ಓವಲ್‌ನಲ್ಲಿ ಶತಕ ಬಾರಿಸಿದ ರೂಟ್: ಹಲವು ದಾಖಲೆಗಳು ನಿರ್ಮಾಣ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಪರ ಭರವಸೆಯ ಆಟಗಾರ ಜೋ ರೂಟ್ ಕ್ಲಾಸಿಕ್ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದಾರೆ. ಅಲ್ಲದೆ ಐದನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ಅಬ್ಬರಿಸಿದರು. ಈ ಮೂಲಕ ಜೋ ರೂಟ್ ಹಲವು ದಾಖಲೆಗಳನ್ನು ಬರೆದರು.
ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿರುವ ಜೋ ರೂಟ್ ಅಬ್ಬರಿಸಿದ್ದಾರೆ. ಇವರು ಭಾರತದ ವಿರುದ್ಧದ ಪಂದ್ಯದಲ್ಲಿ 12 ಬೌಂಡರಿ ಸಹಾಯದಿಂದ 105 ರನ್ ಬಾರಿಸಿ ಅಬ್ಬರಿಸಿದರು. ಈ ಮೂಲಕ ಈ ಸರಣಿಯಲ್ಲಿ ರೂಟ್ ಮೂರನೇ ಶತಕ ಬಾರಿಸಿ ಮಿಂಚಿದರು. ಇವರ ಈ ಅಮೋಘ ಶತಕದ ನೆರವಿನಿಂದ ರೂಟ್ ದಿಗ್ಗಜ ಆಟಗಾರರ ದಾಖಲೆಯನ್ನು ಮೀರಿ ನಿಂತಿದ್ದಾರೆ.

ಜೋ ರೂಟ್ ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ ಅಮೋಘ ಇನಿಂಗ್ಸ್ ಮೂಲಕ ಸಾಧನೆ ಮಾಡಿದ್ದಾರೆ. ಈ ಟೆಸ್ಟ್ ಶತಕದ ಮೂಲಕ ರೂಟ್ ತವರಿನಲ್ಲಿ 24ನೇ ಶತಕವಾಗಿದೆ. ಇದರೊಂದಿಗೆ ಶ್ರೀಲಂಕಾದ ಮಹೇಲ್ ಜಯವರ್ಧನೆ, ದಕ್ಷಿಣ ಆಫ್ರಿಕಾದ ಜಾಕ್ ಕಾಲೀಸ್, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಸ್ಟಾರ್ ಆಟಗಾರರು ತವರಿನಲ್ಲಿ 23 ಶತಕ ಬಾರಿಸಿದ ದಾಖಲೆಯನ್ನು ಹೊಂದಿದ್ದರು. ಈಗ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಜೋ ರೂಟ್ ತಲುಪಿದ್ದಾರೆ. ಇನ್ನು ರೂಟ್ ಭಾರತದ ವಿರುದ್ಧ 16 ಶತಕ ಬಾರಿಸಿ ಅಬ್ಬರಿಸಿದ್ದಾರೆ. ಈ ಮೂಲಕ ರೂಟ್ ಭಾರತದ ವಿರುದ್ಧ ಮೂರು ಸ್ವರೂಪಗಳಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಸ್ಟೀವನ್ ಸ್ಮಿತ್ ಜೊತೆಗೆ ಅಗ್ರ ಸ್ಥಾನದಲ್ಲಿದ್ದಾರೆ.
ದಾಖಲೆಯ ಶತಕ
ಈ ಶತಕದೊಂದಿಗೆ ರೂಟ್ ಮತ್ತೊಂದು ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ರೂಟ್ 39ನೇ ಶತಕ ಬಾರಿಸುವ ಮೂಲಕ ಮತ್ತೊಂದು ದಾಖಲೆ ಬರೆದರು. ಟೆಸ್ಟ್ ಫಾರ್ಮೆಟ್‌ನಲ್ಲಿ 38 ಶತಕ ಬಾರಿಸಿದ್ದ ಕುಮಾರ್ ಸಂಗಕ್ಕಾರ ಅವರ ಸಾಧನೆಯನ್ನು ಮೀರಿ ನಿಂತರು.
ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರು
ಸಚಿನ್ ತೆಂಡೂಲ್ಕರ್, 51 ಶತಕ
ಜಾಕ್ವೆಸ್ ಕಾಲಿಸ್, 45 ಶತಕ
ರಿಕಿ ಪಾಂಟಿಂಗ್, 41 ಶತಕ
ಜೋ ರೂಟ್, 39 ಶತಕ
ಕುಮಾರ್ ಸಂಗಕ್ಕಾರ, 38 ಶತಕ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications