ಆರ್‌ಸಿಬಿ ಕಪ್ ಕನಸಿಗೀಗ ಜೀವ, ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ!

ಬೆಂಗಳೂರು, ಆಗಸ್ಟ್ 23: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಆಕರ್ಷಣೀಯ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರುನ (ಆರ್‌ಸಿಬಿ) ಕೋಚಿಂಗ್ ವಿಭಾಗದಲ್ಲಿ ಮಹತ್ವದ ಬದಲಾವಣೆಯಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಮಾಜಿ ಸಹಾಯಕ ಕೋಚ್ ಸೈಮನ್ ಕಟಿಚ್, ಆರ್‌ಸಿಬಿ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
ಶುಕ್ರವಾರ (ಆಗಸ್ಟ್ 23) ಆರ್‌ಸಿಬಿ ಫ್ರಾಂಚೈಸಿ ತಮ್ಮ ನೂತನ ಹೆಡ್ ಕೋಚ್ ಹೆಸರನ್ನು ಪ್ರಕಟಿಸಿದ್ದು, ಟೀಮ್ ಇಂಡಿಯಾದ ಮಾಜಿ ಕೋಚ್, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್-ಕೋಚ್ ಗ್ಯಾರಿ ಕಸ್ಟರ್ನ್ ಜಾಗವನ್ನು ಕಟಿಚ್ ಆವರಿಸಿಕೊಂಡಿದ್ದಾರೆ.
ಐಪಿಎಲ್‌ನಲ್ಲಿ ಒಂದೇ ಒಂದು ಸಾರಿಯೂ ಕಪ್ ಗೆಲ್ಲದ ಹಣೆಪಟ್ಟಿಯಿಂದ ಮುಂದಿನ ಬಾರಿ ಆರ್‌ಸಿಬಿ ಹೊರ ಬರಲಿದೆಯಾ?

ಮೈಕ್ ಹೆಸ್ಸನ್‌ಗೆ ಮಣೆ
ನ್ಯೂಜಿಲೆಂಡ್ ಮಾಜಿ ಕೋಚ್ ಮೈಕ್ ಹೆಸ್ಸನ್ ಅವರು ಆರ್‌ಸಿಬಿ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಹೆಸ್ಸನ್ ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಟೀಮ್ ಇಂಡಿಯಾ ಹೆಡ್‌ಕೋಚ್ ರೇಸ್‌ನಲ್ಲಿ ರವಿ ಶಾಸ್ತ್ರಿ ಗೆದ್ದಿದ್ದರಿಂದ ಹೆಸ್ಸನ್ ದ್ವಿತೀಯ ಸ್ಥಾನ ಪಡೆದಿದ್ದರು; ಅಂದರೆ ಆಯ್ಕೆಯಾಗಿರಲಿಲ್ಲ.

ಅನೇಕ ಚಾಂಪಿಯನ್‌ಷಿಪ್ ಗೆಲುವು
'ಉತ್ತಮ ಪ್ರದರ್ಶನದ ನಿಟ್ಟಿನಲ್ಲಿ ಸೈಮನ್ ಕಟಿಚ್ ಅವರು ತಂಡದ ಹೆಡ್‌ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಮುಖ್ಯಕೋಚ್ ಮತ್ತು ನಾಯಕನಾಗಿ ಟಿ20ಯಲ್ಲಿ ಬಹಳಷ್ಟು ಚಾಂಪಿಯನ್‌ಷಿಪ್‌ಗಳನ್ನು ಗೆದ್ದಿರುವುದರಿಂದ ಸೈಮನ್‌ಗೆ ಮುಖ್ಯ ಕೋಚ್ ಜವಾಬ್ದಾರಿ ನೀಡಲಾಗಿದೆ,' ಎಂದು ಆರ್‌ಸಿಬಿ ಹೇಳಿಕೆಯಲ್ಲಿ ತಿಳಿಸಿದೆ.

ಕಪ್ ಗೆಲ್ಲದ ತಂಡಗಳು
ಐಪಿಎಲ್ 12 ಆವೃತ್ತಿಗಳು ಇಲ್ಲೀವರೆಗೆ ನಡೆದಿದ್ದು, ಇದರಲ್ಲಿ ಒಂದು ಬಾರಿಯೂ ಟ್ರೋಫಿ ಗೆಲ್ಲದ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ XI ಪಂಜಾಬ್ ತಂಡಗಳು ಗುರುತಿಸಿಕೊಂಡಿವೆ. ಕಳೆದ ಬಾರಿ ಉತ್ತಮ ಪ್ರದರ್ಶನದ ನಿಟ್ಟಿನಲ್ಲಿ ಗ್ಯಾರಿ ಕಸ್ಟರ್ನ್ ಅವರನ್ನು ಮುಖ್ಯ ಕೋಚ್ ಆಗಿ ಆರ್‌ಸಿಬಿ ಆರಿಸಿತ್ತು. ಆದರೆ, ಅದರಿಂದ ಅಂಥ ಪ್ರಯೋಜನವೇನೂ ಕಂಡು ಬಂದಿರಲಿಲ್ಲ.

ಸೋಲಿನ ಮುಖಭಂಗ
2019ರ ಐಪಿಎಲ್ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡ ನಾಲ್ಕನೇ ಬಾರಿಗೆ ಟ್ರೋಫಿ ಗೆದ್ದು ಐಪಿಎಲ್‌ನಲ್ಲಿ ಅತೀ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದ್ದರೆ, ಆರ್‌ಸಿಬಿ ಆರಂಭಿಕ ಪಂದ್ಯಗಳಲ್ಲಿ ಸತತ ಸೋಲು ಕಂಡು ಮುಖಭಂಗ ಅನುಭವಿಸಿತ್ತು. 14 ಪಂದ್ಯಗಳಲ್ಲಿ 5 ಗೆಲುವುಗಳೊಂದಿಗೆ ಕಳೆದಸಾರಿ ಬೆಂಗಳೂರು ಅಂಕಪಟ್ಟಿಯ ತಳ ಸ್ಥಾನದಲ್ಲಿ ಟೂರ್ನಿ ಮುಗಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications