಿ ಸುದರ್ಶನ್‌ ಇದನ್ನು ತಡೆದರು. ಆದರೆ ನಾನ್‌ ಸ್ಟ್ರೈಕರ್ ಎಂಡ್‌ನಲ್ಲಿದ್ದ ಒಲಿ ಪೋಪ್‌ ಹಾಫ್ ವೇ ಮಾರ್ಕ್ ದಾಟಿ ಆಗಿತ್ತು. ರವೀಂದ್ರ ಜಡೇಜಾ ಡೈರೆಕ್ಟ್‌ ಹಿಟ್ ಮಾಡುವಲ್ಲಿ ವಿಫಲರಾಗಿ ಸುವರ್ಣ ಅವಕಾಶವನ್ನು ಕೈ ಚೆಲ್ಲಿದರು.

Root s 150 Puts England in Command with 186-Run Lead Against India

ಇನ್ನು ಅನ್ಶುಲ್ ಕಾಂಬೋಜ್ ಅವರ ಎಸೆತದಲ್ಲೂ ಟೀಮ್ ಇಂಡಿಯಾ ಒಂದು ಚಾನ್ಸ್‌ ಮಿಸ್ ಮಾಡಿಕೊಂಡಿತು. ಇನಿಂಗ್ಸ್‌ನ 63ನೇ ಓವರ್‌ನ್ನು ಅನ್ಶುಲ್ ಕಾಂಬೋಜ್ ಮಾಡಿದರು. ಈ ವೇಳೆ ವಿಕೆಟ್‌ ಕೀಪರ್‌ ಸ್ಟಂಪ್‌ ಹತ್ತಿರ ನಿಂತಿದ್ದರು. ಈ ಓವರ್‌ನ ನಾಲ್ಕನೆ ಎಸೆತ ಪೋಪ್‌ ಅವರ ಬ್ಯಾಟ್‌ ಅಂಚಿಗೆ ತಾಗಿ ಹೋಯಿತು. ಸ್ಟಂಪ್‌ ಹಿಂದಿ ನಿಂತಿದ್ದ ಧ್ರುವ್ ಜುರೇಲ್‌ ಕ್ಯಾಚ್ ಚೆಲ್ಲಿದರು.

ವಿಕೆಟ್‌ ಪಡೆಯಲು ಬೌಲರ್ಸ್‌ ಪರದಾಟ

ಟೀಮ್ ಇಂಡಿಯಾ ವೇಗದ ಬೌಲರ್‌ಗಳು ಹಾಗೂ ಸ್ಪಿನ್ ಬೌಲರ್‌ಗಳು ವಿಕೆಟ್‌ ಪಡೆಯಲು ಪರದಾಟ ನಡೆಸಿದರು. 135 ಓವರ್‌ ಬೌಲ್‌ ಮಾಡಿದ ಭಾರತದ ಬೌಲರ್ಸ್‌ 7 ವಿಕೆಟ್‌ ಪಡೆಯುವಲ್ಲಿ ಮಾತ್ರ ಸಫಲರಾಗಿದ್ದಾರೆ. ಟೀಮ್ ಇಂಡಿಯಾ ಪರ ಸ್ಪಿನ್ ಬೌಲರ್ಸ್‌ ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ತಲಾ ಎರಡು ವಿಕೆಟ್‌ ಕಬಳಿಸಿದರು. ಮೂರನೇ ದಿನ ಭಾರತೀಯ ಬೌಲರ್ಸ್‌ ಕೇವಲ 5 ವಿಕೆಟ್‌ ಪಡೆಯುವಲ್ಲಿ ಸಫಲವಾಯಿತು.

Story first published: Friday, July 25, 2025, 23:28 [IST]
Other articles published on Jul 25, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+