ಐಪಿಎಲ್ ಇತಿಹಾಸದಲ್ಲೇ ಬಲು ಅಪರೂಪದ ದಾಖಲೆಗಳ ಬರೆದ ಆರ್‌ಸಿಬಿ!

ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 18) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 38 ರನ್ ಜಯ ಗಳಿಸಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಎಬಿ ಡಿ ವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ವಿರಾಟ್ ಕೊಹ್ಲಿ ಪಡೆ ಈ ಸೀಸನ್‌ನ ಮೂರನೇ ಗೆಲುವು ದಾಖಲಿಸಿದೆ. ಇದರೊಂದಿಗೆ ಆರ್‌ಸಿಬಿ ಅಪರೂಪದ ದಾಖಲೆಗಳಿಗೂ ಕಾರಣವಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆರ್‌ಸಿಬಿಯಿಂದ ಗ್ಲೆನ್ ಮ್ಯಾಕ್ಸ್‌ವೆಲ್ 78 (49) ಮತ್ತು ಎಬಿ ಡಿ ವಿಲಿಯರ್ಸ್ 76 (34) ರನ್ ಸೇರಿದರು. ಅಲ್ಲದೆ ಕೈಲ್ ಜೇಮಿಸನ್ 3, ಯುಜುವೇಂದ್ರ ಚಾಹಲ್ 2, ಹರ್ಷಲ್ ಪಟೇಲ್ 2 ವಿಕೆಟ್ ಪಡೆದರು. ಹೀಗಾಗಿಯೇ ಆರ್‌ಸಿಬಿ ಗೆಲುವಿನೋಟ ಮುಂದುವರೆಸಲು ಸಾಧ್ಯವಾಯ್ತು.

ಹಿಂದಿನ ಸೋಲಿಗೆ ತಿರುಗೇಟು
ಸುಮಾರು 13 ವರ್ಷಗಳ ಹಿಂದೆ ಅಂದರೆ ಇದೇ 18 ಏಪ್ರಿಲ್ 2008ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 140 ರನ್‌ಗಳ ಹೀನಾಯ ಸೋಲು ಕಂಡಿತ್ತು. ಅಂದು ಕೆಕೆಆರ್ 222 ರನ್ ಗಳಿಸಿದ್ದರೆ ಆರ್‌ಸಿಬಿ 82 ರನ್ ಬಾರಿಸಿತ್ತು. ಆದರೆ ಈ ಸಾರಿ ಅದೇ ಏಪ್ರಿಲ್ 18ರ ದಿನ ಕೆಕೆಆರ್ ವಿರುದ್ಧ 38 ರನ್ ಜಯ ಗಳಿಸಿದೆ. ಆರ್‌ಸಿಬಿ 204 ರನ್ ಗಳಿಸಿದ್ದರೆ, ಕೆಕೆಆರ್ 166 ರನ್ ಬಾರಿಸಿ ತಲೆಬಾಗಿದೆ.

ಬಲು ಅಪರೂಪದ ದಾಖಲೆ
ಐಪಿಎಲ್ ಇತಿಹಾಸದಲ್ಲೇ ಆರ್‌ಸಿಬಿ ತಂಡ ಟೂರ್ನಿಯ ಆರಂಭದಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದ ದಾಖಲೆಯಿಲ್ಲ. ಆದರೆ ಈ ಬಾರಿ ಆರ್‌ಸಿಬಿ ಟೂರ್ನಿ ಆರಂಭದಲ್ಲೇ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಗೆಲುವಿನ ಹುಮ್ಮಸ್ಸಿನಲ್ಲಿದೆ. ಆರ್‌ಸಿಬಿ ಈ ಆಟ ನೋಡಿದರೆ ಈ ಸೀಸನ್‌ನಲ್ಲಿ ಬೆಂಗಳೂರು ಕಪ್ ಗೆದ್ದರೂ ಅಚ್ಚರಿಯಿಲ್ಲ.

ಟೇಬಲ್‌ನಲ್ಲಿ ಅಗ್ರಸ್ಥಾನಿ
ಪಾಯಿಂಟ್ ಟೇಬಲ್‌ನಲ್ಲಿ ಈ ಸಾರಿ ಆರ್‌ಸಿಬಿ ಆರಂಭದಿಂದಲೇ ಅಗ್ರಸ್ಥಾನಿಯಾಗಿ ಮುಂದುವರೆಯುತ್ತಿದೆ. 3ರಲ್ಲಿ 3 ಪಂದ್ಯ ಗೆದ್ದಿರುವ ಆರ್‌ಸಿಬಿ 6 ಪಾಯಿಂಟ್ಸ್, +0.750 ನೆಟ್ ರನ್‌ರೇಟ್‌ನೊಂದಿಗೆ ನಂ.1 ಸ್ಥಾನದಲ್ಲಿದೆ. ದ್ವಿತೀಯ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ಇದೆ.

ಆರೆಂಜ್, ಪರ್ಪಲ್ ಕ್ಯಾಪ್
ಇಲ್ಲೀವರೆಗಿನ ಪಂದ್ಯಗಳ ಫಲಿತಾಂಶದ ಆಧಾರದಲ್ಲಿ ಅತ್ಯಧಿಕ ವಿಕೆಟ್ ಮತ್ತು ಅತ್ಯಧಿಕ ರನ್ ಬಾರಿಸಿರುವ ಎರಡೂ ಆಟಗಾರರು ಆರ್‌ಸಿಬಿ ತಂಡದಲ್ಲಿದ್ದಾರೆ. 3 ಪಂದ್ಯಗಳಲ್ಲಿ 176 ರನ್ ಗಳಿಸಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಅತ್ಯಧಿಕ ರನ್‌ಗಾಗಿ ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದಾರೆ. 3 ಪಂದ್ಯಗಳಲ್ಲಿ 9 ವಿಕೆಟ್ ಗಳೊಂದಿಗೆ ಆರ್‌ಸಿಬಿ ಬೌಲರ್ ಹರ್ಷಲ್ ಪಟೇಲ್ ಅತ್ಯಧಿಕ ವಿಕೆಟ್‌ಗಾಗಿ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications