Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ : ಆರ್ ಸಿಬಿ ತೆಕ್ಕೆಗೆ ಕೆಎಲ್ ರಾಹುಲ್, ರಸೂಲ್

ಬೆಂಗಳೂರು, ಫೆ. 16: ಕರ್ನಾಟಕದ ಆರಂಭಿಕ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಆಲ್ ರೌಂಡರ್ ಪರ್ವೇಜ್ ರಸೂಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಕೆಎಲ್ ರಾಹುಲ್ ಹಾಗೂ ಪರ್ವೇಜ್ ರಸೂಲ್ ಅವರು ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನಲ್ಲಿ ಸನ್ ರೈಸರ್ಸ್ ಹೈದರಾಬಾದ್ (ಎಸ್ ಆರ್ ಎಚ್) ಪರ ಆಡುತ್ತಿದ್ದರು. [ಐಪಿಎಲ್ 2016: ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ?]

IPL 2016: Royal Challengers Bangalore sign KL Rahul, Parvez Rasool

2016ರ ಸೀಸನ್ ನಲ್ಲಿ ಈ ಇಬ್ಬರು ಆಟಗಾರರು ಆರ್ ಸಿಬಿ ತಂಡದ ಪರ ಆಡಲು ಸಹಿ ಹಾಕಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ (ಫೆಬ್ರವರಿ 16) ಪ್ರಕಟಿಸಿದ್ದಾರೆ.
2014ರಲ್ಲಿ ಸನ್ ರೈಸರ್ಸ್ ತಂಡ 1 ಕೋಟಿ ರು ಮೊತ್ತಕ್ಕೆ ಕೆಎಲ್ ರಾಹುಲ್ ರನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಕರ್ನಾಟಕದ ಆಟಗಾರರ ರಾಹುಲ್ ಅವರು ಬೆಂಗಳೂರು ತಂಡದಲ್ಲೇ ಇದ್ದರು. 23 ವರ್ಷ ವಯಸ್ಸಿನ ಬಲಗೈ ಬ್ಯಾಟ್ಸ್ ಮನ್ ಹಾಗೂ ವಿಕೆಟ್ ಕೀಪರ್ ರಾಹುಲ್ ಅವರು ಭಾರತ ಪರ 5 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ.

ರಸೂಲ್ ಅವರು ಜಮ್ಮು ಮತ್ತು ಕಾಶ್ಮೀರ ಪರ ಆಡುವ ಈ ಮುಂಚೆ ಪುಣೆ ವಾರಿಯರ್ಸ್ ಪರ ಆಡಿದ್ದರು. 2014ರಲ್ಲಿ 95 ಲಕ್ಷ ರು ಕೊಟ್ಟು ಸನ್ ರೈಸರ್ಸ್ ತಂಡ ಕೊಂಡುಕೊಂಡಿತ್ತು. 27 ವರ್ಷ ವಯಸ್ಸಿನ ರಸೂಲ್ ಅವರು ಭಾರತ ಪರ 1 ಏಕದಿನ ಕ್ರಿಕೆಟ್ ಪಂದ್ಯವಾಡಿದ್ದಾರೆ. ಐಪಿಎಲ್ 2016 ಏಪ್ರಿಲ್ 9, 2016 ರಿಂದ ಮೇ 29, 2016ರ ತನಕ ನಡೆಯಲಿದೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+