ಐಪಿಎಲ್ 2021 ದ್ವಿತೀಯ ಹಂತಕ್ಕೆ ಯುಎಇ ತಲುಪಿದ ಆರ್‌ಸಿಬಿ: ವಿಡಿಯೋ

ದುಬೈ: ಇದೇ ತಿಂಗಳು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದ್ವಿತೀಯ ಹಂತದ ಟೂರ್ನಿಗಾಗಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಸಿದ್ಧವಾಗಿದೆ. ಈಗಾಗಲೇ ಆರ್‌ಸಿಬಿ ಯುಎಇ ತಲುಪಿದೆ.
ಮಂಗಳವಾರ (ಆಗಸ್ಟ್ 31) ಆರ್‌ಸಿಬಿ ತಂಡ ದುಬೈಯಲ್ಲಿ ಬಂದಿಳಿದಿದೆ. ಆರು ದಿನಗಳ ಕ್ವಾರಂಟೈನ್ ಪಾಲಿಸಿದ ಬಳಿಕ ಆರ್‌ಸಿಬಿ ಅಭ್ಯಾಸ ಆರಂಭಿಸಲಿದೆ. ಭಾರತದಿಂದ ಯುಎಇಗೆ ಪ್ರಯಾಣಿಸಿರುವ ಬಗ್ಗೆ ಆರ್‌ಸಿಬಿ ಸಾಮಾಜಿಕಿ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದೆ. ತಂಡದ ನಾಯಕ ವಿರಾಟ್ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವುದರಿಂದ ಅವರು ವಿಡಿಯೋದಲ್ಲಿ ಕಾಣಿಸಿಕೊಂಡಿಲ್ಲ.
'ಬೋಲ್ಡ್ ಡೈರಿ' ಹೆಸರಿನಲ್ಲಿ ಆರ್‌ಸಿಬಿ ವಿಡಿಯೋ ಹಂಚಿಕೊಂಡಿದ್ದು, ದ್ವಿತೀಯ ಹಂತದ ಐಪಿಎಲ್ ಟೂರ್ನಿಗಾಗಿ ತಂಡ ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಅನ್ನೋದನ್ನು ವಿಡಿಯೋ ಮೂಲಕ ಚಿತ್ರಣ ನೀಡಲಾಗಿದೆ. ಭಾರತದಿಂದ ಹೊರಟು ಯುಎಇ ತಲುಪುವಾಗಿನ ಎಲ್ಲಾ ಚಿತ್ರಣಗಳು ಈ ವಿಡಿಯೋದಲ್ಲಿದೆ.
ಸೆಪ್ಟೆಂಬರ್ 19ರಂದು ಆರಂಭಗೊಳ್ಳುವ ಐಪಿಎಲ್ ದ್ವಿತೀಯ ಹಂತದ ಟೂರ್ನಿ ಅಕ್ಟೋಬರ್ 15ರಂದು ಕೊನೆಗೊಳ್ಳಲಿದೆ. ಐಪಿಎಲ್ ಆರಂಭಿಕ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಐಪಿಎಲ್ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿತ್ತು. 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 2ರಲ್ಲಿ ಸೋತು -0.171 ರೇಟಿಂಗ್ ಪಾಯಿಂಟ್ಸ್ ಕಲೆ ಹಾಕಿತ್ತು. ಸೆಪ್ಟೆಂಬರ್ 20ರಂದು ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications