ಐಪಿಎಲ್ 2020; ತಂಡದ ಕಿಟ್‌ನ ಫಸ್ಟ್‌ಲುಕ್ ಬಿಡುಗಡೆ ಮಾಡಿದ ಆರ್‌ಸಿಬಿ

ಎಲ್ಲಾ ಐಪಿಎಲ್ ತಂಡಗಳು ಕೂಡ ಈಗ ಯುಎಇಗೆ ತಲುಪಿದ್ದು ಅಲ್ಲಿ 7 ದಿನಗಳ ಕ್ವಾರಂಟೈನ್‌ನಲ್ಲಿದೆ. ಹೀಗಾಗಿ ಆಟಗಾರರು ತಮಗೆ ನಿಗದಿಪಡಿಸಿದ ಹೋಟೆಲ್‌ಗಳಲ್ಲೇ ಉಳಿದುಕೊಂಡಿದ್ದಾರೆ. ಈ ಮಧ್ಯೆ ಅಭಿಮಾನಿಗಳ ಪ್ರೀತಿಯ ಆರ್‌ಸಿಬಿ ತಂಡ ತನ್ನ ಈ ಬಾರಿಯ ಜರ್ಸಿ ಹೇಗಿರಲಿದೆ ಎಂಬ ಕುತೂಹಲಕ್ಕೆ ತೆರೆ ಎಳೆದಿದೆ.
ಹೌದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಿಟ್‌ನ ಮೊದಲ ದೃಶ್ಯವನ್ನು ಆರ್‌ಸಿಬಿ ತನ್ನ ಟ್ವಿಟ್ಟರ್‌ನಲ್ಲಿ ಬಿಡುಗಡೆಗೊಳಿಸಿದೆ. ಜೆವೆನ್ ಆರ್‌ಸಿಬಿ ತಂಡದ ಕಿಟ್ ಡಿಸೈನ್ ಮಾಡಿದ್ದು 2016ರಿಂದ ಆರ್‌ಸಿಬಿಯ ಅಧಿಕೃತ ತಯಾರಕರಾಗಿದ್ದಾರೆ. ಅದಕ್ಕೂ ಮುನ್ನ ಅಡಿಡಾಸ್ ಆರ್‌ಸಿಬಿಯ ಕಿಟ್ ತಯಾರಕನಾಗಿತ್ತು.
ಕಳೆದ ಬಾರೊಯಂತೆಯೇ ಈ ಬಾರಿಯೂ ಆರ್‌ಸಿಬಿ ಜರ್ಸಿ ಕೆಂಪು ಹಾಗೂ ಕಪ್ಪು ಬಣ್ಣದೊಂದಿಗೆ ಕಂಗೊಳಿಸುತ್ತಿದೆ. ತಂಡದ ಲೋಗೋ ಸ್ವರ್ಣ ವರ್ಣದಿಂದ ಮಿಂಚುತ್ತಿದ್ದರೆ ಉಳಿದ ಪ್ರಾಯೋಜಕತ್ವದ ಬಿಳಿ ಬಣ್ಣದಲ್ಲಿ ಡಿಸೈನ್ ಮಾಡಲಾಗಿದೆ.
ಇನ್ನು ಜರ್ಸಿಯಲ್ಲಿ ಈ ಬಾರಿ ಪ್ರಮುಖ ಬದಲಾವಣೆಯೆಂದರೆ ಆರ್‌ಸಿಬಿಯ ಟೈಟರ್ ಸ್ಪಾನ್ಸರ್ ಆಗಿ ಮುತ್ತೂಟ್ ಫಿನ್‌ಕಾರ್ಪ್ ಕಾಣಿಸಿಕೊಂಡಿದೆ. 'ವ್ರಾಗ್ನ್' ಸ್ಥಾನವನ್ನು ಈ ಬಾರಿ ಮುತ್ತೂಟ್ ಫಿನ್‌ಕಾರ್ಪ್ ಗಳಿಸಿಕೊಂಡಿದೆ.
ಇನ್ನು ಕಳೆದ ಬಾರಿಯಂತೆ ಈ ಬಾರಿ ತವರು ಅಂಗಳದಲ್ಲಿ ಹಾಗೂ ಎದುರಾಳಿ ಅಂಗಳದಲ್ಲಿ ಎಂದು ಪ್ರತ್ಯೇಕ ಜರ್ಸಿ ಇರುವುದಿಲ್ಲ. ಈ ಬಾರಿಯ ಎಲ್ಲಾ ಪಂದ್ಯಗಳು ಯುಎಇನಲ್ಲಿ ತಟಸ್ಥ ಅಂಗಳದಲ್ಲಿ ನಡೆಯುತ್ತಿದೆ. ಹಾಗಾಗಿ ಒಂದೇ ಮಾದರಿಯ ಜರ್ಸಿಯಲ್ಲಿ ಈ ಬಾರಿಯ ಆವೃತ್ತಿಯನ್ನು ಆರ್‌ಸಿಬಿ ತಂಡ ಪೂರ್ಣಗೊಳಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications