Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

112 ವರ್ಷ ಹಳೆಯ ಟೆಸ್ಟ್ ದಾಖಲೆ ಮುರಿದ ರಾಸ್ ಟೇಲರ್!

ಪರ್ತ್, ನ.16: ನ್ಯೂಜಿಲೆಂಡ್ ನ ಬ್ಯಾಟ್ಸ್ ಮನ್ ರಾಸ್ ಟೇಲರ್ ಅವರು ಟೆಸ್ಟ್ ಇತಿಹಾಸದಲ್ಲಿ 112 ವರ್ಷ ಕಾಲ ಯಾರೊಬ್ಬರೂ ಮಾಡಿರದ ಸಾಧನೆಯನ್ನು ಸೋಮವಾರ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ವಾಕಾ ಮೈದಾನದಲ್ಲಿ ಈ ಸಾಧನೆ ಕಂಡು ಬಂದಿದೆ.

ಬಲಗೈ ಬ್ಯಾಟ್ಸ್ ಮನ್ ಟೇಲರ್ ಅವರು 374ಎಸೆತಗಳಲ್ಲಿ 290ರನ್ (43X4) ಗಳಿಸಿದ್ದಾರೆ. ಇದು ಆಸ್ಟ್ರೇಲಿಯಾ ನೆಲದಲ್ಲಿ ಪ್ರವಾಸಿ ತಂಡ ಬ್ಯಾಟ್ಸ್ ಮನ್ ರೊಬ್ಬರು ಗಳಿಸಿದ ಗರಿಷ್ಠ ಟೆಸ್ಟ್ ಮೊತ್ತವಾಗಿದೆ.

ಭಾನುವಾರದಂದು ಅಜೇಯ 235 ರನ್ ಗಳಿಸಿದ್ದ ರಾಸ್ ಟೇಲರ್ ಅವರು ಇಂದು ಕೊನೆ ಕಿವೀಸ್ ಬ್ಯಾಟ್ಸ್ ಮನ್ ಆಗಿ ಔಟಾದರು.[ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ವೇಗದ ಎಸೆತ ಹಾಕಿದ ಮಿಚೆಲ್ ಸ್ಟಾರ್ಕ್]

Ross Taylor breaks 112-year-old record in Australia

31 ವರ್ಷ ವಯಸ್ಸಿನ ರಾಸ್ ಟೇಲರ್ ಅವರು ತಮ್ಮ 12ನೇ ಶತಕದ ಮೂಲಕ 1903ರಿಂದ ಮುರಿಯದೇ ಉಳಿದಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. 1903ರಲ್ಲಿ ಟಿಪ್ ಫೋಸ್ಟರ್ ಅವರು ಈ ದಾಖಲೆ ಬರೆದಿದ್ದರು. [ಗವಾಸ್ಕರ್, ಪಾಂಟಿಂಗ್ ಸಾಲಿಗೆ ಸೇರಿದ ವಾರ್ನರ್]

ಇಂಗ್ಲೆಂಡಿನ ಫೋಸ್ಟರ್ ಅವರು ಆಸ್ಟ್ರೇಲಿಯಾದಲ್ಲಿ 287ರನ್ ಗಳಿಸಿದ್ದಲ್ಲದೆ, ಮೊದಲ ಟೆಸ್ಟ್ ಪಂದ್ಯದಲ್ಲೇ ಪ್ರವಾಸಿಗ ಬ್ಯಾಟ್ಸ್ ಮನ್ ಆಗಿ ಆಸೀಸ್ ನೆಲದಲ್ಲಿ ಅತ್ಯಧಿಕ ವೈಯಕ್ತಿಕ ದಾಖಲೆ ಬರೆದಿದ್ದರು. 1903ರ ಡಿಸೆಂಬರ್ ನಲ್ಲಿ ಸಿಡ್ನಿಯಲ್ಲಿ ದಾಖಲಾದ ಈ ಸಾಧನೆಯನ್ನು 112 ವರ್ಷಗಳಿಂದ ಯಾರೊಬ್ಬರೂ ಮುರಿಯಲು ಸಾಧ್ಯವಾಗಿರಲಿಲ್ಲ.

ರಾಸ್ ಟೇಲರ್ ಅವರ ದ್ವಿಶತಕದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ ತಂಡ ಬೃಹತ್ ಮೊತ್ತ ದಾಖಲಿಸಿದೆ. ಆಸ್ಟ್ರೇಲಿಯಾ 559 ಮೊತ್ತಕ್ಕೆ ಪ್ರತಿಯಾಗಿ 153.5 ಓವರ್ ಗಳಲ್ಲಿ 624ರನ್ ಗಳಿಸಿದೆ.

ಆಸ್ಟ್ರೇಲಿಯಾ ವಿರುದ್ಧ ಟಾಪ್ 5 ಬ್ಯಾಟಿಂಗ್ ಪ್ರದರ್ಶನ (ಪ್ರವಾಸಿ ತಂಡದ ಆಟಗಾರನಿಂದ)
* 364-ಲೆನ್ ಹಟನ್ (1938) ದಿ ಒವಲ್, ಲಂಡನ್,
* 290-ರಾಸ್ ಟೇಲರ್ (2015), ವಾಕಾ, ಪರ್ತ್.
* 287- ಟಿಪ್ ಫೋಸ್ಟರ್ (1903), ಸಿಡ್ನಿ ಕ್ರಿಕೆಟ್ ಗ್ರೌಂಡ್ (ಎಸ್ ಸಿಜಿ), ಸಿಡ್ನಿ.
* 281-ವಿವಿಎಸ್ ಲಕ್ಷ್ಮಣ್ (2001), ಈಡೆನ್ ಗಾರ್ಡನ್, ಕೋಲ್ಕತ್ತಾ.
* 277- ಬ್ರಿಯಾನ್ ಲಾರಾ (1993), ಸಿಡ್ನಿ ಕ್ರಿಕೆಟ್ ಗ್ರೌಂಡ್ (ಎಸ್ ಸಿಜಿ), ಸಿಡ್ನಿ.
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+