Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಅಭ್ಯಾಸ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

Royal Challengers Bangalore begin training ahead of IPL 2021

ಬೆಂಗಳೂರು: 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ಗಾಗಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಭ್ಯಾಸ ಆರಂಭಿಸಿದೆ. ಏಪ್ರಿಲ್ 9ರಿಂದ ಆರಂಭವಾಗುವ 14ನೇ ಆವೃತ್ತಿಯ ಐಪಿಎಲ್ ಮೇ 30ರಂದು ಕೊನೆಗೊಳ್ಳಲಿದೆ.

ಈ ಐಪಿಎಲ್ ಸೀಸನ್‌ಗಾಗಿ ಅಭ್ಯಾಸ ಆರಂಭಿಸಿರುವ ಆರ್‌ಸಿಬಿ ತಂಡದಲ್ಲಿ ಯುಜುವೇಂದ್ರ ಚಾಹಲ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್ ಸೇರಿ ಒಟ್ಟು 11 ಆಟಗಾರರಿದ್ದಾರೆ. ಆಟಗಾರರಿಗೆ ತಂಡದ ಮುಖ್ಯ ಕೋಚ್ ಮೈಕ್ ಹೆಸನ್ ಮತ್ತು ಕ್ರಿಕೆಟ್ ನಿರ್ದೇಶಕ ಸೈಮನ್ ಕಟಿಚ್ ಮಾರ್ಗದರ್ಶನ ನೀಡುತ್ತಿದ್ದಾರೆ.

ಇನ್ನುಳಿದ ಆಟಗಾರರು ಅವರ ಏಳು ದಿನಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ಏಪ್ರಿಲ್ 1ರ ಗುರುವಾರ ನಾಯಕ ವಿರಾಟ್ ಕೊಹ್ಲಿ ತಂಡ ಸೇರಿಕೊಳ್ಳಲಿದ್ದಾರೆ. ಭಾರತ-ಇಂಗ್ಲೆಂಡ್ ಏಕದಿನ ಸರಣಿ ಮುಗಿಸಿರುವ ಕೊಹ್ಲಿ ಐಪಿಎಲ್‌ಗೆ ಸಜ್ಜಾಗಿದ್ದಾರೆ.

'ಚೆನ್ನೈಯ ಶ್ರೀ ರಾಮಚಂದ್ರ ಇನ್‌ಸ್ಟಿಟ್ಯೂಟ್ ಆಫ್‌ ಹೈಯರ್ ಎಜುಕೇಶನ್ ಆ್ಯಂಡ್ ರೀಸರ್ಚ್ ಸೆಂಟರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಇಂದಿನಿಂದ 9 ದಿನಗಳ ಟ್ರೇನಿಂಗ್ ಕ್ಯಾಂಪ್‌ ಆರಂಭವಾಗಿದೆ,' ಎಂದು ಫ್ರಾಂಚೈಸಿ ತಿಳಿಸಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಾದಾಡಲಿವೆ.

Story first published: Wednesday, March 31, 2021, 10:41 [IST]
Other articles published on Mar 31, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+